ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ ಆರೋಪಿ ಬಂಧನ
ಡಿಸೆಂಬರ್ 5 ರಂದು ಬೆಟ್ಟದಪುರದ ರಾಯಣ್ಣ ಬೀದಿಯ ನವೀನ್ ಎಂಬುವವರ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಮನೆ ಕಳ್ಳತನ ಮಾಡಿದ್ದ ಆರೋಪಿ ಜಗದೀಶ್ (31) ಮನೆಯಲ್ಲಿದ್ದ ಚಿನ್ನದ ಓಲೆ, ನೆಕ್ಲೇಸ್ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಮನೆಯಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 5 ರಂದು ಬೆಟ್ಟದಪುರದ ರಾಯಣ್ಣ ಬೀದಿಯ ನವೀನ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಮನೆ ಕಳ್ಳತನ ಮಾಡಿದ್ದ ಆರೋಪಿ ಜಗದೀಶ್ (31) ಮನೆಯಲ್ಲಿದ್ದ ಚಿನ್ನದ ಓಲೆ, ನೆಕ್ಲೇಸ್ ದೋಚಿದ್ದು, ಈ ಸಂಬಂಧ ನವೀನ್ ಬೆಟ್ಟದಪುರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ನವೀನ್ ನೀಡಿದ ದೂರಿನ ಆಧಾರದ ಮೇಲೆ ವಿಚಾರಣೆ ಆರಂಭಿಸಿದ ಪೊಲೀಸರು ಅನುಮಾನಸ್ಪದವಾಗಿ ಓಡಾಡುತ್ತಿದ್ದ ಆರೋಪಿ ಜಗದೀಶ್ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ನವೀನ್ ಮನೆಯ ಹಿಂಬಾಗಿಲಿನಿಂದ ಒಳನುಗ್ಗಿದ್ದ ಜಗದೀಶ್ ಸ್ಕ್ರೂ ಡ್ರೈವರ್ನಿಂದ ಬೀರುವಿನ ಲಾಕರ್ ಮೀಟಿ ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಜಗದೀಶ್ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ರಾತ್ರಿ ಕಳ್ಳರ ಸೆರೆ: 6 ಪ್ರಕರಣ ಪತ್ತೆ, 916 ಗ್ರಾಂ ಚಿನ್ನಾಭರಣ ವಶ