AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ-ಮಹದೇವಪ್ಪ ಭೇಟಿ ವೇಳೆ ಏನೆಲ್ಲ ಚರ್ಚೆ? ಇಲ್ಲಿದೆ ಎಕ್ಸ್​​ಕ್ಲೂಸಿವ್​​ ಮಾಹಿತಿ

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹೆಚ್.ಸಿ. ಮಹದೇವಪ್ಪ ವೈಮನಸ್ಸು ಮರೆತು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಳೆಯ ಬೇಸರ ಬದಿಗಿಟ್ಟು ಅಹಿಂದ ಶಕ್ತಿ ಬಲವರ್ಧನೆ ಹಾಗೂ ಮುಂದಿನ ರಾಜಕಾರಣದ ಕುರಿತು ಚರ್ಚಿಸಿದ್ದಾರೆ. ಭೇಟಿ ವೇಳೆ ಉಭಯ ನಾಯಕರ ನಡುವೆ ಏನಲ್ಲ ಚರ್ಚೆ ನಡೆದಿದೆ ಎಂಬುದರ ಕರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿದ್ದರಾಮಯ್ಯ-ಮಹದೇವಪ್ಪ ಭೇಟಿ ವೇಳೆ ಏನೆಲ್ಲ ಚರ್ಚೆ? ಇಲ್ಲಿದೆ ಎಕ್ಸ್​​ಕ್ಲೂಸಿವ್​​ ಮಾಹಿತಿ
ಸಿದ್ದರಾಮಯ್ಯ-ಮಹದೇವಪ್ಪ ಭೇಟಿ
ಪ್ರಮೋದ್​ ಶಾಸ್ತ್ರಿ ಜಿ.
| Edited By: |

Updated on: Nov 26, 2026 | 10:17 AM

Share

ಮೈಸೂರು, ನವೆಂಬರ್​​ 26: ವೈಮನಸ್ಸು ಮರೆತು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹೆಚ್​​.ಸಿ. ಮಹದೇವಪ್ಪ ಭೇಟಿಯಾಗಿದ್ದಾರೆ. ಮೈಸೂರಿನ ಸಿದ್ದರಾಮಯ್ಯ ನಿವಾಸದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದು, ನಾನು ನಿಮ್ಮ ವಿರೋಧಿ ಅಲ್ಲ ಸರ್ ಎಂದು ಈ ವೇಳೆ ಮಾಜಿ ಸಿಎಂಗೆ ಮಹಾದೇವಪ್ಪ ತಿಳಿಸಿದ್ದಾರೆ. ನಿಮ್ಮ ಜೊತೆ ತಾನು ಕಳೆದ 40 ವರ್ಷದಿಂದ ಇದ್ದೇನೆ. ಸಚಿವ ಸಂಪುಟ ಪುನಾರಚನೆ ವೇಳೆ ನನ್ನ ನಡೆಸಿಕೊಂಡ ರೀತಿ ಸರಿಯಿಲ್ಲ. ನಾನು ನಿಮ್ಮ ಆಪ್ತನಾಗಿದ್ದರೂ ಇತರರಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ ಎಂದವರು ಬೇಸರ ಹೊರಹಾಕಿದ್ದಾರೆ.

ಉಭಯ ನಾಯಕರ ನಡುವೆ ಏನೆಲ್ಲ ಮಾತುಕತೆ?

