ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕಾರ್ಮಿಕರಿಗೆ ಸೇರಬೇಕಿದ್ದ 1 ಕೋಟಿಗೂ ಅಧಿಕ ಕೂಲಿ ಹಣ ಗುಳುಂ!

ರಾಯಚೂರಿನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ನಿರ್ವಹಣೆ ಮಾಡುವ 222 ಗ್ಯಾಂಗ್‌ಮ್ಯಾನ್ ಕಾರ್ಮಿಕರ 80 ದಿನಗಳ 1,01,01,000 ರೂ. ಕೂಲಿ ಹಣವನ್ನು ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ಲೂಟಿ ಮಾಡಿರುವುದು ಬಯಲಾಗಿದೆ. ಕಲಬುರಗಿ ಕಾರ್ಮಿಕ ಪ್ರಾಧಿಕಾರವು ತನಿಖೆ ನಡೆಸಿ, ಮೂವರು ಇಂಜಿನಿಯರ್‌ಗಳಿಗೆ ಅಕ್ಟೋಬರ್ 22ರೊಳಗೆ ಕಾರ್ಮಿಕರಿಗೆ ವೇತನ ಹಾಗೂ ಪರಿಹಾರ ಮರುಪಾವತಿಸಲು ಕಟ್ಟುನಿಟ್ಟಿನ ಆದೇಶ ನೀಡಿದೆ.

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕಾರ್ಮಿಕರಿಗೆ ಸೇರಬೇಕಿದ್ದ 1 ಕೋಟಿಗೂ ಅಧಿಕ ಕೂಲಿ ಹಣ ಗುಳುಂ!
ತುಂಗಭದ್ರಾ ನೀರಾವರಿ ವಲಯ ಕಾರ್ಮಿಕ ಸಂಘದ ಸೆಕ್ರೆಟರಿ ಜಿ ಅಡವಿರಾವ್ ಮತ್ತು ಇತರರು
Edited By:

Updated on: Oct 16, 2026 | 9:50 AM

ಮುಖ್ಯಾಂಶಗಳು

  • ತುಂಗಭದ್ರಾ ಕಾಲುವೆಯ 222 ಕಾರ್ಮಿಕರ ಕೂಲಿ ಹಣ ಇಂಜಿನಿಯರ್‌ಗಳಿಂದ ಗುಳುಂ.
  • 80 ದಿನಗಳ ಒಟ್ಟು 1.01 ಕೋಟಿ ರೂ. ಹಣ ಲೂಟಿ ಬಯಲಾಗಿದೆ.
  • ಕಾರ್ಮಿಕರಿಗೆ ಪರಿಹಾರ ಸಹಿತ ಹಣ ನೀಡಲು ಪ್ರಾಧಿಕಾರ ಆದೇಶಿಸಿದೆ.

ರಾಯಚೂರು, ಅಕ್ಟೋಬರ್ 16: ಜಿಲ್ಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ನಿರ್ವಹಣೆ ಮಾಡುವ ಗ್ಯಾಂಗ್‌ಮ್ಯಾನ್ ಕಾರ್ಮಿಕರ ಕೂಲಿ ಹಣವನ್ನು ನೀರಾವರಿ ಇಲಾಖೆಯ ಕೆಲ ಇಂಜಿನಿಯರ್‌ಗಳು ಲಪಟಾಯಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ 222 ಕಾರ್ಮಿಕರ 80 ದಿನಗಳ ಕೂಲಿ ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿ ವಂಚಿಸಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.

ಕಲಬುರಗಿ ಕಾರ್ಮಿಕ ಪ್ರಾಧಿಕಾರಕ್ಕೆ ದೂರು ನೀಡಿದ ಕಾರ್ಮಿಕರು

2025ರ ಏಪ್ರಿಲ್‌ನಿಂದ ಜೂನ್ ತಿಂಗಳವರೆಗೆ ಕಾಲುವೆ ನಿರ್ವಹಣೆಯಲ್ಲಿ ತೊಡಗಿದ್ದ 222 ಕಾರ್ಮಿಕರಿಗೆ ಸೇರಬೇಕಿದ್ದ ಒಟ್ಟು 1,01,01,000 ರೂ. ಕೂಲಿ ಹಣವನ್ನು ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಕಾರ್ಮಿಕರು ಪ್ರಶ್ನಿಸಿದಾಗ ಇಂಜಿನಿಯರ್‌ಗಳು ಹಾರಿಕೆ ಉತ್ತರಗಳನ್ನು ನೀಡಿ ಸಬೂಬು ಹೇಳುತ್ತಾ ಬಂದಿದ್ದರು. ಇದರಿಂದ ನೊಂದ ಕಾರ್ಮಿಕರು ಕಲಬುರಗಿ ಕಾರ್ಮಿಕ ಪ್ರಾಧಿಕಾರಕ್ಕೆ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ಪ್ರಾಧಿಕಾರವು ತನಿಖೆ ಕೈಗೊಂಡಾಗ ಅಕ್ರಮ ಎಸಗಿರುವ ಸತ್ಯ ಹೊರಬಂದಿದೆ. ಪ್ರತಿಯೊಬ್ಬ ಕಾರ್ಮಿಕರ 40,000 ರೂ. ಕೂಲಿ ಹಣವನ್ನು ಇಂಜಿನಿಯರ್‌ಗಳು ಲೂಟಿ ಮಾಡಿರುವುದು ವಿಚಾರಣೆ ವೇಳೆ ಸಾಬೀತಾಗಿದೆ.

ಅಕ್ಟೋಬರ್ 22 ರವರೆಗೆ ಗಡುವು

ಈ ವಂಚನೆ ಗಂಭೀರವಾಗಿ ಪರಿಗಣಿಸಿರುವ ಕಲಬುರಗಿ ಕಾರ್ಮಿಕ ಪ್ರಾಧಿಕಾರವು ಮೂವರು ಇಂಜಿನಿಯರ್‌ಗಳಿಗೆ ಬಿಸಿ ಮುಟ್ಟಿಸಿದ್ದು, ಕೂಡಲೇ ಕಾರ್ಮಿಕರಿಗೆ ಹಣ ಮರುಪಾವತಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. 222 ಕಾರ್ಮಿಕರಿಗೆ ತಲಾ 40,000 ರೂ. ವೇತನ ಹಾಗೂ ಪರಿಹಾರದ ಮೊತ್ತವಾಗಿ 5,500 ರೂ. ಸೇರಿಸಿ ಪಾವತಿಸಲು ಸೂಚಿಸಲಾಗಿದೆ. ಒಟ್ಟು 1,01,01,000 ರೂ. ಮೊತ್ತವನ್ನು ಒಂದು ತಿಂಗಳ ಒಳಗೆ ಕಾರ್ಮಿಕರಿಗೆ ಪಾವತಿಸುವಂತೆ ಆದೇಶಿಸಲಾಗಿದ್ದು, ಅಕ್ಟೋಬರ್ 22 ರವರೆಗೆ ಗಡುವು ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
Loading...
Unable to load recommendations.
Follow Us