ಹೆಣ್ಣು ಮಗು ಎಂದು ಮನೆ ಬಿಟ್ಟು ಹೋದ ಅಪ್ಪ; ಪಿಎಸ್ಐ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಚನಾ ಮುತ್ತಲಗೇರಿ ಜೀವನ ಹೇಗಿದೆ ಗೊತ್ತಾ?

ರಚನಾ ಕುಟುಂಬಸ್ಥರು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದಲ್ಲಿದ್ದಾರೆ. ರಚನಾ ಮುತ್ತಲಗೇರಿ, ದೊಡಮ್ಮ ಕಸ್ತೂರಿಬಾಯಿ ಮನೆಯಲ್ಲೇ‌ ಉಳಿದು ಶಿಕ್ಷಣ ಪಡೆದಿದ್ದರು. ಪೊಲೀಸ್ ಠಾಣೆಯಲ್ಲಿ ರಚನಾ‌ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಹೆಣ್ಣು ಮಗು ಎಂದು ಮನೆ ಬಿಟ್ಟು ಹೋದ ಅಪ್ಪ; ಪಿಎಸ್ಐ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಚನಾ ಮುತ್ತಲಗೇರಿ ಜೀವನ ಹೇಗಿದೆ ಗೊತ್ತಾ?
ರಚನಾ ಮುತ್ತಲಗೇರಿ ದೊಡ್ಡಮ್ಮ ಕಸ್ತೂರಿಬಾಯಿ
Follow us
| Updated By: ಆಯೇಷಾ ಬಾನು

Updated on:May 04, 2022 | 8:51 AM

ವಿಜಯಪುರ: ರಾಜ್ಯದಲ್ಲಿ ನಡೆದ ಪಿಎಸ್ಐ ಪರೀಕ್ಷೆ ಅಕ್ರಮದಿಂದಾಗಿ ಅದೆಷ್ಟೂ ಬಡವರ ಕನಸು ನುಚ್ಚು ನೂರಾಗಿದೆ. ಯಾರೂ ದುಡ್ಡಿದ್ದವರು ಅಕ್ರಮದಲ್ಲಿ ಭಾಗಿಯಾಗಿದ್ರೆ, ಕಷ್ಟು ಪಟ್ಟು ಓದಿ ಪರೀಕ್ಷೆ ಬರೆದ ಅದೆಷ್ಟೋ ಬಡಮಕ್ಕಳು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. 545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಮರು ಪರೀಕ್ಷೆ ನಡೆಸುವಂತೆ ಸರ್ಕಾರ ಘೋಷಣೆ ಮಾಡಿದೆ. ಆದ್ರೆ ಪಿಎಸ್ಐ ಪರೀಕ್ಷೆ ಬರೆದು ಸೆಲೆಕ್ಟ್ ಆಗಿದ್ದ ಬಡ ಅಭ್ಯರ್ಥಿಗಳು ಸರ್ಕಾರದ ಆದೇಶದಿಂದ ಕಣ್ಣೀರಿಡುವಂತಾಗಿದೆ. ಯಾರೂ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ. ಪಿಎಸ್ಐ ಪರೀಕ್ಷೆ ಬರೆಯಲು ಯಾವು 6 ವರ್ಷಕ್ಕೂ ಹೆಚ್ಚು ಕಾಲ ಅಭ್ಯಾಸ ಮಾಡಿದ್ದೇವೆ. ಕೋಚಿಂಗ್ ಕ್ಲ್ಯಾಸ್ಗಳಿಗೆ ಹಣ ಸುರಿದಿದ್ದೇವೆ ಎಂದು ಗೋಳಾಡಿದ್ದಾರೆ. ಸದ್ಯ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಚನಾ ಮುತ್ತಲಗೇರಿ ಕುಟುಂಬಸ್ಥರು ಕಣ್ಣಿರು ಹಾಕಿದ್ದಾರೆ.

