ಕೇವಲ 1 ವರ್ಷ ಹಿಂದೆಷ್ಟೇ ನಿರ್ಮಿಸಲಾಗಿದ್ದ ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿತ, ವಿದ್ಯಾರ್ಥಿನಿಗೆ ಗಾಯ
ರಾಯಚೂರು ತಾಲೂಕಿನ ಅರಸಿಗೇರ ಗ್ರಾಮದದಲ್ಲಿ ಕೇವಲ ಒಂದು ವರ್ಷದ ಹಿಂದೆ ಅಷ್ಟೇ ನಿರ್ಮಿಸಲಾಗಿದ್ದ ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿದುಬಿದ್ದಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿಗೆ ಗಾಯವಾಗಿದೆ. ಇನ್ನು ಶಾಲೆಯ ಕಾಮಗಾರಿ ಎಷ್ಟರ ಮಟ್ಟಿಗೆ ಗುಣಮಟ್ಟವಾಗಿದೆ ಎನ್ನುವುದು ಸಾಬೀತಾಗಿದೆ.
ರಾಯಚೂರು, (ಡಿಸೆಂಬರ್ 28): ಕೇವಲ ಒಂದು ವರ್ಷದ ಹಿಂದೆ ಅಷ್ಟೇ ನಿರ್ಮಾಣವಾಗಿದ್ದ ಸರ್ಕಾರಿ ಶಾಲೆಯ ಮೇಲ್ಚಾವಣಿ(Govt School roof) ಕುಸಿದುಬಿದ್ದಿದೆ. ರಾಯಚೂರು (Raichur) ತಾಲೂಕಿನ ಅರಸಿಗೇರ ಗ್ರಾಮದ ಸರ್ಕಾರಿ ಶಾಲೆ ಮೇಲ್ಚಾವಣಿ ಕುಸಿದುಬಿದ್ದಿದ್ದು, ಓರ್ವ ವಿದ್ಯಾರ್ಥಿನಿಗೆ ಗಾಯವಾಗಿದೆ. ನಿರ್ಮಿತಿ ಕೇಂದ್ರದ ವತಿಯಿಂದ ಕೇವಲ ಒಂದು ವರ್ಷದ ಹಿಂದೆ ಶಾಲಾ ಕಟ್ಟಡ ನಿರ್ಮಿಸಲಾಗಿತ್ತು. ಆದ್ರೆ, ಇದೀಗ ಒಂದೇ ವರ್ಷದ ಶಾಲೆಯ ಮೇಲ್ಚಾವಣಿ ಕುಸಿದಿದ್ದು, ಕಾಮಗಾರಿ ಎಷ್ಟು ಗುಣಮಟ್ಟವಾಗಿ ಮಾಡಿದ್ದಾರೆ ಎನ್ನುವುದು ಸಾಬೀತಾಗಿದೆ.
ಕಳಪೆ ಕಾಮಗಾರಿ ಮಾಡಿದ ಹಿನ್ನೆಲೆಯಲ್ಲಿ ಕೇವಲ ಒಂದೇ ವರ್ಷದಲ್ಲಿ ಶಾಲೆ ಮೇಲ್ಚಾವಣಿ ಕುಸಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದ್ರೆ, ಈ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಶಾಲೆ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಾಯವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9ಗೆ ಅರಸಿಗೆರಾ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ನರೇಶ್ ಪ್ರತಿಕ್ರಿಯಿಸಿದ್ದು, ನಾಲ್ಕು ವಿದ್ಯಾರ್ಥಿಗಳಿಗೆ ಗಾಯವಾಗಿದೆ ಎನ್ನುವುದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕೇವಲ ಐದನೇ ತರಗತಿ ವಿದ್ಯಾರ್ಥಿನಿ ಚಂದ್ರಕಲಾ ಎನ್ನುವ ಬಾಲಕಿಗೆ ಮಾತ್ರ ಸಣ್ಣ ಪುಟ್ಟ ಗಾಯಗಳಾಗಿವೆ. ಆಕೆಗೆ ಚಿಕಿತ್ಸೆ ಕೊಡಿಸಲಾಗಿದ್ದು ಈಗಾಗಲೇ ಆಕೆ ಮತ್ತೆ ಶಾಲೆಗೆ ಬರುತ್ತಿದ್ದಾಳೆ. ಘಟನೆ ನಡೆದ ದಿನವೇ ವಿದ್ಯಾರ್ಥಿನಿ ಚೇತರಿಸಿಕೊಂಡಿದ್ದಾಳೆ ಎಂದು ಸ್ಪಷ್ಟಪಡಿಸಿದರು.
Published On - 5:54 pm, Thu, 28 December 23