ನಾಳೆಯಿಂದ ಬೆಂಗಳೂರು ಮೈಸೂರು ಹೈವೇಯಲ್ಲಿ ಟೋಲ್​ ಸಂಗ್ರಹ ಸಾಧ್ಯತೆ

Bengaluru Mysuru Expressway Toll Collection: ಮಾರ್ಚ್​ 14ರಿಂದ ಬೆಂಗಳೂರು ಮೈಸೂರು ಹೈವೇಯಲ್ಲಿ ಟೋಲ್ (Toll Collection) ಸಂಗ್ರಹ ಸಾಧ್ಯತೆಯಿದೆ.

ನಾಳೆಯಿಂದ ಬೆಂಗಳೂರು ಮೈಸೂರು ಹೈವೇಯಲ್ಲಿ ಟೋಲ್​ ಸಂಗ್ರಹ ಸಾಧ್ಯತೆ
ಬೆಂಗಳೂರು-ಮೈಸೂರು ಹೈವೇImage Credit source: swarajyamag.com
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 13, 2023 | 4:24 PM

ರಾಮನಗರ: ನಾಳೆಯಿಂದ (ಮಾ. 14) ಬೆಂಗಳೂರು-ಮೈಸೂರು ಹೈವೇಯಲ್ಲಿ (Bengaluru-Mysuru highway) ಟೋಲ್ (Toll Collection)  ಸಂಗ್ರಹ ಸಾಧ್ಯತೆಯಿದೆ. ಮಾ. 14ರಿಂದ ಟೋಲ್​ ಸಂಗ್ರಹ ಮಾಡುತ್ತೇವೆಂದು ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಟೋಲ್ ಸಂಗ್ರಹದ ಬಗ್ಗೆ ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಟಿವಿ9ಗೆ ಯೋಜನಾ ನಿರ್ದೇಶಕ ಶ್ರೀಧರ್​ ಮಾಹಿತಿ ನೀಡಿದ್ದಾರೆ. ಗೊಂದಲದಲ್ಲಿರುವಾ ಅಧಿಕಾರಿಗಳು ಏನು ಮಾಡಬೇಕು ಎಂಬುದು ಗೊತ್ತಿಲ್ಲ ಎನ್ನುತ್ತಿದ್ದಾರೆ. ಎಕ್ಸ್​ಪ್ರೆಸ್​​​ ಹೈವೇಯಲ್ಲಿ ಟೋಲ್ ಸಂಗ್ರಹ ವಿಚಾರದಲ್ಲಿ ಗೊಂದಲವಿದ್ದು, ಕಾಂಗ್ರೆಸ್, ಸಮಾನ ಮನಸ್ಕ ವಕೀಲರು, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳಿಂದ ನಾಳೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಹಾಗಾಗಿ ಬೆಂಗಳೂರು-ಮೈಸೂರು​ ಹೈವೇಯಲ್ಲಿ ಟ್ರಾಫಿಕ್​ ಬಿಸಿ ತಟ್ಟುವ ಸಾಧ್ಯತೆ ಇದೆ.

55 ಕಿಲೋಮೀಟರ್​​ಗೆ 155 ರೂ. ಟೋಲ್ ನಿಗದಿಯಾಗಿದೆ. ಮತ್ತುಳಿದ 55 ಕಿಲೋಮೀಟರ್​ಗೆ 155 ರೂ. ನಿಗದಿಪಡಿಸಲಾಗಿದೆ. ಅಲ್ಲಿಗೆ ಒಟ್ಟು 300 ರೂ. ಟೋಲ್ ಪಾವತಿಸಬೇಕು. ಒಂದು ದಿವಸಕ್ಕೆ 5 ಕೋಟಿ ರೂ. ಸಂಗ್ರಹವಾಗಲಿದೆ. ಅಲ್ಲಿಗೆ ವರ್ಷಕ್ಕೆ 2,444 ಕೋಟಿ ರೂ. ಸಂಗ್ರಹವಾದಂತಾಗಲಿದೆ. 10 ವರ್ಷ ಟೋಲ್ ಸಂಗ್ರಹಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲಿಗೆ 10 ವರ್ಷದಲ್ಲಿ 20,440 ಕೋಟಿ ರೂ. ಸಂಗ್ರಹವಾಗಲಿದೆ. ರಸ್ತೆ ಮಾಡಲು 12 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಅಲ್ಲಿಗೆ 8 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ಟೋಲ್ ವಸೂಲಿಯಾದಂತಾಗಲಿದೆ.