ರಚನಾ ಕುಟುಂಬಸ್ಥರು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದಲ್ಲಿದ್ದಾರೆ. ರಚನಾ ಮುತ್ತಲಗೇರಿ, ದೊಡಮ್ಮ ಕಸ್ತೂರಿಬಾಯಿ ಮನೆಯಲ್ಲೇ‌ ಉಳಿದು ಶಿಕ್ಷಣ ಪಡೆದಿದ್ದರು. ಪೊಲೀಸ್ ಠಾಣೆಯಲ್ಲಿ ರಚನಾ‌ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಿನಗಳಿಂದ ರಚನಾ ಸಂಪರ್ಕ ಇಲ್ಲದೆ ದೊಡ್ಡಮ್ಮ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ. ರಚನಾ ಜೊತೆಗೆ ತೆರಳಿದ್ದ ಆಕೆಯ ಸಹೋದರ ವಿಕ್ರಮ ಮೊಬೈಲ್ ಕೂಡಾ ಬಂದ್ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ರಚನಾ ತಾಯಿ ಸಾವಿತ್ರಿ, ನಮ್ಮ ಮಗಳು ಶಾಲೆಯಲ್ಲಿ ಯಾವತ್ತಿಗೂ ಮೊದಲ ಸ್ಥಾನ ಪಡೆಯುತ್ತಿದ್ದಳು. ಅವಳ ವಿರುದ್ಧ ಈಗ ಕೇಳಿ ಬಂದಿರುವ ಆರೋಪದ ಬಗ್ಗೆ ನಮಗೆನೂ ಗೊತ್ತಿಲ್ಲ. ದುಡಿದು ಜೀವನ ನಡೆಸುವ ನಮಗೆ ಅಷ್ಟು ಹಣ ಎಲ್ಲಿಂದ ತರೋಕಾಗುತ್ತೆ ಎಂದ ಕಣ್ಣೀರು ಹಾಕಿದ್ದಾರೆ. ಪ್ರಕರಣದ ಬಗ್ಗೆ ತಿನಿಖೆ ನಡೆಯುತ್ತಿದ್ದು ಸತ್ಯ ಏನೆಂದು ಹೊರಗೆ ಬರಲಿ. ಸರ್ಕಾರ ಏನು ನಿರ್ಧಾರ ಮಾಡುತ್ತೋ ಅದಕ್ಕೆ ನಾವು ಬದ್ದರಾಗಿದ್ದೇವೆ. ಈ ಹಿಂದೆ ಎರಡು ಸಲ ರಚನಾ ಪಿಎಸ್ಐ ಪರೀಕ್ಷೆ ಬರೆದಿದ್ದಳು ಆದರೆ ಆಗ ಕೆಲವೇ ಅಂಕಗಳಿಂದ ಪಾಸ್ ಆಗಿರಲಿಲ್ಲ. ಆದರೂ ಆಕೆ ಕಠಿಣ ಪರಿಶ್ರಮದಿಂದ ಹಠ ಹಿಡಿದು ಪರೀಕ್ಷೆ ಬರೆದು ಪಾಸ್ ಆಗಿದ್ದಾಳೆ. ಇನ್ನೂ ಹತ್ತು ಸಲ ಬೇಕಾದರೂ ಆಕೆ ಪರೀಕ್ಷೆ ಬರೆಯಲು ತಯಾರಿದ್ದಾಳೆ ಎಂದು ರಚನಾ ಮುತ್ತಲಗೇರಿ ದೊಡ್ಡಮ್ಮ ಕಸ್ತೂರಿಬಾಯಿ ಹೇಳಿದ್ರು.

