Vaccine Drive: ಕರ್ನಾಟಕದಲ್ಲಿ ಇಂದು ದೇಶದಲ್ಲೇ ಅತಿ ಹೆಚ್ಚು ಕೊವಿಡ್ ಲಸಿಕೆ ವಿತರಣೆ: ನಿಮ್ಮ ಜಿಲ್ಲೆಯಲ್ಲಿ ಎಷ್ಟು ಡೋಸ್? ಚೆಕ್ ಮಾಡಿ

ಈ ಸಾಧನೆಗೆ ಕಾರಣೀಕರ್ತರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಸಿಬ್ಬಂದಿಗೂ ಆರೋಗ್ಯ ಸಚಿವ ಡಾ.ಸುಧಾಕರ್ ಧನ್ಯವಾದ ಅರ್ಪಿಸಿದ್ದಾರೆ.

Vaccine Drive: ಕರ್ನಾಟಕದಲ್ಲಿ ಇಂದು ದೇಶದಲ್ಲೇ ಅತಿ ಹೆಚ್ಚು ಕೊವಿಡ್ ಲಸಿಕೆ ವಿತರಣೆ: ನಿಮ್ಮ ಜಿಲ್ಲೆಯಲ್ಲಿ ಎಷ್ಟು ಡೋಸ್? ಚೆಕ್ ಮಾಡಿ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಇಂದು ರಾಜ್ಯದಲ್ಲಿ ನಡೆದ ಕೊವಿಡ್ ಲಸಿಕೆ ಅಭಿಯಾನದ ಮೂಲಕ ಇಡೀ ದೇಶದಲ್ಲಿ ಇಂದು ಅತಿ ಹೆಚ್ಚು ಲಸಿಕೆ ವಿತರಿಸಿದ ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ. ರಾತ್ರಿ 9 ಗಂಟೆಯವರೆಗೆ ಒಟ್ಟು 26.92 ಲಕ್ಷ ಡೋಸ್ ಕೊವಿಡ್ ಲಸಿಕೆಯನ್ನು ರಾಜ್ಯದ ವಿವಿದೆಡೆ ವಿತರಿಸಲಾಗಿದೆ. 2ನೇ ಸ್ಥಾನ ಪಡೆದ ಬಿಹಾರ 26.62 ಡೋಸ್ ಮತ್ತು 3ನೇ ಸ್ಥಾನ ಪಡೆದ ಉತ್ತರ ಪ್ರದೇಶ 24.86 ಡೋಸ್ ಲಸಿಕೆ ವಿತರಿಸಿದೆ. ಕರ್ನಾಟಕದಲ್ಲೊಂದೇ ಇಂದು 12,000 ಕೊವಿಡ್ ಲಸಿಕೆ ವಿತರಣಾ ಬೂತ್​ಗಳನ್ನು ತೆರೆಯಲಾಗಿತ್ತು.

ಇಂದು ಕೊವಿಡ್ ಲಸಿಕೆ ವಿತರಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡ ಕಾರಣ ಈ ಸಾಧನೆಗೆ ಕಾರಣೀಕರ್ತರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಸಿಬ್ಬಂದಿಗೂ ಆರೋಗ್ಯ ಸಚಿವ ಡಾ.ಸುಧಾಕರ್ ಧನ್ಯವಾದ ಅರ್ಪಿಸಿದ್ದಾರೆ.

