ರಾಯಚೂರಿನ ಖ್ಯಾತ ವೈದ್ಯನ ಮೇಲೆ ಗುಂಡಿನ ದಾಳಿ: ಸಿಕ್ಕಿಬಿದ್ದ ಆರೋಪಿಗಳು, ಸ್ರೀರೋಗ ವೈದ್ಯರೇ ಇವರ ಟಾರ್ಗೆಟ್​

| Updated By: ರಮೇಶ್ ಬಿ. ಜವಳಗೇರಾ

Updated on: Sep 05, 2023 | 1:13 PM

ರಾಯಚೂರು ಜಿಲ್ಲೆಯ ವೈದ್ಯ ಡಾ.ಜಯಪ್ರಕಾಶ್​ ಪಾಟೀಲ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತಂಡ ರಚನೆ ಮಾಡಿಕೊಂಡು ಘಟನೆ ನಡೆದ ಕೇವಲ 72 ಗಂಟೆಗಳಲ್ಲಿ ಆರೋಪಿಗಳನ್ನು ಅರೆಸ್ಟ್​ ಮಾಡುವಲ್ಲಿ ಯಶಸ್ವಿಯಾಗಿದ್ದು, ತನಿಖೆ ವೇಳೆ ಆರೋಪಿಗಳು ಸ್ಫೋಟ ಅಂಶಗಳನ್ನು ಬಾಯ್ಬಿಟ್ಟಿದ್ದಾರೆ.

ರಾಯಚೂರಿನ ಖ್ಯಾತ ವೈದ್ಯನ ಮೇಲೆ ಗುಂಡಿನ ದಾಳಿ: ಸಿಕ್ಕಿಬಿದ್ದ ಆರೋಪಿಗಳು, ಸ್ರೀರೋಗ ವೈದ್ಯರೇ ಇವರ ಟಾರ್ಗೆಟ್​
Follow us on

ರಾಯಚೂರು, (ಸೆಪ್ಟೆಂಬರ್ 05): ಜಿಲ್ಲೆಯ ಖ್ಯಾತ ವೈದ್ಯ ಡಾ.ಜಯಪ್ರಕಾಶ್​ ಪಾಟೀಲ್​ ಕಾರಿನ ಮೇಲೆ ಗುಂಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ರಾಯಚೂರು (Raichur) ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿ(Ka ಮೂಲದ ಎ1 ಆರೋಪಿ ಸರ್ಫುದ್ದೀನ್​​, ಎ2 ಕಮರುದ್ದೀನ್​ ಬಂಧಿತ ಆರೋಪಿಗಳು. ಬಳಿಕ ಪೊಲೀಸರು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಖ್ಯಾತ ಸ್ತ್ರೀ ರೋಗ ತಜ್ಞರು, ಫೈನಾನ್ಶಿಯರ್​​ಗಳ ಮೇಲೆ ಟಾರ್ಗೆಟ್ ಮಾಡಿದ್ದು, ಇದಕ್ಕಾಗಿಯೇ ರಾಜ್ಯದ ವಿವಿಧೆಡೆ ವೈದ್ಯರು, ಫೈನಾನ್ಶಿಯರ್​ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು ಎನ್ನವ ಅಂಶ ಲಭ್ಯವಾಗಿವೆ. ಅಲ್ಲದೇ ಆರೋಪಿಗಳು ಹೆಚ್ಚು ಹಣ ಗಳಿಸುವ ವೈದ್ಯರು, ಫೈನಾನ್ಶಿಯರ್​ಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಆರೋಪಿಗಳ ಪ್ಲ್ಯಾನ್​ ಏನಾಗಿತ್ತು?

ವೈದ್ಯರು, ಫೈನಾನ್ಸಿಯರ್​ಗಳಿಗೆ ಬೆದರಿಕೆ ಬೆದರಿಸಿ ಹಣ ವಸೂಲಿ ಮಾಡುವ ಪ್ಲ್ಯಾನ್ ಮಾಡಿದ್ದರು. ಸ್ತ್ರೀ ರೋಗ ತಜ್ಞರು ಹೆಚ್ಚು ಹಣ ಗಳಿಸಿರುತ್ತಾರೆ ಎಂದು ಅವರನ್ನೇ ಟಾರ್ಗೆಟ್ ಮಾಡಿದ್ದ ಆರೋಪಿಗಳು ಆಸ್ಪತ್ರೆ ಮಾಲೀಕರಾಗಿರುವ ಅನೇಕ ಸ್ತ್ರೀ ರೋಗ ತಜ್ಞರ ಇಂಚಿಂಚು ಮಾಹಿತಿ ಕಲೆ ಹಾಕಿದ್ದರು. ಪ್ರಾಯೋಗಿಕವಾಗಿ ರಾಯಚೂರಿನ ಜಯಪ್ರಕಾಶ್ ಪಾಟೀಲ್ ಗೆ ಸ್ಕೆಚ್ ಹಾಕಿದ್ದರು. ಇದು ಯಶಸ್ವಿಯಾದರೆ ಇದೇ ಮಾದರಿಯಲ್ಲೇ ವೈದ್ಯರನ್ನು ಟಾರ್ಗೆಟ್​ ಮಾಡಿ ಹಣ ಮಾಡಬಹುದು ಎನ್ನುವ ಪ್ಯ್ಲಾನ್​ ಮಾಡಿದ್ದರು.  ಹೀಗಾಗಿ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಇದ್ದ ಜಯಪ್ರಕಾಶ್ ಓಡಾಟದ ಬಗ್ಗೆ ನಿಗಾ ಇಟ್ಟಿದ್ದು, ತಿಂಗಳುಗಟ್ಟಲೇ ಜಯಪ್ರಕಾಶ್​ ಅವರ ಚಲನವಲನಗಳನ್ನು ಗಮನಿಸುತ್ತಿದ್ದರು. ನಂತರ ಜೂನ್​ನಲ್ಲಿ ವೈದ್ಯ ಜಯಪ್ರಕಾಶ್ ಆಸ್ಪತ್ರೆಗೆ ಕರೆ ಮಾಡಿ, 30 ಸಾವಿರ ಡಾಲರ್ ಅನ್ನು ಕ್ರಿಪ್ಟೋ ಕರೆನ್ಸಿ ರೂಪದಲ್ಲಿ ಕೊಡಬೇಕು ಎಂದು ಹಿಂದಿ ಭಾಷೆಯಲ್ಲಿ ಬೇಡಿಕೆ ಇಟ್ಟಿದ್ದರು. ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದ್ರೆ, ವೈದ್ಯರು ಕೊಡಲು ನಿರಾಕರಿಸಿದ್ದರಿಂದ ಕೊನೆಗೆ ಸ್ಕೇಚ್ ಹಾಕಿ ಆಗಸ್ಟ್ 31 ರಂದು ಜಯಪ್ರಕಾಶ್ ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಸಾತ್‌ ಮೈಲ್‌ ಬಳಿ ಅಡ್ಡಗಟ್ಟಿ ಫೈರಿಂಗ್ ಮಾಡಿದ್ದರು.

