ಗುತ್ತಿಗೆ ಕಾರ್ಮಿಕರ ತುತ್ತಿಗೂ ಮಣ್ಣು: ವರ್ಷಗಟ್ಟಲೇ ದುಡಿದವರಿಗೆ ದೋಖಾ!
ರಾಯಚೂರು: ಅನ್ನದಾತ ನಾಡಿನ ಜೀವನಾಡಿ. ಕಷ್ಟಪಟ್ಟು ದುಡಿಯುವ ರೈತರಿಗೆ ಜಲಾಶಯಗಳೇ ದಿಕ್ಕು. ಹೀಗೆ ಡ್ಯಾಂನಿಂದ ಬರುವ ನೀರನ್ನು ಅಚ್ಚುಕಟ್ಟಾಗಿ ವಿತರಿಸುವ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆ ಕಂಪನಿಯ ವಂಚಕ ಬುದ್ಧಿಯಿಂದ ಕೋಟ್ಯಂತರ ರೂಪಾಯಿ ದೋಖಾ ನಡೆದಿದೆ. ಗುತ್ತಿಗೆ ಕಾರ್ಮಿಕರ ತುತ್ತಿಗೂ ಮಣ್ಣು..! ತುಂಗಭದ್ರಾ ಜಲಾಶಯ ನಾಡಿನ ಪಾಲಿಗೆ ದೊಡ್ಡ ಕೊಡುಗೆ ನೀಡ್ತಿದೆ. ಕೋಟ್ಯಂತರ ಜನರ ಕುಡಿಯುವ ನೀರಿನ ಮೂಲವಾಗಿದ್ದರೆ, ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನೂ ಹಸಿರಾಗಿಸುತ್ತಿದೆ. ಆದ್ರೆ ಡ್ಯಾಂನಿಂದ ಬಿಡುಗಡೆಯಾಗ್ತಿರುವ ನೀರನ್ನು ನಿರ್ವಹಣೆ […]
ರಾಯಚೂರು: ಅನ್ನದಾತ ನಾಡಿನ ಜೀವನಾಡಿ. ಕಷ್ಟಪಟ್ಟು ದುಡಿಯುವ ರೈತರಿಗೆ ಜಲಾಶಯಗಳೇ ದಿಕ್ಕು. ಹೀಗೆ ಡ್ಯಾಂನಿಂದ ಬರುವ ನೀರನ್ನು ಅಚ್ಚುಕಟ್ಟಾಗಿ ವಿತರಿಸುವ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆ ಕಂಪನಿಯ ವಂಚಕ ಬುದ್ಧಿಯಿಂದ ಕೋಟ್ಯಂತರ ರೂಪಾಯಿ ದೋಖಾ ನಡೆದಿದೆ.
ಗುತ್ತಿಗೆ ಕಾರ್ಮಿಕರ ತುತ್ತಿಗೂ ಮಣ್ಣು..! ತುಂಗಭದ್ರಾ ಜಲಾಶಯ ನಾಡಿನ ಪಾಲಿಗೆ ದೊಡ್ಡ ಕೊಡುಗೆ ನೀಡ್ತಿದೆ. ಕೋಟ್ಯಂತರ ಜನರ ಕುಡಿಯುವ ನೀರಿನ ಮೂಲವಾಗಿದ್ದರೆ, ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನೂ ಹಸಿರಾಗಿಸುತ್ತಿದೆ. ಆದ್ರೆ ಡ್ಯಾಂನಿಂದ ಬಿಡುಗಡೆಯಾಗ್ತಿರುವ ನೀರನ್ನು ನಿರ್ವಹಣೆ ಮಾಡುತ್ತಿರುವ ಕಾರ್ಮಿಕರ ಬದುಕು ಅಕ್ಷರಶಃ ಬೀದಿಗೆ ಬಿದ್ದಂತಾಗಿದೆ.
ಬಡ ಕಾರ್ಮಿಕರಿಗೆ ಬರೋಬ್ಬರಿ ₹40 ಕೋಟಿ ಮೋಸ..? ಅಂದಹಾಗೆ ತುಂಗಭದ್ರಾ ಕಾಲುವೆ ರಾಯಚೂರು ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಸುಮಾರು 20 ತಿಂಗಳಿಂದ ವೇತನವನ್ನೇ ನೀಡಿಲ್ಲವಂತೆ. ಇದಕ್ಕೆ ಗುತ್ತಿಗೆ ಕಂಪನಿ ಕಾರಣ ಅಂತಾ ಆರೋಪಿಸಲಾಗ್ತಿದೆ. ಹೀಗೆ ಕಾರ್ಮಿಕರಿಗೆ ವೇತನ ನೀಡದೆ ಸುಮಾರು 40 ಕೋಟಿ ರೂಪಾಯಿ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಮಾತುಕತೆ ನಡೆಸಿದ್ರೂ ಯಾವುದೇ ಪ್ರಯೋಜವಾಗಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಇದು ಗುತ್ತಿಗೆ ಕಾರ್ಮಿಕರ ತುತ್ತಿಗೂ ಮಣ್ಣು ಹಾಕಿದಂತಾಗಿದೆ.
800 ಕಾರ್ಮಿಕರಿಂದ ಪ್ರತಿಭಟನೆ ಎಚ್ಚರಿಕೆ..! ಸಮಸ್ಯೆ ಸುಳಿಯಲ್ಲಿ ಸಿಲುಕಿ ನರಳಾಡುತ್ತಿರುವ ಕಾರ್ಮಿಕ ಕುಟುಂಬಗಳಿಗೆ, ವೇತನವೇ ಆಧಾರ. ಆದರೆ ಗುತ್ತಿಗೆ ಕಂಪನಿ ಮಾತ್ರ ಇವರೆಲ್ಲರಿಗೂ ಮೋಸ ಮಾಡಿದೆ. ಇದರಿಂದ ನಿತ್ಯ ಕಾರ್ಮಿಕರು ಪರಿತಪಿಸುತ್ತಿದ್ದಾರೆ. ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡುತ್ತಿದ್ದಾರೆ.
ಒಟ್ನಲ್ಲಿ ಯಾರೋ ಮಾಡಿದ ತಪ್ಪಿಗೆ, ಮತ್ತಿನ್ಯಾರೋ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದ್ರೂ ಸಚಿವರು ಹಾಗೂ ಸರ್ಕಾರ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಸಂಕಷ್ಟದಲ್ಲಿರುವವರ ನೆರವಿಗೆ ನಿಲ್ಲಬೇಕಿದೆ.
Published On - 1:35 pm, Tue, 18 February 20