AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಕೋಟೆ ಬಳಿ ನಿರ್ಮಾಣವಾಗುತ್ತಿರುವ ದರ್ಗಾ ಕಮಾನ್​ ತೆರವಿಗೆ ಪುರಾತತ್ವ ಇಲಾಖೆ ಆದೇಶ

ದರ್ಗಾದ ಎದುರು ಪುರಾತನ ಕೋಟೆ ಜಾಗದಲ್ಲಿ ಕಮಾನ್ ನಿರ್ಮಾಣ ವಿವಾದ ಬೆನ್ನಲ್ಲೆ ರಾಯಚೂರಿನ ವಿವಾದಿತ ಸ್ಥಳಕ್ಕೆ ಕಲಬುರಗಿ ವಲಯದ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಪರಿಶೀಲನೆ ಬಳಿಕ ಕಮಾನ್ ತೆರವಿಗೆ ಆದೇಶ ಹೊರಡಿಸಲಾಗಿದೆ.

ರಾಯಚೂರು: ಕೋಟೆ ಬಳಿ ನಿರ್ಮಾಣವಾಗುತ್ತಿರುವ ದರ್ಗಾ ಕಮಾನ್​ ತೆರವಿಗೆ ಪುರಾತತ್ವ ಇಲಾಖೆ ಆದೇಶ
ದರ್ಗಾ ಕಮಾನ್​
ಭೀಮೇಶ್​​ ಪೂಜಾರ್
| Edited By: |

Updated on: Dec 05, 2023 | 9:47 AM

Share

ರಾಯಚೂರು, ಡಿ.05: ರಾಯಚೂರು ನಗರದ ತೀನ್ ಕಂದೀಲ್ ಸರ್ಕಲ್ ಬಳಿ ಇರುವ ಹಜರತ್ ಸಯ್ಯದ್ ಶಾಹ ಅಲ್ಲಾವುದ್ದಿನ್ ದರ್ಗಾದ ಎದುರು ಕಮಾನ್ ನಿರ್ಮಿಸಲಾಗ್ತಿದೆ. ಈ ವಿಚಾರ ಧರ್ಮ ದಂಗಲ್​ಗೆ ಕಾರಣವಾಗಿತ್ತು. ಸದ್ಯ ಈಗ ಪುರಾತನ ಕೋಟೆ ಜಾಗದಲ್ಲಿನ ಕಮಾನ್ ತೆರವು ಮಾಡಲು ರಾಯಚೂರು (Raichur) ನಗರಸಭೆಗೆ ಪುರಾತತ್ವ ಇಲಾಖೆ ಆದೇಶ ಮಾಡಿದೆ. ಕರ್ನಾಟಕ ಪುರಾತತ್ವ ಇಲಾಖೆಯ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವದ ಸ್ಥಳಗಳು, ಅವಶೇಷಗಳ ಕಾಯ್ದೆಯಡಿ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ನಿಷೇಧವಿದೆ. ಆದರೂ ಕಾಮಗಾರಿ ಮಾಡಿರುವುದರಿಂದ ತೆರವಿಗೆ ಆದೇಶ ಹೊರಡಿಸಲಾಗಿದೆ.