ಇದನ್ನೂ ಓದಿ: ಗುಂಡಿನ ದಾಳಿ ನಡೆಸಿ ರಾಯಚೂರಿನ ವೈದ್ಯನ ಹತ್ಯೆಗೆ ಯತ್ನ: ಫೈರಿಂಗ್ ಮಾಡಿ ಎಸ್ಕೇಪ್​ ಆದ ದುಷ್ಕರ್ಮಿಗಳು

ಐಜಿ ಲೋಕೇಶ್ ಕುಮಾರ್ ಹೇಳಿದ್ದೇನು?

ಇನ್ನು ಬಗ್ಗೆ ಟಿವಿ9ಗೆ ಎಕ್ಸ್​ಕ್ಲ್ಯೂಸ್​ ಆಗಿ ಮಾತನಾಡಿರುವ ಬಳ್ಳಾರಿ ವಲಯದ ಐಜಿ ಲೋಕೇಶ್ ಕುಮಾರ್, 72 ಗಂಟೆಗಳಲ್ಲಿ ಕಲಬುರಗಿ ಮೂಲದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ರೌಡಿಸಂನಲ್ಲಿ ಹೆಸರು ಮಾಡಿ ದುಡ್ಡು ಮಾಡೋ ಉದ್ದೇಶ ಹೊಂದಿದ್ದರು. ಕಲಬುರಗಿಯಲ್ಲಿ ಬೇರೆ ಗ್ಯಾಂಗ್ ಇರುವುದರಿಂದ ರಾಯಚೂರಿನಲ್ಲಿ ಆಪರೇಟ್ ಮಾಡಿದ್ದಾರೆ. ಹೀಗಾಗಿ ವೈದ್ಯ ಜಯಪ್ರಕಾಶ್ ನಂಬರ್ ಪಡೆದು ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇದ್ದಿದ್ದರಿಂದ ಜಯಪ್ರಕಾಶ್ ಟಾರ್ಗೆಟ್ ಆಗಿದ್ದಾರೆ. ನಂತರ ಜಯಪ್ರಕಾಶ್ ಬಗ್ಗೆ ಇಂಚಿಂಚು ಮಾಹಿತಿ ಪಡೆದಿದ್ದಾರೆ ಎಂದರು.

ಜೂನ್ ನಲ್ಲಿ ವೈದ್ಯ ಜಯಪ್ರಕಾಶ್ ಆಸ್ಪತ್ರೆಗೆ ಕರೆ ಮಾಡಿ, 30 ಸಾವಿರ ಡಾಲರ್ ಅನ್ನ ಕ್ರಿಪ್ಟೋ ಕರೆನ್ಸಿ ರೂಪದಲ್ಲಿ ಕೊಡಬೇಕು ಅಂತ ಹಿಂದಿ ಭಾಷೆಯಲ್ಲಿ ಬೇಡಿಕೆ ಇಟ್ಟಿದ್ರು. ಆರೋಪಿ ಸರ್ಫುದ್ದಿನ್ ತಾಂತ್ರಿಕವಾಗಿ ಕ್ರಿಪ್ಟೋ ಬಗ್ಗೆ ಚಾಣಾಕ್ಷನಾಗಿದ್ದ. ಬೇರೆ ರಾಜ್ಯದಲ್ಲಿ ಕಂಟ್ರಿ ಮೇಡ್ ಪಿಸ್ತೂಲ್ ಖರೀದಿಸಿ ಕೃತ್ಯ ಎಸಗಿದ್ದಾರೆ. ವೈದ್ಯ ಜಯಪ್ರಕಾಶ್ ಕೊಲೆ ಮಾಡುವ ಉದ್ದೇಶದಿಂದಲೇ ಕೃತ್ಯ ಎಸಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಇಲ್ಲಿ ಕ್ಲಿಕ್ಕಿಸಿ

Published On - 1:11 pm, Tue, 5 September 23