Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು ಕೃಷ್ಣಾ ನದಿ ಬ್ರಿಡ್ಜ್ ಕೆಳಗೆ ವಿಗ್ರಹ ಪತ್ತೆ ವಿಚಾರ: ಕ್ಷಣಕ್ಷಣಕ್ಕೂ ಕುತೂಹಲ, 500 ವರ್ಷಗಳ ಇತಿಹಾಸ ರಿವೀಲ್!

ಕೃಷ್ಣಾ ನದಿಯಲ್ಲಿ ಸಿಕ್ಕ ವಿಗ್ರಹಗಳ ಪೈಕಿ ಎರಡನ್ನ ತೆಲಂಗಾಣ ಪುರಾತತ್ವ ಇಲಾಖೆ ವಶಕ್ಕೆ ಪಡೆದಿತ್ತು. ರಾಜ್ಯದ ಪುರಾತತ್ವ ಇಲಾಖೆ ಒಂದು ವಿಗ್ರಹ ಪಡೆದಿತ್ತು. ಆ ಪೈಕಿ ತೆಲಂಗಾಣ ಪುರಾತ್ವ ಇಲಾಖೆ ನಡೆಸಿದ ಪ್ರಾಥಮಿಕ ಸಂಶೋಧನೆ ವೇಳೆ ವಿಷ್ಣುವಿನ ದಶಾವತಾರದ ವಿಗ್ರಹ ಹಾಗೂ ಮತ್ತೊಂದು ವಿಗ್ರಹದ ಇತಿಹಾಸದ ಕೆಲ ಮಾಹಿತಿ ಸಿಕ್ಕಿದ್ದು, ಈ ಮೂರ್ತಿಗಳು ಸುಮಾರು 400-500 ವರ್ಷಗಳ ಹಳೆಯವು ಅಂತ ಸ್ಪಷ್ಟಪಡಿಸಿದೆ.

ರಾಯಚೂರು ಕೃಷ್ಣಾ ನದಿ ಬ್ರಿಡ್ಜ್ ಕೆಳಗೆ ವಿಗ್ರಹ ಪತ್ತೆ ವಿಚಾರ: ಕ್ಷಣಕ್ಷಣಕ್ಕೂ ಕುತೂಹಲ, 500 ವರ್ಷಗಳ ಇತಿಹಾಸ ರಿವೀಲ್!
ಕೃಷ್ಣಾ ನದಿ ಬ್ರಿಡ್ಜ್​​ನಲ್ಲಿ ವಿಗ್ರಹಗಳ ಪತ್ತೆ ವಿಚಾರ, ಇತಿಹಾಸ ರಿವೀಲ್
Follow us
ಭೀಮೇಶ್​​ ಪೂಜಾರ್
| Updated By: ಸಾಧು ಶ್ರೀನಾಥ್​

Updated on:Mar 09, 2024 | 12:10 PM

ತೆಲಂಗಾಣ ಗಡಿಯ ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣುವಿನ ದಶಾವತಾರದ ಮೂರ್ತಿಗಳ ಅಸಲಿ ಸತ್ಯ ಬಯಲಾಗಿದೆ. ತೆಲಂಗಾಣದ ಪುರಾತತ್ವ ಇಲಾಖೆಯ (Archaeological Survey of India) ಸಂಶೋಧನೆ ವೇಳೆ ಆ ಮೂರ್ತಿಗಳು ನೂರಾರು ವರ್ಷಗಳ ಹಳೆಯ ಇತಿಹಾಸವನ್ನ ಬಿಚ್ಚಿಟ್ಟಿದ್ದು, ರಾಜ್ಯದ ಪುರಾತ್ವ ಕೂಡ ಇತಿಹಾಸ ಕೆದಕುತ್ತಿವೆ. ಹೌದು..ಇದೇ ಫೇಬ್ರವರಿ 5 ನೇ ತಾರಿಕು.. ರಾಯಚೂರು ಹಾಗೂ ತೆಲಂಗಾಣ ಗಡಿಯಲ್ಲಿರೊ ಕೃಷ್ಣಾ ನದಿಯಲ್ಲಿ ವಿಷ್ಣುವಿನ ದಶಾವತರಾದ ವಿಗ್ರಹಗಳು ಹಾಗೂ ಶಿವಲಿಂಗ ಪತ್ತೆಯಾಗಿತ್ತು. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ರಾಯಚೂರು ತಾಲ್ಲೂಕಿನ ದೇವಸುಗುರು ಗ್ರಾಮ ಹಾಗೂ ತೆಲಂಗಾಣದ ಗಡಿ ಭಾಗದ ಜನ ವಿಗ್ರಹ ಪತ್ತೆ ಬೆನ್ನಲ್ಲೇ ಅಖಾಡಕ್ಕೆ ಇಳಿದಿದ್ರು. ವಿಗ್ರಹ ನಮಗೆ ಸೇರಿದ್ದು ಅಂತ ಎರಡು ರಾಜ್ಯಗಳ ಗಡಿ ಭಾಗದ ಜನ ವಾದ ಮಾಡಿದ್ರು.

