
ರಾಮನಗರ: ತಡರಾತ್ರಿ ಬಾಳೆತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ ಮೌಲ್ಯದ ಕಟಾವಿಗೆ ಬಂದಿದ್ದ ಬಾಳೆಗೊನೆಗಳನ್ನ ಕಡಿದು ಹಾಕಿರುವ ಘಟನೆ ರಾಮನಗರ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.
ತಿಮ್ಮಸಂದ್ರ ಗ್ರಾಮದ ರೈತ ರವೀಂದ್ರ ಎಂಬುವವರಿಗೆ ಸೇರಿದ ಬಾಳೆತೋಟದಲ್ಲಿ ಕಟಾವಿಗೆ ಬಂದಿದ್ದ ಸುಮಾರು ನಾನೂರು ಬಾಳೆ ಗಿಡಗಳನ್ನ ಕಡಿದು ಹಾಕಿದ್ದಾರೆ. ಬೆಳಗ್ಗೆ ರೈತ ರವೀಂದ್ರ ತೋಟಕ್ಕೆ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 4:54 pm, Sat, 6 June 20