AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ಕೊಂಡೋತ್ಸವ ವೇಳೆ ಆಯತಪ್ಪಿ ಅಗ್ನಿಕೊಂಡಕ್ಕೆ ಬಿದ್ದ ಅರ್ಚಕ

ದೇವಸ್ಥಾನದ ಅರ್ಚಕ ಕೊಂಡ ಹಾಯುವ ವೇಳೆಯಲ್ಲಿ ಆಯತಪ್ಪಿ ಅಗ್ನಿಕೊಂಡಕ್ಕೆ ಬಿದ್ದಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಮನಗರ: ಕೊಂಡೋತ್ಸವ ವೇಳೆ ಆಯತಪ್ಪಿ ಅಗ್ನಿಕೊಂಡಕ್ಕೆ ಬಿದ್ದ ಅರ್ಚಕ
ರಾಮನಗರದಲ್ಲಿ ಆಯತಪ್ಪಿ ಅಗ್ನಿಕೊಂಡಕ್ಕೆ ಬಿದ್ದ ಅರ್ಚಕ
ಕಿರಣ್ ಹನುಮಂತ್​ ಮಾದಾರ್
|

Updated on:Apr 12, 2023 | 10:18 AM

Share

ರಾಮನಗರ: ದೇವಸ್ಥಾನದ ಅರ್ಚಕ ಕೊಂಡ ಹಾಯುವ ವೇಳೆಯಲ್ಲಿ ಆಯತಪ್ಪಿ ಅಗ್ನಿಕೊಂಡಕ್ಕೆ ಬಿದ್ದಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟಸ್ವಾಮಿ ಗಾಯಗೊಂಡ ಅರ್ಚಕ. ಗ್ರಾಮದ ಶ್ರೀ ವೀರಭದ್ರ ಸ್ವಾಮಿಯ ಕೊಂಡೋತ್ಸವದ ವೇಳೆ ಅರ್ಚಕ ಆಯತಪ್ಪಿ ಬಿದ್ದಿದ್ದು, ತಕ್ಷಣವೇ ಅರ್ಚಕರನ್ನ ಭಕ್ತರು ಮೇಲೆತ್ತುಕೊಂಡಿದ್ದಾರೆ. ಅಗ್ನಿಕೊಂಡಕ್ಕೆ ಬಿದ್ದ ಹಿನ್ನೆಲೆ ಆರ್ಚಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳೆದ ಹಲವು ವರ್ಷಗಳಿಂದ ಶ್ರೀ ವೀರಭದ್ರ ಸ್ವಾಮಿಯ ಕೊಂಡ ಹಾಯುವ ಕಾರ್ಯಕ್ರಮ ನಡೆದು ಬಂದಿದ್ದು, ಹಲವು ವರ್ಷಗಳಿಂದ ಅರ್ಚಕ ಪುಟ್ಟಸ್ವಾಮಿ ಕೊಂಡ ಹಾಯುತ್ತಿದ್ದರು. ಆದರೆ ಈ ಬಾರಿ ಇಂತಹ ಅಚಾತುರ್ಯ ನಡೆದಿದ್ದು ಸದ್ಯ ಪುಟ್ಟಸ್ವಾಮಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ನಿರ್ಮಾಣ ಹಂತದ ದೇವಾಲಯಕ್ಕೆ ಕಿಡಿಗೇಡಿಗಳಿಂದ ಬೆಂಕಿ; ಸುಟ್ಟು ಭಸ್ಮವಾದ ದೇವರ ಫೋಟೋ, ಪೂಜಾ ವಸ್ತುಗಳು

ಈ ಹಿಂದೆ ಕೂಡ ಜಿಲ್ಲೆಯಲ್ಲಿ ಅಗ್ನಿಕೊಂಡಕ್ಕೆ ಬಿದ್ದಿದ್ದ ಅರ್ಚಕ

ಹೌದು ಈ ಹಿಂದೆ ಕೂಡ 2022 ಮಾರ್ಚ್​ 26ರಂದು ಕೊಂಡ ಹಾಯುವಾಗ ಕೊಂಡಕ್ಕೆ ಬಿದ್ದು, ಅರ್ಚಕರು ಗಾಯಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗ್ರಾಮದೇವತೆ ಪಟ್ಟಲ್ಲದಮ್ಮದೇವಿಯ ಕೊಂಡೋತ್ಸವದ ವೇಳೆ ನಡೆದಿತ್ತು. ಅರ್ಚಕ ರಾಜುವಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಕೊಂಡದಿಂದ ಭಕ್ತರು ಮೇಲಿತ್ತಿದ್ದರು. ಬಳಿಕ ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ಅರ್ಚಕರನ್ನು ದಾಖಲಿಸಲಾಗಿ ಚಿಕಿತ್ಸೆ ನೀಡಲಾಗಿತ್ತು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:17 am, Wed, 12 April 23