AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಬಂದ ಮೋಸ್ಟ್​ ವಾಂಟೆಡ್ ಗ್ಯಾಂಗ್​ಸ್ಟರ್: ಭೂಗತ ಪಾತಕಿಗೆ ಖಾಕಿ ಡ್ರಿಲ್!

ಬೆಂಗಳೂರು: ಅಂಡರ್​ ವರ್ಲ್ಡ್​​​ನಲ್ಲಿ ಅಂದರ್ ಬಾಹರ್ ಆಟ ಆಡಿ.. ಪಾತಕ ಲೋಕದಲ್ಲಿ ಪಾಪದ ಕೆಲ್ಸ ಮಾಡಿ.. ಭೂಗತ ಲೋಕದಲ್ಲಿ ಭಯ ಹುಟ್ಟಿಸಿ.. ಮೈ ಹೂ ಡಾನ್​ ಅಂತ ಮೆರೆಯುತ್ತಿದ್ದ ಮೋಸ್ಟ್ ವಾಂಟೆಂಡ್ ಗ್ಯಾಂಗ್​​​ ಸ್ಟಾರ್ ರವಿ ಪೂಜಾರಿ.. ಮೈ ತುಂಬಾ ಪಾಪದ ರಕ್ತದ ಕಲೆ ಅಂಟಿಸ್ಕೊಂಡು ಹೆಜ್ಜೆ ಹಾಕ್ತಿದ್ದ ಪಾತಕಿ ರವಿ ಪೂಜಾರಿ ಕರ್ನಾಟಕ ಖಾಕಿ ಕೈಯಲ್ಲಿ ಸಿಲುಕಿ ವಿಲ ವಿಲ ಅಂತಿದ್ದಾನೆ. ಪಾತಕಿ ರವಿ ಪೂಜಾರಿಯನ್ನ ಬೆಂಗಳೂರಿಗೆ ಕರೆತಂದ ಖಾಕಿ..! ಭೂಗತ ಲೋಕದಲ್ಲಿ ಪಾತಕ ಕೃತ್ಯ […]

ಬೆಂಗಳೂರಿಗೆ ಬಂದ ಮೋಸ್ಟ್​ ವಾಂಟೆಡ್ ಗ್ಯಾಂಗ್​ಸ್ಟರ್: ಭೂಗತ ಪಾತಕಿಗೆ ಖಾಕಿ ಡ್ರಿಲ್!
Follow us
ಸಾಧು ಶ್ರೀನಾಥ್​
|

Updated on:Feb 24, 2020 | 2:55 PM

ಬೆಂಗಳೂರು: ಅಂಡರ್​ ವರ್ಲ್ಡ್​​​ನಲ್ಲಿ ಅಂದರ್ ಬಾಹರ್ ಆಟ ಆಡಿ.. ಪಾತಕ ಲೋಕದಲ್ಲಿ ಪಾಪದ ಕೆಲ್ಸ ಮಾಡಿ.. ಭೂಗತ ಲೋಕದಲ್ಲಿ ಭಯ ಹುಟ್ಟಿಸಿ.. ಮೈ ಹೂ ಡಾನ್​ ಅಂತ ಮೆರೆಯುತ್ತಿದ್ದ ಮೋಸ್ಟ್ ವಾಂಟೆಂಡ್ ಗ್ಯಾಂಗ್​​​ ಸ್ಟಾರ್ ರವಿ ಪೂಜಾರಿ.. ಮೈ ತುಂಬಾ ಪಾಪದ ರಕ್ತದ ಕಲೆ ಅಂಟಿಸ್ಕೊಂಡು ಹೆಜ್ಜೆ ಹಾಕ್ತಿದ್ದ ಪಾತಕಿ ರವಿ ಪೂಜಾರಿ ಕರ್ನಾಟಕ ಖಾಕಿ ಕೈಯಲ್ಲಿ ಸಿಲುಕಿ ವಿಲ ವಿಲ ಅಂತಿದ್ದಾನೆ.