ಪಿಎಸ್​ಐ ಅಕ್ರಮದ ಬಗೆಗಿನ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಣ್ಣು ಮಗು ಎಂಬ ಕಾರಣಕ್ಕೆ ಬಿಟ್ಟು ಹೋದ ತಂದೆ ರಚನಾ ಹುಟ್ಟಿದ ಬಳಿಕ ಹೆಣ್ಣು ಮಗು ಎನ್ನುವ ಕಾರಣಕ್ಕೆ ತಾಯಿ ಹಾಗೂ ರಚನಾಳನ್ನು ಅವರ ತಂದೆ ಬಿಟ್ಟು ಹೋದ್ರು. ಬಳಿಕ ತಾಯಿ ಹಾಗೂ ದೊಡ್ಡಮ್ಮನ ಜೊತೆಗೆ ತಾತನ ಮನೆಯಲ್ಲಿ ರಚನಾ ಬೆಳೆದ್ರು. ರಚನಾ ತಾಯಿ ಸಾವಿತ್ರಿ ಬೀದರ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ರಚನಾ ಬಸವನಬಾಗೇವಾಡಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾಳೆ. ಬಾಗಲಕೋಟೆಯ ಶಿಶುವಿಹಾರದಲ್ಲಿ ಪ್ರೌಢಶಿಕ್ಷಣ, ಅಲ್ಲಿನ ವಾಗ್ದೇವಿ ಸೈನ್ಸ್ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣ ಬಳಿಕ ಬೆಳಗಾವಿಯ ಬಾಳೆಕುಂದ್ರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ (ಎಲೆಕ್ಟ್ರಿಕಲ್) ಪಡೆದಿದ್ದಾರೆ. ಸದ್ಯ ವಿಜಯಪುರ ಜಿಲ್ಲೆ ಕೂಡಗಿಯ NTPC ಯಲ್ಲಿ ಮೂರು ವರ್ಷಗಳಿಂದ ಎಕ್ಸಿಕ್ಯುಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಎರಡು ಬಾರಿ ಪಿಎಸ್ಐ ಪರೀಕ್ಷೆ ಬರೆದು ಆಯ್ಕೆಯಾಗಿರಲಿಲ್ಲ. ಹೆಣ್ಣು ಮಗು ಎಂದು ತಂದೆ ಬಿಟ್ಟು ಹೋದ ಕಾರಣ ರಚನಾ ಗಂಡು ಮಕ್ಕಳಂತೆಯೆ ಜೀವನ ಶೈಲಿ ರೂಪಿಸಿಕೊಂಡಿದ್ದರು. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಾಗ ಅಧಿಕಾರಿಗಳು ಆಕೆಯ ಫೋಟೋ ನೋಡಿ ಕನ್ಫ್ಯೂಸ್ ಆಗಿದ್ದರಂತೆ. ಹುಡುಗಿ ಹೆಸರಿಗೆ ಹುಡುಗನ ಫೋಟೋ ಹಾಕಿರಬಹುದು ಎಂದು ಅಂದಾಜಿಸಿದ್ದರಂತೆ. ಸಂದರ್ಶನ ನಡೆಸೋ ಮುಂಚೆ ರಚನಾಳನ್ನು ಕಚೇರಿಗೆ ಕರೆಸಿ ಆಕೆಯನ್ನು ನೋಡಿದ ಬಳಿಕವೇ ಇವಳೆ ರಚನಾ ಎಂದು ಅಧಿಕಾರಿಗಳು ಖಚಿತ‌ ಪಡಿಸಿಕೊಂಡಿದ್ದರಂತೆ. ಪೊಲೀಸ್ ಅಧಿಕಾರಿಯಾಗಬೇಕು, ಹುಡುಗರಂತೆ ಕಾಣಬೇಕು ಎಂದು ಹಾಗೇ ಡ್ರೇಸ್, ಹೆರ್‌ ಸ್ಟೈಲ್ ಮಾಡಿಕೊಂಡಿದ್ದರಂತೆ ರಚನಾ.

ಇದನ್ನೂ ಓದಿ: ಫೋರ್ಜರಿ ಸಹಿ ಮಾಡಿ ಹಣ ಮಂಜೂರಾತಿಗೆ ಯತ್ನ! ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ರವಿಕುಮಾರ್ ವಿರುದ್ಧ ಎಫ್ಐಆರ್

Published On - 8:51 am, Wed, 4 May 22

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್