ಈ ಭಾಗದಲ್ಲಿ ಒಂದೊಂದು ರೀತಿಯ ಐತಿಹಾಸಿಕ ಹಿನ್ನೆಲೆ ಹಾಗೂ ವೈಶಿಷ್ಟ್ಯವಿರೊ ಬಗ್ಗೆ ಇತಿಹಾಸ ತಜ್ಞರು ಹೇಳಿದ್ರು. 11 ನೇ ಶತಮಾನದ ಕಲ್ಯಾಣ ಚಾಲುಕ್ಯರಿಗೆ ಸೇರಿದ ವಿಗ್ರಹಗಳಿವು ಅಂತ ಹೇಳಲಾಗಿತ್ತು. ಅಷ್ಟೇ ಅಲ್ಲ ವಿಗ್ರಹ ಸಿಕ್ಕ ಸ್ಥಳ ಹಾಗೂ ರಾಯಚೂರಿನಲ್ಲಿ ಸುಮಾರು 163 ಯುದ್ಧಗಳು ನಡೆದಿದ್ವು. ಹೀಗಾಗಿ ಪತ್ತೆಯಾದ ವಿಗ್ರಹಗಳಿಂದ ಮಣ್ಣಲ್ಲಿ ಮಣ್ಣಾಗಿ ಹೋಗಿರೊ ಅದೆಷ್ಟೋ ಐತಿಹಾಸ ಸತ್ಯ ಹೊರಬರಹುದು ಅಂತ ಜನ ನಿರೀಕ್ಷಿಸಿದ್ರು. ಅದರಂತೆ ಈಗ ಪುರಾತತ್ವ ಇಲಾಖೆ ಸಂಶೋಧನೆ ವೇಳೆ ವಿಗ್ರಹಗಳ ಇತಿಹಾಸ ರಿವೀಲ್ ಆಗಿದೆ.

ಹೌದು.. ಕೃಷ್ಣಾ ನದಿಯಲ್ಲಿ ಸಿಕ್ಕ ವಿಗ್ರಹಗಳ ಪೈಕಿ ಎರಡನ್ನ ತೆಲಂಗಾಣ ಪುರಾತತ್ವ ಇಲಾಖೆ ವಶಕ್ಕೆ ಪಡೆದಿತ್ತು. ರಾಜ್ಯದ ಪುರಾತತ್ವ ಇಲಾಖೆ ಒಂದು ವಿಗ್ರಹ ಪಡೆದಿತ್ತು. ಆ ಪೈಕಿ ಬಾರ್ಡರ್​​ನಲ್ಲಿ ತೆಲಂಗಾಣದ ವ್ಯಾಪ್ತಿಗೆ ವಿಗ್ರಹ ಸಿಕ್ಕಿರೊ ಹಿನ್ನೆಲೆ ಅವುಗಳ ಬಗ್ಗೆ ಗಮನಹರಿಸುವಂತೆ ರಾಯಚೂರು ಜಿಲ್ಲಾಡಳಿತ ತೆಲಂಗಾಣ ಪುರಾತತ್ವ ಇಲಾಖೆಗೆ ಸೂಚಿಸಿತ್ತು. ಆ ಪೈಕಿ ತೆಲಂಗಾಣ ಪುರಾತ್ವ ಇಲಾಖೆ ನಡೆಸಿದ ಪ್ರಾಥಮಿಕ ಸಂಶೋಧನೆ ವೇಳೆ ವಿಷ್ಣುವಿನ ದಶಾವತಾರದ ವಿಗ್ರಹ ಹಾಗೂ ಮತ್ತೊಂದು ವಿಗ್ರಹದ ಇತಿಹಾಸದ ಕೆಲ ಮಾಹಿತಿ ಸಿಕ್ಕಿದ್ದು, ಈ ಮೂರ್ತಿಗಳು ಸುಮಾರು 400-500 ವರ್ಷಗಳ ಹಳೆಯ ಮೂರ್ತಿಗಳು ಇರಬಹುದು ಅಂತ ಸ್ಪಷ್ಟಪಡಿಸಿದೆ.

ಈ ಬಗ್ಗೆ ಖುದ್ದು ರಾಯಚೂರು ಜಿಲ್ಲಾಡಳಿತಕ್ಕೆ ತೆಲಂಗಾಣ ಪುರಾತತ್ವ ಇಲಾಖೆ ಮಾಹಿತಿ ನೀಡಿದ್ದು ಪ್ರಾಥಮಿಕ ಸಂಶೋಧನೆಯ ಮಾಹಿತಿ ನೀಡಿದ್ದಾರೆ. ಅದರಲ್ಲಿ 400 ವರ್ಷಗಳ ಹಳೆಯ ಇತಿಹಾಸದ ಮಾಹಿತಿ ನೀಡಿದ್ದು ಪೂರ್ಣ ಪ್ರಮಾಣದ ಸಂಶೋಧನೆ ಮುಂದುವರೆದಿದೆ ಎಂದು ಚಂದ್ರಶೇಖರ್ ನಾಯಕ್, ರಾಯಚೂರು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇತ್ತ ರಾಜ್ಯ ಪುರಾತ್ವ ಇಲಾಖೆಯ ವಶದಲ್ಲಿರೊ ವಿಗ್ರಹದ ಬಗ್ಗೆಯೂ ಸಂಶೋಧನೆ ನಡೆಸಲಾಗ್ತಿದೆ. ಅದರಲ್ಲಿ ಅವೆಲ್ಲಾ ಪುರಾತನ ವಿಗ್ರಹಗಳು ಅಂತಾದ್ರೆ ಸಂಶೋಧನೆ ಮುಂದುವರೆಯುತ್ವೆ. ಇಲ್ದಿದ್ರೆ ಅವುಗಳ ಬಗ್ಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಡಳಿತ ತೀರ್ಮಾನಿಸುತ್ತದೆ. ಆದ್ರೆ ಇಂಥ ಪುರಾತನ ವಿಗ್ರಹಗಳ ಬಗ್ಗೆ ಹೆಚ್ಚೆಚ್ಚು ಸಂಶೋಧನೆಗಳು ನಡೆದು, ಅವುಗಳ ಇತಿಹಾಸ ಈಗಿನ ಪೀಳಿಗೆಗೆ ತಿಳಿಯಬಿಡಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:10 pm, Sat, 9 March 24