
ಬೆಂಗಳೂರು. (ಆಗಸ್ಟ್ 26): ಕಸ್ತೂರಿ ರಂಗನ್ ವರದಿಯ (Kasthuri rangan report) ಹಿನ್ನೆಲೆಯಲ್ಲಿ ಪಶ್ಚಿಮಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಸರಕಾರವು ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈಗಾಗಲೇ ವಿಧಾನಸಭೆಯಲ್ಲಿ ಈ ವರದಿಯನ್ನು ತಿರಸ್ಕರಿಸುವ ತೀರ್ಮಾನ ಕೈಗೊಂಡಿದ್ದು, ಕೇಂದ್ರಕ್ಕೆ ಕಳುಹಿಸಿರುವುದರಿಂದ ಈ ವರದಿಯ ಜಾರಿ ಬಗ್ಗೆ ಆತಂಕ ಪಡಬೇಕಾಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ನಡೆದ ಚರ್ಚೆಗೆ ಉತ್ತರ ಕೊಡುವಾಗ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರದ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ಇದೆ. ರಾಜ್ಯ ಸರ್ಕಾರ ತನ್ನ ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ಕೇಂದ್ರದ ಅಧಿಸೂಚನೆಯನ್ನು ತಿರಸ್ಕರಿಸಲಾಗುತ್ತದೆ ಅಂದಿದ್ರು. ಕೇಂದ್ರ ಸರ್ಕಾರ ಮತ್ತೆ ಅಧಿಸೂಚನೆ ಹೊರಡಿಸಿರೋದು ಆ ಭಾಗದ ಶಾಸಕರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ ನಿಯಮ 69 ರಡಿ ಕೇಂದ್ರ ಹೊರಡಿಸಿದ ಏಳನೇ ಕರಡು ಅಧಿಸೂಚನೆ ವಿರೋಧಿಸಿ ಶಾಸಕರಾದ ಎ.ಎಸ್ ಪೊನ್ನಣ್ಣ, ತಮ್ಮಯ್ಯ, ಟಿ ಡಿ ರಾಜೇಗೌಡ ಚರ್ಚೆ ಮಾಡಿದ್ರು. ಶಾಸಕರು ವರದಿ ಜಾರಿಯಾದರೆ ಏನೆಲ್ಲ ಪರಿಣಾಮ ಆಗಲಿದೆ ಎಂದು ಹಲವು ಆತಂಕಗಳನ್ನು ವ್ಯಕ್ತಪಡಿಸಿದರು. ಸರ್ಕಾರ ಅಧಿಸೂಚನೆ ತಿರಸ್ಕರಿಸಬೇಕೆಂದು ಒತ್ತಾಯಿಸಿದರು.
ಇದರ ಮುಂದುವರಿದ ಭಾಗವಾಗಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಶಾಸಕರು, ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಲಾಯ್ತು. ಕಸ್ತೂರಿ ರಂಗನ್ ವರದಿ ಬಗ್ಗೆ ರಾಜ್ಯದ ನಿಲುವು ಮುಖ್ಯವಾಗುತ್ತೆ. ಕೇಂದ್ರ ಸರ್ಕಾರ 6 ತಿಂಗಳು ಸಮಯ ಕೊಟ್ಟಿದ್ದಾರೆ. 33 ತಾಲ್ಲೂಕು, ಸಾವಿರಕ್ಕೂ ಹೆಚ್ಚು ಗ್ರಾಮ ಬರುತ್ತೆ, 20608 ಚದರ ಮೀಟರ್ ಪ್ರದೇಶ ಇದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಸ್ಯೆ ಆಗ್ತಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕ್ಯಾಬಿನೆಟ್ ನಲ್ಲಿ ವಿರೋಧ ಮಾಡಿದ್ವಿ. ಈಗ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಪಶ್ಚಿಮ ಘಟ್ಟದ ವಿಚಾರದಲ್ಲಿ ಜನರಿಗೆ ನಾವು ಜಾಗೃತಿ ಮೂಡಿಸುತ್ತೇವೆ. ಮುಂದಿನ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕು. ಸೆ.26ರ ಸಭೆಯ ವಿರುದ್ಧವಾಗಿ ನಮ್ಮ ಅಭಿಪ್ರಾಯ ಕೇಂದ್ರ ತೆಗೆದುಕೊಂಡಿಲ್ಲ. ಮತ್ತೆ ಕೇಂದ್ರ ಸರ್ಕಾರ ವಿರುದ್ಧ ಏನು ಮಾಡಬೇಕೋ ಮಾಡುತ್ತೇವೆಂದು ಸಿಎಂ ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ ಕಾನೂನು ಚೌಕಟ್ಟಿನಲ್ಲಿ ಚರ್ಚೆ ಮಾಡುತ್ತೇವೆ. ಕರಡುನಲ್ಲಿ ಮರಳು ಸಾಗಾಣಿಕೆ, ವಿದ್ಯುತ್, ನಿರ್ಮಾಣ ಅನೇಕ ವಿಚಾರ ಪ್ರಸ್ತಾಪ ಮಾಡಿದ್ದಾರೆ. ನಮ್ಮ ವಿರೋಧ ಸಮರ್ಪಕವಾಗಿ ವ್ಯಕ್ತಪಡಿಸುತ್ತೇವೆ. ಇದು ಕರ್ನಾಟಕಕ್ಕೆ ದೊಡ್ಡ ಆಘಾತ. ಹೀಗಾಗಿ ಮುಂದಿನ ತಿಂಗಳು ಒಂದು ದಿನದ ವಿಶೇಷ ಅಧಿವೇಶನ ನಡೆಸುವುದಾಗಿ ಸಿಎಂ ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ ಯುವಕರಿಗಾಗಿ ಭಾರತ್ ಜೋಡೋ ಸಂಘಟನೆ ಶುರುವಾಗಲಿದೆ. ಪ್ರತಿವರ್ಷ 10 ಲಕ್ಷ ರೂ. ಅನುದಾನ ನೀಡುತ್ತೇವೆ ಅಂದ್ರು, ಪ್ರಜಾಸೇವೆ ಎಂಬ ಹೊಸ ಇಲಾಖೆ ಆರಂಭವಾಗುತ್ತಿದ್ದು, ಶಾಸಕರು ಹಾಗೂ ಸಚಿವರು ಅಲ್ಲೇ ಜನರ ಸಮಸ್ಯೆ ಬಗೆಹರಿಸಲು ಮಾರ್ಗದರ್ಶನ ನೀಡಿದ್ದಾರೆ.
ಸದ್ಯ ಕೇಂದ್ರ ಸರ್ಕಾರದ ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಿದ್ದು, ಕೇಂದ್ರದ ವಿರುದ್ಧ ನಿರ್ಣಯ ಮಂಡಿಸಲು ಮುಂದಾಗಿದೆ.