ರಾಯಚೂರಿನಲ್ಲಿ ಲಾರಿ, 2 ಗೂಡ್ಸ್ ವಾಹನಗಳ ಮಧ್ಯೆ ಸರಣಿ ಅಪಘಾತ: ಐವರು ಸಾವು
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಲಾರಿ ಮತ್ತು ಕುರಿ ಸಾಗಿಸುತ್ತಿದ್ದ ಎರಡು ಗೂಡ್ಸ್ ವಾಹನಗಳ ನಡುವೆ ಈ ದುರಂತ ಸಂಭವಿಸಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ರಾಯಚೂರು, ಜನವರಿ 20: ಲಾರಿ ಮತ್ತು ಎರಡು ಗೂಡ್ಸ್ ವಾಹನ ಮಧ್ಯೆ ಸರಣಿ ಅಪಘಾತ (Accident) ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಕನ್ನಾರಿ ಕ್ರಾಸ್ ಬಳಿ ನಡೆದಿದೆ. ಆಂಧ್ರ ಮೂಲದ ಸಣ್ಣ ಯಲ್ಲಪ್ಪ(45), ಹರಿ(25), ರಂಗನಾಥ(12) ಬಸವರಾಜ್(40) ಹಾಗೂ ಟಾಟಾ ಏಸ್ ವಾಹನದ ಚಾಲಕ ಮೃತರು. ಭೀಕರ ಅಪಘಾತದಲ್ಲಿ ಕೆಲ ಕುರಿಗಳು ಕೂಡ ಸಾವನ್ನಪ್ಪಿವೆ. ಸಿಂಧನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಡೆದದ್ದೇನು?
ಟಾಟಾ ಏಸ್ ಮತ್ತು ಬೊಲೆರೊ ಪಿಕಪ್ ವಾಹನದಲ್ಲಿ ಕುರಿಗಳನ್ನು ತುಂಬಿಕೊಂಡು ಒಟ್ಟು ಎಂಟು ಜನರು ಹೊರಟಿದ್ದರು. ಬಳ್ಳಾರಿಯಿಂದ ಸಿಂಧನೂರು ಕಡೆಗೆ ಕುರಿ ತುಂಬಿಕೊಂಡು ಒಂದರ ಹಿಂದೆ ಒಂದರಂತೆ 2 ವಾಹನ ಹೊರಟಿದ್ದವು. ಅತೀ ವೇಗದಲ್ಲಿದ್ದ ಹಿನ್ನೆಲೆ ನಿಯಂತ್ರಣ ತಪ್ಪಿ ಎರಡು ವಾಹನಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಸ್ಥಳೀಯ ಸಿಂಧನೂರು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಭೀಕರ ಅಪಘಾತದಲ್ಲಿ ಕೆಲ ಕುರಿಗಳು ಕೂಡ ಸಾವನ್ನಪ್ಪಿವೆ.
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರರಿಬ್ಬರು ಸಾವು, ಮತ್ತೊಬ್ಬನಿಗೆ ಗಾಯ
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರರಿಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಾಯವಾಗಿರುವಂತಹ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಉಡವಗೆರೆ ಗ್ರಾಮದ ಬಳಿ ನಡೆದಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್ ಅಪಘಾತ, ರಾಯರ ದರ್ಶನಕ್ಕೆ ತೆರಳುತ್ತಿದ್ದವರು ಪವಾಡ ಸದೃಶವಾಗಿ ಪಾರು
ಬೆಟ್ಟದಾಸಿಪಾಳ್ಯ ಗ್ರಾಮದ ನಿವಾಸಿಯಾಗಿರುವ ಮಂಜುನಾಥ್(33) ಮತ್ತು ತೂಗಿನಕೆರೆ ಗ್ರಾಮದ ನಿವಾಸಿಯಾಗಿರುವ ನಾಗರಾಜ್(55) ಮೃತರು. ಸತೀಶ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಮೈಸೂರಿನ ಉದಯಗಿರಿಯಲ್ಲಿ ಮತ್ತೆ ಝಳಪಿಸಿದ ಲಾಂಗ್, ಮಚ್ಚುಗಳು: ಭಯಾನಕ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ
ನಾಗರಾಜು ಹಾಗೂ ಸತೀಶ್ ಬೆಂಗಳೂರಿನಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಬೆಂಗಳೂರಿನಿಂದ ಮಾಗಡಿ ಪಟ್ಟಣಕ್ಕೆ ಬಂದಿದ್ದ ಇವರು ಸ್ನೇಹಿತ ನಾಗರಾಜ್‌ನನ್ನು ತೂಗಿನಕೆರೆ ಗ್ರಾಮಕ್ಕೆ ಬಿಡಲು ಹೋಗುವಾಗ ಅಪಘಾತ ಸಂಭವಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 10:21 pm, Tue, 20 January 26