ರಾಮನಗರ: ಜಮೀನು ವಿಚಾರಕ್ಕೆ ಗಲಾಟೆ, ಒಡಹುಟ್ಟಿದ ತಂಗಿಯ ಮೇಲೆಯೇ ದೊಣ್ಣೆಯಿಂದ ಹೊಡೆದು ದರ್ಪ
ಜಮೀನು ಹಂಚಿಕೆ ವಿಚಾರಕ್ಕೆ ಕುಟುಂಬದಲ್ಲಿ ಕುಟುಂಬದ ನಡುವೆ ಗಲಾಟೆ ಶುರುವಾಗಿತ್ತು. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ರಾಜಣ್ಣ ಎಂಬುವವರು ತಮ್ಮ ತಂಗಿ ಜಯಮ್ಮ ಎಂಬ ಮಹಿಳೆ ಮೇಲೆ ಕಾಲಿನಿಂದ ಒದ್ದು, ದೊಣ್ಣೆಯಿಂದ ಹೊಡೆದು ದರ್ಪ ತೋರಿದ್ದಾರೆ.
ರಾಮನಗರ, ಸೆ.12: ಜಮೀನು ವಿಚಾರಕ್ಕೆ ಗಲಾಟೆಯಾಗಿ ಒಡಹುಟ್ಟಿದ ತಂಗಿಗೆ ಅಣ್ಣನೊಬ್ಬ ಮನಬಂದಂತೆ ಥಳಿಸಿರುವ ಘಟನೆ ರಾಮನಗರ (Ramanagara) ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕುರಿದೊಡ್ಡಿ ಗ್ರಾಮದಲ್ಲಿ ನಡೆದಿದೆ. ಹೌದು, ಜಮೀನು ಹಂಚಿಕೆ ವಿಚಾರಕ್ಕೆ (Land issue) ಕುಟುಂಬದಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ರಾಜಣ್ಣ ಎಂಬುವವರು ತಮ್ಮ ತಂಗಿ ಜಯಮ್ಮ ಎಂಬ ಮಹಿಳೆ ಮೇಲೆ ಕಾಲಿನಿಂದ ಒದ್ದು, ದೊಣ್ಣೆಯಿಂದ ಹೊಡೆದು ದರ್ಪ ತೋರಿದ್ದಾರೆ. ಗಾಯಾಳು ಜಯಮ್ಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣ ಸಂಬಂಧ ಇದೀಗ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೋಲಿಸ್ ಠಾಣೆಯಲ್ಲಿ 7 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.
ಪೌರ ಕಾರ್ಮಿಕನ ಮೇಲೆ ಹಲ್ಲೆ
ಕಾರವಾರ: ಬಿದಿಯಲ್ಲಿ ಕಸ ಎಸೆಯಬೇಡಿ ಎಂದಿದ್ದಕ್ಕೆ ಪೌರ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಸ್ ನಿಲ್ದಾಣದ ಸಮೀಪ ನಡೆದಿದೆ. ಪುರುಷೋತ್ತಮ ಕೋರಾರ ಮತ್ತು ಚೇತನಕುಮಾರ ಕೋರರ ಎಂಬುವವರು ಹಲ್ಲೆಗೊಳಗಾದವರು. ನಿತಿನ್ ಕುಮಾರ್ ಮತ್ತು ನಿತೇಶ್ ಎಂಬ ಯುವಕರು ಮನಬಂದಂತೆ ಥಳಿಸಿ ಹೋಗಿದ್ದರು. ಈ ಕುರಿತು ಅವರನ್ನು ಬಂಧಿಸುವಂತೆ ನಗರಸಭೆ ಆಯುಕ್ತರಿಗೆ, ಪೊಲೀಸ್ ವರಿಷ್ಠಾಧಿಕಾರಿಗೆ ಪೌರ ಕಾರ್ಮಿಕರು ದೂರು ನೀಡಿದ್ದು, ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬಿಜೆಪಿಯಿಂದ ಸರ್ಕಾರಿ ಜಮೀನು ಆರ್ಎಸ್ಎಸ್ಗೆ ಹಂಚಿಕೆ: ವಿವಾದಿತ ಭೂಮಿ ಪಟ್ಟಿ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರ
ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ಕಾರಿನಲ್ಲಿ ಬೆಂಕಿ; ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ಬೆಳಗಾವಿ: ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬೆಳಗಾವಿ ನಗರದ ಕೊಲ್ಲಾಪುರ ವೃತ್ತದಲ್ಲಿರುವ ಬಿ.ಬಿ ಹೊಸಮನಿ ಪೆಟ್ರೋಲ್ ಪಂಪ್ನಲ್ಲಿ ನಡೆದಿದೆ. ಸ್ವಿಫ್ಟ್ ಕಾರಿನ ಎಂಜಿನಲ್ಲಿ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸಿಬ್ಬಂದಿ ಓರ್ವರು ಪಂಪ್ನಲ್ಲಿದ್ದ ಅಗ್ನಿ ನಂದಕ ಗಳಿಂದ ಬೆಂಕಿ ನಂದಿಸಿದ್ದಾರೆ. ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಮಕ್ಕಳು, ಮಹಿಳೆ, ಡ್ರೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