ಕಾಂಗ್ರೆಸ್​ನಿಂದ ಗೆದ್ದು ಕೆಆರ್‌ಪಿ‌ಪಿ ಪರ ಪ್ರಚಾರ: ಲಿಂಗಸುಗೂರು ಪುರಸಭೆಯ ನಾಲ್ವರು ಸದಸ್ಯರ ಸದಸ್ಯತ್ವ ಅನರ್ಹ

| Updated By: ರಮೇಶ್ ಬಿ. ಜವಳಗೇರಾ

Updated on: Sep 05, 2023 | 10:37 AM

ಕಾಂಗ್ರೆಸ್​ನಿಂದ ಗೆದ್ದಿದ್ದ ಲಿಂಗಸುಗೂರು ಪುರಸಭೆಯ ನಾಲ್ವರು ಸದಸ್ಯರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಆರ್​ಪಿಸಿ ಪರ ಪ್ರಚಾರ ಮಾಡಿದ್ದು, ಇದೀಗ ಆರೋಪ ಸಾಬೀತಾಗಿದ್ದರಿಂದ ಈ ನಾಲ್ವರು ತಮ್ಮ ಸದಸ್ಯತ್ವನ್ನು ಕಳೆದುಕೊಂಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ನಾಲ್ವರ ಸದಸ್ಯತ್ವವನ್ನು ಅನರ್ಹಗೊಳಿಸಿ ಜಿಲ್ಲಾ ದಂಡಾಧಿಕಾರಿಗಳ ನಾಯಾಲಯ ತೀರ್ಪು ನೀಡಿದೆ.

ಕಾಂಗ್ರೆಸ್​ನಿಂದ ಗೆದ್ದು ಕೆಆರ್‌ಪಿ‌ಪಿ ಪರ ಪ್ರಚಾರ: ಲಿಂಗಸುಗೂರು ಪುರಸಭೆಯ ನಾಲ್ವರು ಸದಸ್ಯರ ಸದಸ್ಯತ್ವ ಅನರ್ಹ
ಅನರ್ಹಗೊಂಡವರು
Follow us on

ರಾಯಚೂರು, (ಸೆಪ್ಟೆಂಬರ್​ 05): ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023,) ಗಾಲಿ ಜನಾರ್ದನ ರೆಡ್ಡಿ ಅವರ ಕೆಆರ್​ಪಿಪಿ ಪಕ್ಷದ (KRPP) ಪರ ಪ್ರಚಾರ ಮಾಡಿದ್ದ ಲಿಂಗಸುಗೂರು ಪುರಸಭೆಯ ನಾಲ್ವರು ಕಾಂಗ್ರೆಸ್​ ಸದಸ್ಯರ ಸದಸ್ಯತ್ವ ಅನರ್ಹಗೊಂಡಿದೆ. ಕಾಂಗ್ರೆಸ್​ನಿಂದ ಆಯ್ಕೆಯಾಗಿ KRPP ಪರ ಪ್ರಚಾರ ಮಾಡಿರುವ ಆರೋಪ ಸಾಬೀತು ಆಗಿರುವ ಹಿನ್ನೆಲೆಯಲ್ಲಿ ಫಾತೀಮಾ, ಮೌಲಾಸಾಬ್, ಎ.ಪ್ರಮೋದ್ ಕುಮಾರ್, ಶರಣಪ್ಪ ಅವರ ಲಿಂಗಸುಗೂರು ಪುರಸಭೆ ಸದಸ್ಯತ್ವವನ್ನು ಅನರ್ಹಗೊಳಿಸಿ ಜಿಲ್ಲಾ‌ ದಂಡಾಧಿಕಾರಿಗಳ ನ್ಯಾಯಾಲಯ ತೀರ್ಪು ನೀಡಿದೆ. ಫಾತೀಮಾ, ಮೌಲಾಸಾಬ್, ಎ.ಪ್ರಮೋದ್ ಕುಮಾರ್, ಶರಣಪ್ಪ ಅನರ್ಹಗೊಂಡವರು.

ಫಾತೀಮಾ, ಮೌಲಾಸಾಬ್, ಎ.ಪ್ರಮೋದ್ ಕುಮಾರ್, ಶರಣಪ್ಪ ಎನ್ನುವವರು ಲಿಂಗಸುಗೂರು ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಙರ್ಧಿಸಿ ಗೆಲುವು ಸಾಧಿಸಿದ್ದರು. ಆದ್ರೆ, ವಿಧಾನಸಭೆ ಚುನಾವಣೆ ವೇಳೆ ಬಹಿರಂಗವಾಗಿ ಕೆಆರ್‌ಪಿಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಇದು ಜಿಲ್ಲಾ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಅನರ್ಹ ಬೆನ್ನಲ್ಲೇ ಇದೀಗ ತಂದೆ ಹೆಚ್​.ಡಿ.ರೇವಣ್ಣ ಶಾಸಕ ಸ್ಥಾನಕ್ಕೂ ಕುತ್ತು

ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಪಕ್ಷ‌ ವಿರೋಧಿ ಚಟುವಟಿಕೆ ಮೇರೆಗೆ ಇವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಮನವಿ ಮಾಡಿದ್ದರು. ಇದನ್ನು ವಿಚಾರಣೆ ನಡೆಸಿದ್ದ ಜಿಲ್ಲಾ‌ ದಂಡಾಧಿಕಾರಿಗಳ ನ್ಯಾಯಾಲಯವು, ಪಕ್ಷ ವಿರೋಧಿ ಚಟುವಟಿಕೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಾಲ್ವರ ಸದಸ್ಯತ್ವವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಕಾಂಗ್ರೆಸ್​ ಮೇಲುಗೈ ಸಾಧಿಸಿದೆ.

ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