ದರ್ಗಾದ ಎದುರು ಪುರಾತನ ಕೋಟೆ ಜಾಗದಲ್ಲಿ ಕಮಾನ್ ನಿರ್ಮಾಣ ವಿವಾದ ಬೆನ್ನಲ್ಲೆ ರಾಯಚೂರಿನ ವಿವಾದಿತ ಸ್ಥಳಕ್ಕೆ ಕಲಬುರಗಿ ವಲಯದ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಪರಿಶೀಲನೆ ಬಳಿಕ ಕಮಾನ್ ತೆರವಿಗೆ ಆದೇಶ ಹೊರಡಿಸಲಾಗಿದೆ. ನಿರ್ಮಾಣ ಹಂತದ ದರ್ಗಾದ ಕಮಾನ್ ರಾಜ್ಯ ಸಂರಕ್ಷಿತ ಕಟಿ ದರ್ವಾಜಾ ಸ್ಮಾರಕದ ಬಳಿ ಇದೆ. ಕಾಮಗಾರಿ ನಡೆದ ಸ್ಥಳವೂ ಕೋಟೆಯ ಸ್ಥಳವಾಗಿದೆ. ಸುರಕ್ಷಿತ ಸ್ಮಾರಕದ 100 ಮೀಟರ್ ನಿಷೇಧಿತ ಪ್ರದೇಶದ ವ್ಯಾಪ್ತಿಗೆ ಬರುತ್ತೆ. ನೂತನ ಕಮಾನ್ ಕಟ್ಟಡ ಕಾಮಗಾರಿ ಕಾನೂನು ಬಾಹಿರ ಮತ್ತು ನಿಷಿದ್ಧ. ಈ ಹಿನ್ನೆಲೆ ರಾಯಚೂರು ನಗರಸಭೆ ಕೂಡಲೇ ಕಮಾನ್ ಕಾಮಗಾರಿ ಸ್ಥಗಿತಗೊಳಿಸಬೇಕು. ಅನಧಿಕೃತ ಕಟ್ಟಡ ಕಾಮಗಾರಿ ತೆರವುಗೊಳಿಸುವಂತೆ ರಾಯಚೂರು ಪುರಾತತ್ವ ಇಲಾಖೆಯ ಕ್ಯೂರೇಟರ್​ಗೆ ಕಲಬುರ್ಗಿ ವಲಯದ ಪುರಾತತ್ವ ಇಲಾಖೆ ಪತ್ರ ಬರೆದು ತಿಳಿಸಿದೆ.

ಇನ್ನು ಇದೇ ದರ್ಗಾ ಕಮಾನ್ ಕಾಮಗಾರಿ ವಿರೋಧಿಸಿ ಬಿಜೆಪಿ ನಿಯೋಗ ಹೋರಾಟ ನಡೆಸಿ, ನಗರಸಭೆಗೆ ದೂರು ನೀಡಿತ್ತು. ಇತ್ತ ಬಿಜೆಪಿ ನಿಲುವು ಖಂಡಿಸಿ ಕಾಮಗಾರಿ ಸ್ಥಗಿತಗೊಳಿಸದಂತೆ ನಗರಸಭೆಗೆ ಮುಸ್ಲಿಂ ಸಮುದಾಯ ಮನವಿ ಮಾಡಿತ್ತು.

ಇದನ್ನೂ ಓದಿ: ದೇವಸ್ಥಾನದ ಕಾರ್ಯಕ್ಕೆ ತಮಟೆ ಬಾರಿಸಲು ನಿರಾಕರಿಸಿದಕ್ಕೆ ವ್ಯಕ್ತಿ ಮೇಲೆ ಹಲ್ಲೆ, ಜಾತಿ ನಿಂದನೆ

ಘಟನೆ ಹಿನ್ನೆಲೆ

ಹಜರತ್ ಸಯ್ಯದ್ ಶಾಹ ಅಲ್ಲಾವುದ್ದಿನ್ ದರ್ಗಾದ ಎದುರು ಕಮಾನ್ ನಿರ್ಮಿಸಲಾಗ್ತಿದೆ. ಈ ವಿಚಾರ ಧರ್ಮ ದಂಗಲ್​ಗೆ ಕಾರಣವಾಗಿದೆ. ದರ್ಗಾದ ಕಮಾಲ್​ ನಿರ್ಮಿಸುತ್ತಿರೊ ಪ್ರದೇಶದ ಬಳಿ ಐತಿಹಾಸಿಕ ರಾಯಚೂರು ಕೋಟೆ ಇದೆ. ಕರ್ನಾಟಕ ಪುರಾತತ್ವ ಇಲಾಖೆಯ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವದ ಸ್ಥಳಗಳು, ಅವಶೇಷಗಳ ಕಾಯ್ದೆಯಡಿ ಆಯಾ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ನಿಷೇಧವಿದೆ. ಅಷ್ಟೇ ಅಲ್ಲದೇ 200 ಮೀಟರ್ ಪ್ರದೇಶ ನಿಯಂತ್ರಿತ ಪ್ರದೇಶವಾಗಿರುತ್ತಿದೆ. ಹೀಗಾಗಿ ಈ ಕಮಾನ್ ನಿರ್ಮಿಸುತ್ತಿರೋದು ಕಾನೂನು ಬಾಹಿರ. ಕೂಡಲೇ ಕಮಾನ್ ಕಾಮಗಾರಿ ನಿಲ್ಲಿಸಬೇಕು ಅಂತ ಒತ್ತಾಯಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದವು.

ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