ಅಮಿತ್​ ಶಾ ಆಗಮನ ಬೆನ್ನಲ್ಲೇ ಶಾಸಕ ಶಿವನಗೌಡ ನಾಯಕ್​ ವಿರುದ್ಧ ಭ್ರಷ್ಟಾಚಾರ ಆರೋಪ: ಜೆಡಿಎಸ್ ಮುಖಂಡರಿಂದ ದಾಖಲೆ ರಿಲೀಸ್​​

|

Updated on: Mar 25, 2023 | 6:17 PM

ಬಿಜೆಪಿ ಶಾಸಕ ಶಿವನಗೌಡ ನಾಯಕ್​ ವಿರುದ್ಧ ಸಾವಿರಾರು ಕೋಟಿ ರೂ. ಬೇನಾಮಿ ಆಸ್ತಿ ಮಾಡಿರುವ ಆರೋಪ ಕೇಳಿಬಂದಿದೆ. ಜೆಡಿಎಸ್​​ ಜಿಲ್ಲಾಧ್ಯಕ್ಷ ಎಂ ವೀರುಪಾಕ್ಷಿ ಅವರು ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಅಮಿತ್​ ಶಾ ಆಗಮನ ಬೆನ್ನಲ್ಲೇ ಶಾಸಕ ಶಿವನಗೌಡ ನಾಯಕ್​ ವಿರುದ್ಧ ಭ್ರಷ್ಟಾಚಾರ ಆರೋಪ: ಜೆಡಿಎಸ್ ಮುಖಂಡರಿಂದ ದಾಖಲೆ ರಿಲೀಸ್​​
ಬಿಜೆಪಿ ಶಾಸಕ ಶಿವನಗೌಡ ನಾಯಕ್
Follow us on

ರಾಯಚೂರು: ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವನಗೌಡ ನಾಯಕ್ (Shivanagouda Naik) ವಿರುದ್ಧ ಸಾವಿರಾರು ಕೋಟಿ ರೂ. ಬೇನಾಮಿ ಆಸ್ತಿ ಮಾಡಿರುವ ಆರೋಪ ಕೇಳಿಬಂದಿದೆ. ಜೆಡಿಎಸ್ ಮುಖಂಡರಿಂದ ಈ ಗಂಭೀರ ಆರೋಪ ಮಾಡಿದ್ದು, ಜಿಲ್ಲಾಧ್ಯಕ್ಷ ಎಂ ವೀರುಪಾಕ್ಷಿ ಅವರು ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ. ಪತ್ನಿ, ತಾಯಿ, ಸಂಬಂಧಿಕರ ಹೆಸರಲ್ಲಿ ಹೋಟೆಲ್, ಅಪಾರ್ಟ್​ಮೆಂಟ್, ಭೂಮಿ ಬೇನಾಮಿ ಆಸ್ತಿಗಳ ಖರೀದಿ ಆರೋಪ ಮಾಡಲಾಗಿದೆ. ಸುಮಾರು 20 ಮದ್ಯದ ಅಂಗಡಿಗಳ ಖರೀದಿಸಿರುವ ಬಗ್ಗೆ ಉಲ್ಲೇಖಿಸಲಾಗಿದ್ದು, ದೇವದುರ್ಗ ತಾಲೂಕಿನಲ್ಲಿ 17 ವೈನ್ ಶಾಪ್, ಗ್ರಾನೈಟ್, ಮೈನಿಂಗ್​ ಮತ್ತು ಸರಕಾರಿ ಭೂಮಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ. ಇನ್ನು ದೇವದುರ್ಗಕ್ಕೆ ನಾಳೆ ಅಮಿತ್ ಶಾ ಆಗಮನ್ ಬೆನ್ನಲ್ಲೇ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ಇತ್ತ ಅಕ್ರಮ ಆಸ್ತಿ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಶಿವನಗೌಡ ನಾಯಕ್, ಈ ಹಿಂದೆಯೂ ನನ್ನ ವಿರುದ್ಧ ಅಕ್ರಮ ಆಸ್ತಿ ಆರೋಪ ಮಾಡಲಾಗಿತ್ತು. ಚುನಾವಣೆ ವೇಳೆ ನನ್ನ ಆಸ್ತಿಯ ಬಗ್ಗೆ ಅಫಿಡವಿಟ್ ಸಲ್ಲಿಸಲಾಗಿದೆ. ನನ್ನ ವಿರುದ್ಧ ಈ ಹಿಂದಿನಿಂದಲೂ ಆರೋಪಗಳನ್ನ ಮಾಡುತ್ತಿದ್ದಾರೆ. ಎಲ್ಲವನ್ನೂ ಎದುರಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bengaluru: RBI ಹೆಸರಿನಲ್ಲಿ ಜನರಿಂದ ಲಕ್ಷಾಂತರ ರೂ. ವಂಚನೆ: ಎಂಟು ಜನರ ಗ್ಯಾಂಗ್​ ಅರೆಸ್ಟ್​​ ಮಾಡಿದ ಸಿಸಿಬಿ