ಪಾತಕಿ ರವಿ ಪೂಜಾರಿಯನ್ನ ಬೆಂಗಳೂರಿಗೆ ಕರೆತಂದ ಖಾಕಿ..! ಭೂಗತ ಲೋಕದಲ್ಲಿ ಪಾತಕ ಕೃತ್ಯ ಎಸಗಿ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಕ್ಕೆ ರವಿ ಪೂಜಾರಿ ರಾಜಾರೋಷವಾಗಿ ಓಡಾಡ್ಕೊಂಡಿದ್ದ. ಸದ್ಯ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ನ್ನು ಕರುನಾಡ ಪೊಲೀಸರು ಭಾರತಕ್ಕೆ ಕರೆತಂದಿದ್ದಾರೆ. ತಡರಾತ್ರಿ 12:40ಕ್ಕೆ ಕೆಐಎಎಲ್​ಗೆ ಆಗಮಿಸಿದ್ದ ಏರ್​ಫ್ರಾನ್ಸ್ AF-194 ವಿಮಾನದಲ್ಲಿ ಭೂಗತ ಪಾತಕಿಯನ್ನ ಕರೆ ತರಲಾಯ್ತು. ಇತರೆ ಪ್ರಯಾಣಿಕರು ನಿರ್ಗಮನದ ಬಳಿಕ ಮಧ್ಯರಾತ್ರಿ 1:47ರ ಸುಮಾರಿಗೆ ಏರ್​​​ಪೋರ್ಟ್​​ನಿಂದ ರವಿ ಪೂಜಾರಿಯನ್ನ ಹೊರಗೆ ಕರೆ ತರಲಾಯ್ತು. ಈ ವೇಳೇ ಕೆಐಎಎಲ್​ ಸುತ್ತಮುತ್ತ ಬಿಗಿ ಭದ್ರತೆ ನಿಯೋಜಿಸಲಾಗಿತ್ತು.

ಇಂದು ಗ್ಯಾಂಗ್​​ಸ್ಟರ್ ರವಿ ಪೂಜಾರಿ ಕೋರ್ಟ್​​ಗೆ ಹಾಜರು..! ಬಿಗಿ ಪೊಲೀಸ್ ಬಂದೋಬಸ್ತ್ ರವಿಪೂಜಾರಿಯನ್ನ ಕರೆ ತಂದಿರೋ ಕರ್ನಾಟಕ ಪೊಲೀಸ್ರು. ಆತನನ್ನೆ ನೇರವಾಗಿ ಮಡಿವಾಳದ ಇಂಟರಾಗೇಷನ್ ಕಚೇರಿಗೆ ಕರೆದೊಯ್ಯಲಾಯ್ತು. ಇಂದು ಮೋಸ್ಟ್ ವಾಂಟೆಂಡ್ ಕ್ರಿಮಿ ರವಿ ಪೂಜಾರಿಯನ್ನ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೇಳಲಿದ್ದಾರೆ. ಇನ್ನೊಂದೆಡೆ ಐಎನ್​ಎ ಹಾಗೂ ರಾ ತನಿಖಾ ತಂಡ ಕೂಡ ಹಲವು ವರ್ಷಗಳಿಂದ ಪಾತಕಿಯ ಹುಡುಕಾಟದಲ್ಲಿತ್ತು. ಇದೀಗ ಕರ್ನಾಟಕ ಖಾಕಿ ಕೈಗೆ ಲಾಕ್ ಆಗಿರೋ ರವಿ ಪೂಜಾರಿಯನ್ನ ಈ ತನಿಖಾ ತಂಡ ವಿಚಾರಣೆ ನಡೆಸಲಿದೆ.