ಇದನ್ನೂ ಓದಿ: ಎಸ್​ಪಿಜಿ ಅನುಮತಿ ಕೊಟ್ಟರೆ ಬೆಂಗಳೂರು-ಮೈಸೂರು ಹೈವೇಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಪ್ರತಾಪ್ ಸಿಂಹ

ಟೋಲ್ ದರಗಳ ಮಾಹಿತಿ

ಬೆಂಗಳೂರಿನಿಂದ ನಿಡಘಟ್ಟವರೆಗಿನ 56-ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಳಸುವ ವಾಹನಗಳ ಟೋಲ್ ದರಗಳ ಮಾಹಿತಿಯನ್ನು NHAI ಅಧಿಕಾರಿಗಳು ತಿಳಿಸಿದ್ದಾರೆ. ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 135 ರೂ. ಪಾವತಿಸಬೇಕಾಗುತ್ತದೆ. ಬಸ್‌ಗಳು 460 ರೂ. ಮತ್ತು ಭಾರೀ ಮೋಟಾರು ವಾಹನಗಳು 750-900 ರೂ.ಗಳ ನಡುವೆ ಪಾವತಿಸಬೇಕಾಗಬಹುದು ಎಂದು NHAI ಅಧಿಕಾರಿಗಳು ತಿಳಿಸಿದ್ದರು. ಮೇಲಧಿಕಾರಿಗಳಿಂದ ಅನುಮೋದನೆ ಪಡೆದು ಉದ್ಘಾಟನೆಗೂ ಮುನ್ನ ಟೋಲ್ ದರದ ಬಗ್ಗೆ ಅಧಿಕೃತ ಸೂಚನೆ ಹೊರಡಿಸಲಾಗುವುದು ಎಂದು NHAI ಅಧಿಕಾರಿಗಳು ಮಾಹಿತಿ ನೀಡಿದ್ದರು.

ಎಕ್ಸ್​​ಪ್ರೆಸ್ ವೇ ಗೆ 8,408 ಕೋಟಿ ರೂ. ವೆಚ್ಚ

ಬೆಂಗಳೂರಿನಿಂದ ನಿಡಘಟ್ಟ ಹಾಗೂ ನಿಡಘಟ್ಟದಿಂದ ಮೈಸೂರನ್ನು ಸಂಪರ್ಕಿಸುವ 117 ಕಿಲೋಮೀಟರ್ ಉದ್ದದ ಬೆಂಗಳೂರು – ಮೈಸೂರು ಎಕ್ಸ್​​ಪ್ರೆಸ್ ವೇ, ಎನ್​​ಎಚ್ 275 ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಸುಮಾರು 8,408 ಕೋಟಿ ರೂ. ವೆಚ್ಚದಲ್ಲಿ ಈ ಹೆದ್ದಾರಿ ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿ ನಿತಿನ್ ಗಡ್ಕರಿ ಇತ್ತೀಚೆಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಕಿಲ್ಲರ್ ಹೈವೇ; ಕೆಪಿಸಿಸಿ ವಕ್ತಾರ ಎಂ‌ ಲಕ್ಷ್ಮಣ

ತಾಕತ್​ ಇದ್ರೆ ಫ್ರೀ ಮಾಡಿ ಎಂದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

ಇನ್ನು ಇತ್ತೀಚೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 800 ರೂ. ಟೋಲ್ ವಿಧಿಸಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪ ಮಾಡಿದ್ದರು. ಎಕ್ಸ್​ಪ್ರೆಸ್ ಹೈವೇನಲ್ಲಿ ಎರಡು ಕಡೆ ಟೋಲ್​ಗಳಿವೆ. ಹೋಗಲು 400 ಮತ್ತು ಬರಲು 400 ರೂ. ಕೊಡಬೇಕಾಗುತ್ತದೆ ಎಂದು ನನಗೆ ಮಾಹಿತಿಯಿದೆ. ತಾಕತ್ ಇದ್ದರೆ ಹೈವೇನಲ್ಲಿ ಟೋಲ್ ಫ್ರೀ ಮಾಡಿ. ಸಾವಿರಾರು ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಿ ಟೋಲ್ ಯಾಕೆ ವಿಧಿಸುತ್ತೀರಿ ಎಂದು ಪ್ರಶ್ನಿಸಿದ್ದರು. ಈಗ ಮೋದಿ ಮೋದಿ ಎಂದು ಕ್ರೆಡಿಟ್‌ ತೆಗೆದುಕೊಳ್ಳುತ್ತಿದ್ದೀರಿ. ಜನರ ಜೇಬು ಸುಡಲಾರಂಭಿಸಿದ ಮೇಲೆ ಬಂಡವಾಳ ಬಯಲಾಗುತ್ತದೆ‌ ಎಂದು ಕಿಡಿಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:50 pm, Mon, 13 March 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