ಚಡ್ಡಿ ಸುಡುವ ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ತಿರುಗೇಟು; ಸಿದ್ದರಾಮಯ್ಯ, ನಲಪಾಡ್ಗೆ ಚಡ್ಡಿ ಪೋಸ್ಟ್ ಮಾಡಿದ ಕಾರ್ಯಕರ್ತರು
ಚಡ್ಡಿ ಸುಟ್ಟು ಹಾಕುತ್ತೇವೆಂದು ಸಿದ್ದರಾಮಯ್ಯ ಹೇಳಿಕೆ ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಆರ್ಎಸ್ಎಸ್ನ ಖಾಕಿ ಚಡ್ಡಿಯನ್ನ ಕಾರ್ಯಕರ್ತರು ಪಾರ್ಸಲ್ ಮಾಡಿದ್ದಾರೆ.
ಮೈಸೂರು: ಆರ್ಎಸ್ಎಸ್ (RSS) ಚಡ್ಡಿ ಸುಡುವ ಕಾಂಗ್ರೆಸ್ ಅಭಿಯಾನದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಬಿಜೆಪಿ ನಾಯಕರು ಈಗಾಗಲೇ ಗರಂ ಆಗಿದ್ದಾರೆ. ಈ ನಡುವೆ ಕಾಂಗ್ರೆಸ್ಗೆ ಬಿಜೆಪಿ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಮತ್ತು ನಲಪಾಡ್ಗೆ ಬಿಜೆಪಿ ಕಾರ್ಯಕರ್ತರು ಚಡ್ಡಿ ಕಳುಹಿಸಿದ್ದಾರೆ. ಮೈಸೂರು ಕೇಂದ್ರ ಅಂಚೆ ಕಚೇರಿಯಿಂದ ಇಬ್ಬರಿಗೂ ಕಾರ್ಯಕರ್ತರು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಚಡ್ಡಿ ಪೋಸ್ಟ್ ಮಾಡಿದ್ದಾರೆ. ನಿನ್ನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಆರ್ಎಸ್ಎಸ್ ಕಾರ್ಯಕರ್ತರು ಕೂಡಾ ಮನೆ ಮನೆಗೆ ತೆರಳಿ ಚಡ್ಡಿ ಸಂಗ್ರಹಿಸಿ, ಸಿದ್ದರಾಮಯ್ಯಗೆ ಪಾರ್ಸಲ್ ಮಾಡಿದ್ದರು.
ಚಡ್ಡಿ ಸುಟ್ಟು ಹಾಕುತ್ತೇವೆಂದು ಸಿದ್ದರಾಮಯ್ಯ ಹೇಳಿಕೆ ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಆರ್ಎಸ್ಎಸ್ನ ಖಾಕಿ ಚಡ್ಡಿಯನ್ನ ಕಾರ್ಯಕರ್ತರು ಪಾರ್ಸಲ್ ಮಾಡಿದ್ದಾರೆ. ಜೀವನ ಪೂರ್ತಿ ಕಾಲ ಕಳೆದರು ನಮ್ಮ ಚಡ್ಡಿ ಸುಟ್ಟು ಹಾಕಲು ಆಗಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ವಿ.ಸೋಮಣ್ಣ ಹೇಳಿದ್ದೇನು? ಆರ್ಎಸ್ಎಸ್ ಈ ದೇಶಕ್ಕೆ ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತಿದೆ ಎಂದು ಮೈಸೂರಿನಲ್ಲಿ ಮಾತನಾಡಿದ ವಸತಿ ಇಲಾಖೆ ಸಚಿವ ವಿ.ಸೋಮಣ್ಣ, ಕೆಲವು ಸೂಕ್ಷ್ಮ ವಿಚಾರ ಮಾತನಾಡದಂತೆ ಆದೇಶ ಬಂದಿದೆ. ಹೀಗಾಗಿ ಸೂಕ್ಷ್ಮ ವಿಚಾರಗಳ ಬಗ್ಗೆ ನಾನು ಮಾತಾಡುವುದಿಲ್ಲ. ದೇಶದ ಪ್ರತಿ ಕಣಕಣದಲ್ಲೂ ಆರ್ಎಸ್ಎಸ್ನ ಕೊಡುಗೆ ಇದೆ. ಕೆಲವರ ನಂಬಿಕೆಗಳಿಗೆ ಅಪಮಾನ ಮಾಡುವುದು ಸರಿಯಲ್ಲ. ಹಾದಿ ಬೀದಿ ಜಗಳ ಆಗಬಾರದು, ಸುಖಾಂತ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ಜನರಿಂದ ಸಂಗ್ರಹಿಸಿದ ಚಡ್ಡಿಗಳನ್ನು ಸಿದ್ದರಾಮಯ್ಯ ಮನೆಗೆ ತಲುಪಿಸುವ ಆಂದೋಲನವನ್ನು ಬಿಜೆಪಿ ಹಮ್ಮಿಕೊಂಡಿದೆ. ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯ ಮನೆಗೆ ತೆರಳುತ್ತಾರೆ.
ಕೆಪಿಸಿಸಿ ಕಚೇರಿಗೆ ಹಳೇ ಚಡ್ಡಿಗಳ ಪೋಸ್ಟ್: ಚಿಕ್ಕಮಗಳೂರು ಬಿಜೆಪಿ ಘಟಕದಿಂದ ಕೆಪಿಸಿಸಿ ಕಚೇರಿಗೆ ಸಿದ್ದರಾಮಯ್ಯ ಹೆಸರಿನಲ್ಲಿ ಹಳೇ ಚಡ್ಡಿಗಳ ಪೋಸ್ಟ್ ಮಾಡಲಾಗಿದೆ. ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಸಿದ್ದರಾಮಯ್ಯ, ಡಿಕೆ. ಶಿವಕುಮಾರ್, ನಲಪಾಡ್ ವಿರುದ್ಧ ಘೋಷಣೆ ಕೂಗಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:41 pm, Tue, 7 June 22