‘ಪಾತಕಿ ಪಾಪ’ದ ಕೆಲಸ..! ಅಂಡರ್​ವರ್ಲ್ಡ್​​ನಲ್ಲಿ ಕೊಲೆ, ಸುಲಿಗೆ ಹಾಗೂ ಬೆದರಿಕೆ ಪ್ರಕರಣಗಳಲ್ಲಿ ರವಿ ಪೂಜಾರಿ ಭಾಗಿಯಾಗಿದ್ದಾನೆ. ರಾಜಕಾರಣಿಗಳು, ಸಿನಿಮಾ ನಟರು, ಉದ್ಯಮಿಗಳನ್ನ ಟಾರ್ಗೆಟ್ ಮಾಡ್ತಿದ್ದ ಕ್ರಿಮಿ ಕರೆ ಮಾಡಿ ಬೆದರಿಕೆ ಹಾಕಿದ್ದ. ಅಲ್ಲದೇ ಹಣಕ್ಕಾಗಿ ಬೇಡಿ ಇಡುತ್ತಿದ್ದ. ರವಿ ಪೂಜಾರಿ ವಿರುದ್ಧ ಮಂಗಳೂರಿನಲ್ಲಿ 39 ಕೇಸ್​​ಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 38 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಅಲ್ಲದೇ ಪಶ್ಚಿಮ ಆಫ್ರಿಕಾದ ಸೆನೆಗಲ್​​ನಲ್ಲಿ ನಕಲಿ ಪಾಸ್​ಪೋರ್ಟ್ ಹೊಂದಿದ್ದ ಹಿನ್ನೆಯಲ್ಲಿ ಲಾಕ್ ಆಗಿದ್ದ.

ರವಿ ಪೂಜಾರಿ ಇತಿಹಾಸ..! ಮೂಲತಃ ಉಡುಪಿ ಜಿಲ್ಲೆ ಉಡುಪಿ ಜಿಲ್ಲೆ ಮಲ್ಪೆಯ ಕಲ್ಮಾಡಿ ಗ್ರಾಮದ ನಿವಾಸಿಯಾಗಿದ್ದ ಪಾತಕಿ ರವಿ ಪೂಜಾರಿ ಚಿಕ್ಕವನಿದ್ದಾಗಲೇ ಹಲವು ಕ್ರೈಂಗಳನ್ನ ಮಾಡಿದ್ದ. ಅರ್ಧದಲ್ಲಿಯೇ ಶಾಲೆ ಬಿಟ್ಟು ಮುಂಬೈಗೆ ಹೋಗಿದ್ದ ಕ್ರಿಮಿ, ಡ್ಯಾನ್ಸ್ ಬಾರ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಬಳಿಕ ಮುಂಬೈನ ಅಂಧೇರಿಯಲ್ಲಿ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟಿದ್ದ. 1990ರಲ್ಲಿ ದುಬೈನಲ್ಲಿ ರಿಯಲ್​​​ ಎಸ್ಟೇಟ್ ದಂಧೆ ಮೂಲಕ ದೊಡ್ಡ ಹವಾ ಮಾಡಿದ್ದ. ಅಲ್ಲದೇ, ಕನ್ನಡ, ಇಂಗ್ಲಿಷ್, ಹಿಂದಿ ನಿರರ್ಗಳವಾಗಿ ಮಾತನಾಡುವ ಕಲೆ ಕೂಡ ಹೊಂದಿದ್ದಾನೆ.

ಒಟ್ನಲ್ಲಿ ಭೂಗತ ಜಗತ್ತಿನ ಮೂಲಕ ಎಲ್ಲರಿಗೂ ಭಯ ಹುಟ್ಟಿಸಿದ್ದ ಗ್ಯಾಂಗ್​ಸ್ಟರ್​ಗೆ ಕರ್ನಾಟಕ ಖಾಕಿ ಡ್ರಿಲ್ ಮಾಡ್ತಿದೆ. ಇಂದು ರವಿಪೂಜಾರಿಯನ್ನ ಕೋರ್ಟ್​​ಗೆ ಹಾಜರು ಪಡಿಸಲಿದ್ದು ಖಾಕಿ ಕಸ್ಟಡಿಗೆ ಕೇಳಲಿದೆ. ಇದರ ಜೊತೆಗೆ ಮುಂಬೈ, ಮಹಾರಾಷ್ಟ್ರ ಸೇರಿ ಹಲವಡೆ ಕೇಸ್​ಗಳಿದ್ದು ಪಾಪದ ಕೆಲಸ ಮಾಡಿದ್ದಕ್ಕ ತಕ್ಕ ಶಾಸ್ತಿ ಕಟ್ಟಿಟ್ಟ ಬುತ್ತಿ.

https://www.facebook.com/Tv9Kannada/videos/211993069854543/

Published On - 6:58 am, Mon, 24 February 20