PUBGಗಾಗಿ ತಂದೆಯನ್ನೇ ಕೊಂದ; ಬೆಳಗಾವಿಯಲ್ಲಿ ಅಮಾನವೀಯ ಘಟನೆ
ಮೊಬೈಲ್ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ನಡೆದಿದೆ. ಕಾಕತಿ ಗ್ರಾಮದ ನಿವಾಸಿ ರಘುವೀರ್(21) ತನ್ನ ತಂದೆ ಶಂಕರಪ್ಪನನ್ನು ಭೀಕರವಾಗಿ ಕೊಲೆಗೈದಿದ್ದಾನೆ. ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಂಕರಪ್ಪ, 3 ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು. ಇತ್ತೀಚೆಗೆ ಆರೋಪಿ ರಘುವೀರ್ ನಿರಂತರವಾಗಿ ಮೊಬೈಲ್ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ. ಇಂಟರ್ನೆಟ್ ಮುಗಿದ ಕಾರಣ ಪಬ್ ಜಿ ಆಡಲು ತಂದೆಯ […]
ಮೊಬೈಲ್ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ನಡೆದಿದೆ. ಕಾಕತಿ ಗ್ರಾಮದ ನಿವಾಸಿ ರಘುವೀರ್(21) ತನ್ನ ತಂದೆ ಶಂಕರಪ್ಪನನ್ನು ಭೀಕರವಾಗಿ ಕೊಲೆಗೈದಿದ್ದಾನೆ. ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಂಕರಪ್ಪ, 3 ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು.
ಇತ್ತೀಚೆಗೆ ಆರೋಪಿ ರಘುವೀರ್ ನಿರಂತರವಾಗಿ ಮೊಬೈಲ್ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ. ಇಂಟರ್ನೆಟ್ ಮುಗಿದ ಕಾರಣ ಪಬ್ ಜಿ ಆಡಲು ತಂದೆಯ ಬಳಿ ಹಣ ಕೇಳಿದ್ದ. ಮೊಬೈಲ್ನಲ್ಲಿ ಹೆಚ್ಚು ಕಾಲಹರಣ ಮಾಡುತ್ತಿದ್ದ ಕಾರಣ ಪುತ್ರ ರಘುವೀರ್ಗೆ ತಂದೆ ಶಂಕರಪ್ಪ ಬುದ್ಧಿವಾದ ಹೇಳಿದ್ದ. ಇದರಿಂದ ಕೋಪಗೊಂಡಿದ್ದ ರಘುವೀರ್, ಅಕ್ಕಪಕ್ಕದ ಮನೆಯ ಕಿಟಕಿ ಗಾಜುಗಳನ್ನು ಒಡೆದುಹಾಕಿದ್ದ. ಬಳಿಕ ಪೊಲೀಸರು ಠಾಣೆಗೆ ಕರೆದೊಯ್ದು ತಂದೆಯ ಸಮ್ಮುಖದಲ್ಲೇ ಬುದ್ಧಿವಾದ ಹೇಳಿ ಕಳುಹಿಸಿದ್ದರು.
ಇಷ್ಟಾದರು ಕಳೆದ ರಾತ್ರಿ ಮತ್ತೆ ಪಬ್ ಜಿ ಆಡುವುದರಲ್ಲಿ ಆರೋಪಿ ನಿರತನಾಗಿದ್ದ. ಈ ವೇಳೆ ತಂದೆ ಮೊಬೈಲ್ ಕಿತ್ತುಕೊಂಡು ಬೈದಿದ್ದರು. ಇದರಿಂದ ಕುಪಿತಗೊಂಡಿದ್ದ ರಘುವೀರ್, ತಂದೆಯ ಕೈಕಾಲು ಹಾಗೂ ಕುತ್ತಿಗೆ ಭಾಗವನ್ನು ಕತ್ತರಿಸಿ ಭೀಕರವಾಗಿ ಹತ್ಯೆಗೈದು ಕ್ರೂರತೆ ಮೆರೆದಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಕಾಕತಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.
Published On - 1:18 pm, Mon, 9 September 19