ಟಿಪ್ಪರ್ ಹತ್ತಿಸಿ ವ್ಯಕ್ತಿಯ ಕೊಲೆಗೆ ಯತ್ನ.. MLC ಬಸವರಾಜ ಪಾಟೀಲ್ ಇಟಗಿ ಪುತ್ರನ ವಿರುದ್ಧ FIR

ಕಾರಿನ ಮೇಲೆ ಟಿಪ್ಪರ್ ಹತ್ತಿಸಿ ವ್ಯಕ್ತಿಯ ಕೊಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಂಎಲ್‌ಸಿ ಪುತ್ರ ಸೇರಿ ಇಬ್ಬರ ವಿರುದ್ಧ FIR ದಾಖಲಾಗಿದೆ. MLC ಬಸವರಾಜ ಪಾಟೀಲ್ ಇಟಗಿ ಪುತ್ರ ಸುಮನ್, ಟಿಪ್ಪರ್ ಚಾಲಕ ಶ್ರೀನಿವಾಸ್ ವಿರುದ್ಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

  • TV9 Web Team
  • Published On - 11:03 AM, 2 Mar 2021
ಟಿಪ್ಪರ್ ಹತ್ತಿಸಿ ವ್ಯಕ್ತಿಯ ಕೊಲೆಗೆ ಯತ್ನ.. MLC ಬಸವರಾಜ ಪಾಟೀಲ್ ಇಟಗಿ ಪುತ್ರನ ವಿರುದ್ಧ FIR
ಕಾರಿನ ಮೇಲೆ ಟಿಪ್ಪರ್ ಹತ್ತಿಸಿ ವ್ಯಕ್ತಿಯ ಕೊಲೆಗೆ ಯತ್ನಿಸಲಾಗಿದೆ.

ರಾಯಚೂರು: ಸಿನಿಮೀಯ ಶೈಲಿಯಲ್ಲಿ ಕಾರಿನ ಮೇಲೆ ಟಿಪ್ಪರ್ ಹತ್ತಿಸಿ ವ್ಯಕ್ತಿಯ ಕೊಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಂಎಲ್‌ಸಿ ಪುತ್ರ ಸೇರಿ ಇಬ್ಬರ ವಿರುದ್ಧ FIR ದಾಖಲಾಗಿದೆ. MLC ಬಸವರಾಜ ಪಾಟೀಲ್ ಇಟಗಿ ಪುತ್ರ ಸುಮನ್, ಟಿಪ್ಪರ್ ಚಾಲಕ ಶ್ರೀನಿವಾಸ್ ವಿರುದ್ಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಶರಣಗೌಡ ಎಂಬ ವ್ಯಕ್ತಿಯ ಕಾರ್ ಮೇಲೆ ಟಿಪ್ಪರ್ ಹಾರಿಸಿ ಕೊಲೆಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮರಳು ತುಂಬಿದ್ದ ಲಾರಿಯನ್ನು ಶರಣಗೌಡ ತಡೆ ಹಿಡಿತಿದ್ದ. ತನ್ನ ಕೆಲಸಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ಶರಣಗೌಡನ ವಿರುದ್ದ ಸುಮನ್ ಪಾಟೀಲ್ ದ್ವೇಷ ಸಾಧಿಸ್ತಿದ್ದ. ಹೀಗಾಗಿ ಶರಣಗೌಡನ ಮೇಲೆ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಬಳಿ ಟಿಪ್ಪರ್ ಹತ್ತಿಸಿ ಕೊಲೆ ಮಾಡಲು ಪ್ಲಾನ್ ಮಾಡಿದ್ದ ಎಂದು ಹೇಳಲಾಗುತ್ತಿದೆ.

ಕೊಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಗಬ್ಬೂರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 307ಕಾಯ್ದೆಯಡಿ ಕೇಸ್ ದಾಖಲಾಗಿದೆ. ಇನ್ನು ಸುಮನ್ ಮತ್ತು ಶ್ರೀನಿವಾಸ್ ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾ ಎಸ್ಪಿ ಪ್ರಕಾಶ ನಿಕ್ಕಂ ಟಿವಿ9ಗೆ ಮಾಹಿತಿ ನೀಡಿದ್ದಾರೆ.

murder attempt case

ಕಾರಿನ ಮೇಲೆ ಟಿಪ್ಪರ್ ಹತ್ತಿಸಿ ವ್ಯಕ್ತಿಯ ಕೊಲೆಗೆ ಯತ್ನಿಸಲಾಗಿದೆ.

ಇದನ್ನೂ ಓದಿ: ಬಾಲಕನ ಮರ್ಮಾಂಗ ಕತ್ತರಿಸಿ, ಚಿತ್ರಹಿಂಸೆ ನೀಡಿ ಕೊಲೆ: ಭೀಮಾ ನದಿಯ ದಡದಲ್ಲಿ ವಿದ್ಯಾರ್ಥಿ ಶವ ಪತ್ತೆ