ಆರೋಪಿಯನ್ನೇ ಅಪಹರಿಸಿ 40 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಪೊಲೀಸರು

ಬೆಂಗಳೂರು: ಪೊಲೀಸರೇ ಆರೋಪಿಯನ್ನು ಅಪಹರಿಸಿ ಆತನ ಸಂಬಂಧಿಕರ ಬಳಿ 40 ಲಕ್ಷ ರೂ.ಗೆ ಬೇಡಿಕೆ ಇಟ್ಟ ಸಿನಿಮೀಯ ಪ್ರಕರಣವೊಂದು ಬೆಂಗಳೂರಿನ ಮಾರತ್ತ ಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಇದೀಗ ಮಾರತ್ತಹಳ್ಳಿ ಪಿಎಸ್​ಐ ರಂಗೇಶ್ ಸೇರಿ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ. ಎಫ್ಐಆರ್ ದಾಖಲಾದ ವಿಚಾರ ತಿಳಿಯುತ್ತಿದ್ದಂತೆಯೇ ಆರೋಪಿ ಪೊಲೀಸರು ತಲೆಮರೆಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೆಲವು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತನಿಖೆ ವೇಳೆ ಪೊಲೀಸರೇ ಅಪಹರಣ ಎಸಗಿರುವುದು ತಿಳಿದುಬಂದಿತ್ತು. ಇದರ ಬೆನ್ನಲ್ಲೇ ಎಲ್ಲರನ್ನೂ ಬಂಧಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚಿಸಿದ್ದರು.

ಇದನ್ನೂ ಓದಿ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪತ್ತೆಯಾಗುತ್ತಿದೆ ಕೋಟಿ ಕೋಟಿ ನಗದು; ಇಂದು ಎಲ್ಲೆಲ್ಲಿ ಏನೇನು ಎಷ್ಟೆಷ್ಟು ಸಿಕ್ತು ನೋಡಿ

ನಡೆದಿದ್ದೇನು?

ಹುಲಿ ಚರ್ಮ, ಉಗುರು ಮಾರಾಟ ಮಾಡುತ್ತಿದ್ದ ಆರೋಪಿ ರಾಮಾಂಜನಿ ಎಂಬಾತನನ್ನು ಮಾರ್ಚ್ 18 ರ ಸಂಜೆ 4‌.30 ಕ್ಕೆ ಅಪಹರಣ ಮಾಡಲಾಗಿತ್ತು. ಈ ವಿಚಾರವಾಗಿ ರಾಮಾಂಜನಿಯ ಸಂಬಂಧಿ ಶಿವರಾಮಯ್ಯ ಎಂಬವರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಕೂಡಲೇ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದ ಬಾಗಲೂರು ಪೊಲೀಸರು ರಾಮಾಂಜನಿಯನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಪೊಲೀಸರೇ ಅಪಹರಣ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.

ಅಕ್ರಮ ಗಣಿಗಾರಿಕೆ: 5.21 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಅಕ್ರಮ ಗಣಿಗಾರಿಕೆ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಎಸ್.ಬಿ.ಮಿನರಲ್ಸ್ ಒಡೆತನದ ಎರಡು ಗಣಿ ಕಂಪನಿಗೆ ಸೇರಿದ 5 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ. ಬಿ.ಪಿ.ಆನಂದ್ ಕುಮಾರ್, ಪಾಂಡುರಂಗ ಸಿಂಗ್, ಗೋಪಾಲ್ ಸಿಂಗ್ ಪಾಲುದಾರಿಕೆಯ ಎಸ್​ಬಿ ಮಿನರಲ್ಸ್ ಒಡೆತನದ ದಿನೇಶ್ ಕುಮಾರ್ ಪಾಲುದಾರಿಕೆಯ ಭಾರತ್ ಮಿನರಲ್ಸ್ ಮೈನ್ಸ್ ಹಾಗೂ ಶಾಂತಲಕ್ಷ್ಮಿ ಮತ್ತು ಜೆ.ಮಿಥಿಲೇಶ್ವರ್ ಗಣಿಗೆ ಸೇರಿದ 5.21 ಕೋಟಿ ಮೌಲ್ಯದ ಒಟ್ಟು ಆರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಎರಡು ಕಂಪನಿಗಳು ಕಬ್ಬಿಣದ ಅದಿರನ್ನು ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದವು. ಪ್ರಕರಣ ಸಂಬಂಧ ಎಸ್​ಬಿ ಮಿನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್, ಸರ್ಕಾರಿ ನೌಕರರು ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಲೋಕಾಯುಕ್ತ ಎಸ್​ಐಟಿ ದೂರು ದಾಖಲಿಸಿತ್ತು. ದೂರಿನ ಅನ್ವಯ ಕಂಪನಿಗಳ ವಿರುದ್ಧ ಇಡಿ ಅಧಿಕಾರಿಗಳು ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:17 pm, Sat, 25 March 23