AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಪರಾರಿಯಾಗಲು ಯತ್ನಿಸಿದ ಅಕ್ರಮ ಗೋಸಾಗಾಟಗಾರರ ಮೇಲೆ ಪೊಲೀಸ್ ಗುಂಡಿನ ದಾಳಿ

ಹಾಸನದಿಂದ ಕೇರಳದತ್ತ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಲಾರಿಯನ್ನು ಪುತ್ತೂರು ಗ್ರಾಮೀಣ ಠಾಣಾ ವ್ಯಾಪ್ತಿಯ ಪೊಲೀಸರು ತಡೆಹಿಡಿಯಲು ಯತ್ನಿಸಿದ್ದರು. ಅಪಾಯದ ಪರಿಸ್ಥಿತಿಯಲ್ಲಿ ಪುತ್ತೂರು ಗ್ರಾಮೀಣ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಂಬುರಾಜ್ ಮಹಾಜನ್ ಅವರು ಗುಂಡು ಹಾರಿಸಿದ್ದು, ಪುತ್ತೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು:  ಪರಾರಿಯಾಗಲು ಯತ್ನಿಸಿದ ಅಕ್ರಮ ಗೋಸಾಗಾಟಗಾರರ ಮೇಲೆ ಪೊಲೀಸ್ ಗುಂಡಿನ ದಾಳಿ
ಅಕ್ರಮ ಗೋಸಾಗಾಟಗಾರರ ಮೇಲೆ ಪುತ್ತೂರು ಪಿಎಸ್ಐ ಜಂಬುರಾಜ್ ಮಹಾಜನ್ ಪೈರಿಂಗ್
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on:Oct 22, 2025 | 10:23 AM

Share

ಮಂಗಳೂರು, (ಅಕ್ಟೋಬರ್ 22):  ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದ (Illegal cow trade) ಖದೀಮರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಬೆಳ್ಳಿಚಡವು ಬಳಿ ನಡೆದಿದೆ. ಹಾಸನದಿಂದ ಕೇರಳದತ್ತ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಪುತ್ತೂರು ಪೊಲೀಸರು ತಡೆಹಿಡಿಯಲು ಯತ್ನಿಸಿದ್ದಾರೆ. ಆದ್ರೆ, ಲಾರಿ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾರೆ. ಅಲ್ಲದೇ ಲಾರಿ ಚಾಲಕ ನೇರವಾಗಿ ಪೊಲೀಸರ ಮೇಲೆ ಹತ್ತಿಸಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಆರೋಪಿಯ ಮೇಲೆ ಗುಂಡುಹಾರಿಸಿದ ಪಿಎಸ್ಐ

ಹಾಸನದಿಂದ ಕೇರಳದತ್ತ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಲಾರಿಯನ್ನು ಪುತ್ತೂರು ಗ್ರಾಮೀಣ ಠಾಣಾ ವ್ಯಾಪ್ತಿಯ ಪೊಲೀಸರು ತಡೆಹಿಡಿಯಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಲಾರಿ ನಿಲ್ಲಿಸಲು ಸೂಚಿಸಿದರೂ, ಚಾಲಕ ಲೆಕ್ಕಿಸದೇ ಲಾರಿಯನ್ನು ನೇರವಾಗಿ ಪೊಲೀಸರ ಕಡೆಗೆ ಹತ್ತಿಸಲು ಯತ್ನಿಸಿದ ಎನ್ನಲಾಗಿದೆ. ಅಪಾಯದ ಪರಿಸ್ಥಿತಿಯಲ್ಲಿ ಪುತ್ತೂರು ಗ್ರಾಮೀಣ ಠಾಣೆಯ ಪಿಎಸ್ಐ ಜಂಬುರಾಜ್ ಮಹಾಜನ್ ಅವರು ಗುಂಡು ಹಾರಿಸಿದ್ದು, ಆರೋಪಿಯಾದ ಅಬ್ದುಲ್ಲಾ ಕಾಲಿಗೆ ಗುಂಡು ತಗುಲಿದೆ.

ಗಾಯಗೊಂಡ ಅಬ್ದುಲ್ಲಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆರೋಪಿಯ ಸ್ಥಿತಿ ಸ್ಥಿರವಾಗಿದೆ. ಲಾರಿಯಲ್ಲಿ ಇದ್ದ ಮತ್ತೊಬ್ಬ ಆರೋಪಿ ಘಟನೆಯ ನಂತರ ಪರಾರಿಯಾಗಿದ್ದಾನೆ. ಪೊಲೀಸರು ಅವನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

10 ಗೋವುಗಳ ರಕ್ಷಣೆ

ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಅದರೊಳಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 10 ಗೋವುಗಳನ್ನು ರಕ್ಷಿಸಿದ್ದಾರೆ. ಈ ಘಟನೆ ನಂತರ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾಸನದಿಂದ ಕೇರಳದತ್ತ ಜಾನುವಾರುಗಳ ಕಳ್ಳಸಾಗಣೆ ನಡೆಯುತ್ತಿತ್ತು ಎಂಬ ಮಾಹಿತಿ ಆಧಾರದ ಮೇಲೆ ಪೊಲೀಸರು ಬಲೆ ಬೀಸಿದ್ದರು. ಆದರೆ ಆರೋಪಿಗಳು ಪೊಲೀಸರ ಸೂಚನೆಗೆ ಸಹಕರಿಸದೆ ದಾಳಿ ಮಾಡಲು ಮುಂದಾಗಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಪೊಲೀಸರಿಂದ ತಿಳಿದುಬಂದಿದೆ. ಘಟನೆಯ ಕುರಿತು ಪುತ್ತೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:21 am, Wed, 22 October 25

Follow Us
Ashok
Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!
ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!
ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಅಂಬೇಡ್ಕರ್ ಪ್ರತಿಮೆ ಎದುರು ಅಂತರ್ಜಾತಿ ವಿವಾಹವಾದ ಯುವ ಜೋಡಿ!
ಅಂಬೇಡ್ಕರ್ ಪ್ರತಿಮೆ ಎದುರು ಅಂತರ್ಜಾತಿ ವಿವಾಹವಾದ ಯುವ ಜೋಡಿ!
ಹಾಸನ: ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ಭಾರೀ ಅನಾಹುತ
ಹಾಸನ: ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ಭಾರೀ ಅನಾಹುತ