ನವ ದಂಪತಿ ಆತ್ಮಹತ್ಯೆಗೆ ಯತ್ನ, ಪೊಲೀಸರ ಸಮಯಪ್ರಜ್ಞೆಯಿಂದ ಪಾರು
ಬೆಂಗಳೂರು: ಬೆಂಗಳೂರಿನ ಗಿರಿನಗರ ಮನೆಯಲ್ಲಿ ನವ ದಂಪತಿ ತಡರಾತ್ರಿ ಚಾಕುವಿನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಸ್ತಿನಲ್ಲಿದ್ದ ಗಿರಿನಗರ ಸಬ್ ಇನ್ಸ್‌ಪೆಕ್ಟರ್ ವಿನಯ್ ಮತ್ತು ಸಿಬ್ಬಂದಿ, ವಿಷಯ ತಿಳಿದ ಕೂಡಲೇ ದಂಪತಿಯನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರಚಿಕಿತ್ಸೆ ಬಳಿಕ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ, ಮೂರು ತಿಂಗಳ ಹಿಂದೆ ಅಷ್ಟೇ ಮದುವೆಯಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿರುವ […]
ಬೆಂಗಳೂರು: ಬೆಂಗಳೂರಿನ ಗಿರಿನಗರ ಮನೆಯಲ್ಲಿ ನವ ದಂಪತಿ ತಡರಾತ್ರಿ ಚಾಕುವಿನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಸ್ತಿನಲ್ಲಿದ್ದ ಗಿರಿನಗರ ಸಬ್ ಇನ್ಸ್‌ಪೆಕ್ಟರ್ ವಿನಯ್ ಮತ್ತು ಸಿಬ್ಬಂದಿ, ವಿಷಯ ತಿಳಿದ ಕೂಡಲೇ ದಂಪತಿಯನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರಚಿಕಿತ್ಸೆ ಬಳಿಕ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ, ಮೂರು ತಿಂಗಳ ಹಿಂದೆ ಅಷ್ಟೇ ಮದುವೆಯಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.
Published On - 11:24 am, Wed, 4 December 19