ಯಾವ ಜಿಲ್ಲೆಯಲ್ಲಿ ಹೆಚ್ಚು?
ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 3.98 ಲಕ್ಷ ಡೋಸ್, ಬೆಳಗಾವಿಯಲ್ಲಿ 2.39 ಡೋಸ್, ದಕ್ಷಿಣ ಕನ್ನಡದಲ್ಲಿ 1.33 ಡೋಸ್, ಬಳ್ಳಾರಿಯಲ್ಲಿ 1.33 ಲಕ್ಷ ಡೋಸ್, ತುಮಕೂರು ಜಿಲ್ಲೆಯಲ್ಲಿ 1.24 ಲಕ್ಷ ಡೋಸ್ ಮತ್ತು ಮಂಡ್ಯ ಜಿಲ್ಲೆಯಲ್ಲಿ 1.15 ಲಕ್ಷ ಡೋಸ್ ಕೊವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಇಂದು ವಿತರಿಸಲಾದ ಕೊವಿಡ್ ಲಸಿಕೆಯನ್ನು ಸೇರಿ ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳೊಂದರಲ್ಲೇ ಒಟ್ಟು 87 ಲಕ್ಷ ಡೋಸ್ ಕೊವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಈ ತಿಂಗಳಾಂತ್ಯಕ್ಕೆ 1.5 ಕೋಟಿ ಡೋಸ್ ಕೊವಿಡ್ ಲಸಿಕೆಯನ್ನು ವಿತರಿಸುವ ವಿಶ್ವಾಸ ಆರೋಗ್ಯ ಇಲಾಖೆಗಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊರೊನಾ ಲಸಿಕೆ (Covid 19 Vaccination) ಅಭಿಯಾನ ಅದ್ಭುತ ಗುರಿ ಸಾಧಿಸಿದೆ. ಇಂದು ಒಂದೇ ದಿನ 2 ಕೋಟಿಗೂ ಅಧಿಕ ಡೋಸ್​ಗಳಷ್ಟು ಕೊವಿಡ್​ 19 ಲಸಿಕೆಯನ್ನು ನೀಡಲಾಗಿದೆ. ಕೊರೊನಾ ಲಸಿಕೆ ಅಭಿಯಾನವನ್ನು ಜನವರಿಯಲ್ಲಿ ಶುರು ಮಾಡಲಾಗಿದ್ದು, ಆಗಿನಿಂದ ಈವರೆಗೆ ಇದೇ ಮೊದಲ ಬಾರಿಗೆ 2 ಕೋಟಿ ಡೋಸ್​ ಗಡಿ ದಾಟಿದ್ದು ದಾಖಲೆಯನ್ನು ನಿರ್ಮಿಸಿದಂತಾಗಿದೆ. ಅಂದಹಾಗೆ ಇವತ್ತು ಬರೋಬ್ಬರಿ 2,11,28,784  ಡೋಸ್​ಗಳನ್ನು ನೀಡಿದ್ದಾಗಿ ಕೊವಿನ್​ ಪೋರ್ಟಲ್​​ನಲ್ಲಿ ದಾಖಲಾಗಿದೆ. ಮಧ್ಯಾಹ್ನ 1.30ರ ಹೊತ್ತಿಗೇ ಲಸಿಕೆ 1 ಕೋಟಿ ಡೋಸ್​ ಗಡಿ ದಾಟಿತ್ತು.

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಕೊವಿಡ್​ 19 ಲಸಿಕಾ ಬೃಹತ್​ ಮೇಳವನ್ನು ಆಯೋಜಿಸಲಾಗಿತ್ತು. ಇಂದು ಒಂದೇದಿನ 2 ಕೋಟಿ ಡೋಸ್​ ಗಡಿ ದಾಟುವ ಮೂಲಕ ದೇಶ ಕೊವಿಡ್​ 19 ಲಸಿಕೆ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದೆ. ದೇಶದಲ್ಲಿ ಒಟ್ಟಾರೆ 78.68 ಕೋಟಿ ಡೋಸ್​ ಕೊರೊನಾ ಲಸಿಕೆ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ, ಇಂದು 2 ಕೋಟಿಗೂ ಹೆಚ್ಚು ಡೋಸ್ ಕೊರೊನಾ ಲಸಿಕೆ ನೀಡುವ ಮೂಲಕ ಭಾರತದ ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಖುಷಿ ಹಂಚಿಕೊಂಡಿದೆ.

ಇದನ್ನೂ ಓದಿ: 

Corona Vaccination: ಇಂದು 2 ಕೋಟಿ ಡೋಸ್​​ಗೂ ಅಧಿಕ ಕೊರೊನಾ ಲಸಿಕೆ ನೀಡಿ ದಾಖಲೆ ಬರೆದ ಭಾರತ

ಚಿಕ್ಕಬಳ್ಳಾಪುರದಲ್ಲಿ ಮಹಿಳೆಗೆ ಕೂಲಿ ನೀಡಿ ಕೊರೊನಾ ಲಸಿಕೆ ಹಾಕಿಸಿದ ಅಧಿಕಾರಿಗಳು!

(PM Narendra Modi Birthday Health Minister Dr Sudhakar informs Karnataka topped the country in todays vaccination drive distribute 26.92 lakh covid vaccine)

Read Full Article

Click on your DTH Provider to Add TV9 Kannada