ನೀವು ಮುಖ್ಯಮಂತ್ರಿ ಅಲ್ಲದೇ ಇರುವಾಗ ನಾನು ಮಂತ್ರಿ ಆಗಬೇಕು ಎಂದು ಇರಲಿಲ್ಲ. ಆದರೆ ನನ್ನ ನಡೆಸಿಕೊಂಡ ರೀತಿಯ ಬಗ್ಗೆ ಬೇಸರವಾಗಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ. ಸಚಿವ ಸಂಪುಟ ಪುನಾರಚನೆ ವೇಳೆ ನಿಮ್ಮ ಹೆಸರನ್ನು ಮೊದಲ ಪಟ್ಟಿಯಲ್ಲಿ ಕೊಟ್ಟಿದ್ದೆ. ಆದರೆ ಹೈಕಮಾಂಡ್​ ನಿಮ್ಮ ಹೆಸರು ಪರಿಗಣಿಸಿಲ್ಲ. ರಾಜಕಾರಣದಲ್ಲಿ ಕೆಲವೊಮ್ಮೆ ವ್ಯತ್ಯಾಸ ಬರುವುದು ಸಹಜ. ನಾನು ಮುಖ್ಯಮಂತ್ರಿ ಆಗಿದ್ದರೆ ನೀವು ಮಂತ್ರಿ ಆಗಿರುತ್ತಿದ್ರಿ ಅಲ್ವಾ? ನನ್ನನ್ನೇ ಸಿಎಂ ಹುದ್ದೆಯಿಂದ ಇಳಿಸಿದ್ದಾರೆ ಅಲ್ವಾ? ಎಂದು ಸಿದ್ದರಾಮಯ್ಯ ಮಹದೇವಪ್ಪನವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ನಾನು ನಿಮ್ಮ ಸಹೋದರನಂತೆ. ರಾಜಕೀಯ ಹೊರತಾಗಿ ನಿಮ್ಮ ಜೊತೆಗಿನ ಸಂಬಂಧ ಮುಖ್ಯ. ಹಳೇದೆಲ್ಲ ಬದಿಗಿಟ್ಟು ಹೊಸ ರಾಜಕಾರಣ ಮಾಡೋಣ ಸರ್​ ಎಂದು ಮಹಾದೇವಪ್ಪ ಮರು ಉತ್ತರಿಸಿದ್ದಾರೆ. ಬಳಿಕ ಉಭಯ ನಾಯಕರು ಅಹಿಂದ ಶಕ್ತಿ ಬಲವರ್ಧನೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ನಿವಾಸಕ್ಕೆ ಮಹದೇವಪ್ಪ ದಿಢೀರ್ ಭೇಟಿ: ಮುನಿಸು ಮರೆತು ಮತ್ತೆ ಒಂದಾದ ದೋಸ್ತಿ

‘ಒಮ್ಮೆ ಸ್ನೇಹತರು ಅಂದರೆ ಯಾವಾಗಲೂ ಸ್ನೇಹಿತರು’

ಸಿದ್ದರಾಮಯ್ಯ-ಮಹದೇವಪ್ಪ ಮಾತಾಡುತ್ತಿಲ್ಲವೆಂದು ಅವರವರೇ ಸುದ್ದಿ ಮಾಡುತ್ತಿದ್ದಾರೆ. ದೂರ ಆಗಲು ನಾವಿಬ್ಬರು ಜಗಳವನ್ನೇ ಆಡಿಲ್ಲವಲ್ಲ. ಮಾತಾಡಿಲ್ಲ ಎಂದ ಮಾತ್ರಕ್ಕೆ ಭಿನ್ನಾಭಿಪ್ರಾಯ ಅನ್ನಲಾಗಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿಯೂ 1-2 ತಿಂಗಳು ನಾವು ಮಾತೇ ಆಡಿರಲಿಲ್ಲ. ಒಮ್ಮೆ ಸ್ನೇಹತರು ಅಂದರೆ ಯಾವಾಗಲೂ ಸ್ನೇಹಿತರು ಎಂದು ಮಹದೇಪ್ಪ ತಿಳಿಸಿದ್ದಾರೆ.

ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್​​ಫಾಸ್ಟ್​​ ಮೀಟಿಂಗ್​​

ಮತ್ತೊಂದೆಡೆ ಸಚಿವ ಡಾ.ಯತೀಂದ್ರ ಒತ್ತಾಸೆ ಮೇರೆಗೆ ಮೈಸೂರಿನ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್​​ಫಾಸ್ಟ್​​ ಮೀಟಿಂಗ್​​ ನಡೆದಿದೆ. ಮೀಟಿಂಗ್​ನಲ್ಲಿ KPCC ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​, ಸಚಿವರಾದ ಜಮೀರ್​ ಅಹ್ಮದ್​ ಖಾನ್, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಮೋದ್​ ಶಾಸ್ತ್ರಿ ಜಿ.
ಪ್ರಮೋದ್​ ಶಾಸ್ತ್ರಿ ಜಿ.