ಡಿಸೆಂಬರ್​​ನಲ್ಲಿ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ: ಸ್ಫೋಟಕ ಸುಳಿವು ನೀಡಿದ ಜಾರಕಿಹೊಳಿ

ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ ಕಾವು ರಂಗೇರಿದೆ. ಈ ಮೂರು ಕ್ಷೇತ್ರಗಳಲ್ಲಿ ಗೆದ್ದು ತಮ್ಮ ನಾಯಕತ್ವವನ್ನು ತೋರಿಸಲು ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಭರ್ಜರಿ ಪ್ರಚಾರದಲ್ಲಿ ತೋಡಗಿಸಿಕೊಂಡಿದ್ದಾರೆ. ಆದ್ರೆ, ಇದರ ಮಧ್ಯ ರಮೇಶ್ ಜಾರಕಿಹೊಳಿ ಮತ್ತೆ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಗುಡುಗಿದ್ದು, ಡಿಸೆಂಬರ್ ಅಥವಾ ಜನವರಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಸ್ಫೋಟಕ ಸುಳಿವು ಕೊಟ್ಟಿದ್ದಾರೆ.

ಡಿಸೆಂಬರ್​​ನಲ್ಲಿ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ: ಸ್ಫೋಟಕ ಸುಳಿವು ನೀಡಿದ ಜಾರಕಿಹೊಳಿ
ರಮೇಶ್ ಜಾರಕಿಹೊಳಿ-ಬಿವೈ ವಿಜಯೇಂದ್ರ
Follow us
ಭೀಮೇಶ್​​ ಪೂಜಾರ್
| Updated By: ರಮೇಶ್ ಬಿ. ಜವಳಗೇರಾ

Updated on: Nov 11, 2024 | 3:51 PM

ರಾಯಚೂರು, (ನವೆಂಬರ್ 11): ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗಳು ನಡೆದಿವೆ.  ವಿಜಯೇಂದ್ರ ವಿರೋಧಿ ಬಣ ಮತ್ತಷ್ಟು ಬಲಿಷ್ಠವಾಗಿದ್ದು, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈಗಾಗಲೇ ಹಲವು ಸಭೆಗಳನ್ನು ಮಾಡಿ ತಮ್ಮ ಬೇಡಿಕೆಯನ್ನು ಹೈಕಮಾಂಡ್ಗೆ ರವಾನಿಸಿದೆ. ಹೀಗಾಗಿ ಡಿಸೆಂಬರ್ ಅಥವಾ ಜನವರಿಯಲ್ಲಿ ವಿಜಯೇಂದ್ರ ಬದಲಾವಣೆಯಾಗುತ್ತೆ ಎನ್ನುವ ಚರ್ಚೆಗಳು ನಡೆದಿವೆ. ಇದಕ್ಕೆ ಪೂರಕವೆಂಬಂತೆ ರಮೇಶ್ ಜಾರಕಿಹೊಳಿ ಸಹ ಕೆಲವೊಂದಿಷ್ಟು ಸೂಕ್ಷ್ಮ ವಿಚಾರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ರಾಯಚೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ,  ವಿಜಯೇಂದ್ರ ಇರುವವರೆಗೂ ನಾನು ಪ್ರಚಾರಕ್ಕೆ ಹೋಗಲ್ಲ. ವಿಜಯೇಂದ್ರ ಅಧ್ಯಕ್ಷ ಎಂದು ಒಪ್ಪಿಲ್ಲ, ಒಪ್ಪುವುದಿಲ್ಲ. ಅವರ ಸ್ಥಾನಮಾನದ ಕೆಲಸಕ್ಕೆ ನಾನು ವಿರೋಧ ಮಾಡಿಲ್ಲ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವರಿಷ್ಠರು ತೀರ್ಮಾನಿಸುತ್ತಾರೆ. ಬಹಿರಂಗವಾಗಿ ನಾನು ಕೆಲವೊಂದು ವಿಷಯಗಳನ್ನ ಹೇಳಲ್ಲ. ಡಿಸೆಂಬರ್ ಅಥವಾ ಜನವರಿಯಲ್ಲಿ ಏನಾದ್ರೂ ನಿರ್ಣಯ ಆಗುತ್ತೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಹೆಸರು, ದೇವೇಗೌಡರ ಪ್ರಯತ್ನ ನಿಖಿಲ್​ನನ್ನು ಗೆಲ್ಲಿಸಲಿದೆ: ಬಿಎಸ್ ಯಡಿಯೂರಪ್ಪ

ಬಿ.ವೈ.ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ನನಗೆ ತೃಪ್ತಿ ಇಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾದಾಗ ಎಂಪಿ ಚುನಾವಣೆ ಇತ್ತು. ಮೋದಿ ಪ್ರಧಾನಿ ಆಗಲೆಂದು ಎಲ್ಲ ನುಂಗಿ ಕೆಲಸ ಮಾಡಿದ್ದೇವೆ. ಅದು ಮುಗಿದ ಬಳಿಕ ವರಿಷ್ಠರಿಗೆ ಎಲ್ಲಾ ಹೇಳಿದ್ದೇವೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಏನಾದ್ರೂ ನಿರ್ಣಯ ಆಗುತ್ತೆ. ನೋಡೋಣ ಆ ಆಶಾಭಾವನೆಯಲ್ಲಿದ್ದೇವೆ ಎಂದರು.

ವಿಜಯೇಂದ್ರ ವಿರುದ್ಧ ಟೀಂ ಕಟ್ಟಿದ್ರಾ ಜಾರಕಿಹೊಳಿ..?

ಯತ್ನಾಳ್ ಬಸನಗೌಡ ನಾವು ಒಂದು ಟೀಂ ಆಗಿ ರಾಜ್ಯದಲ್ಲಿ ಪ್ರವಾಸ ಆರಂಭಿಸಿದ್ದೇವೆ. ಪಕ್ಷದ ಇತಿಮಿತಿಯಲ್ಲಿ ಕೆಲಸ ಸ್ಟಾರ್ಟ್ ಮಾಡಿದ್ದೇವೆ. ಇದಕ್ಕೆ ಬೇರೆ ಅರ್ಥ ಮಾಡಿಕೊಳ್ಳೋವಂಥದ್ದೇನಿಲ್ಲ. ಇನ್ನೂ ಹತ್ತು ಹನ್ನೇರಡು ಜನ ನಾಯಕರು ಬೆಳಗಾವಿಯಲ್ಲಿ ಸಭೆ ಮಾಡಿದ್ದೇವೆ. ಮಾದ್ಯಮದಲ್ಲಿ ಮಾತನಾಡಲಾಗಲ್ಲ. ಪಕ್ಷದ ಚೌಕಟ್ಟಿನಲ್ಲಿ ಬೆಂಗಳೂರಿನ ಸಭೆಯಲ್ಲಿ ನೇರವಾಗಿ ಏನು ಹೇಳಬೇಕು ಹೇಳಿದ್ದೇವೆ. ಡಿಸೆಂಬರ್ ಒಳಗೆ ಎಲ್ಲವೂ ಸರಿ ಆಗತ್ತೆ.

ಕೆಲಸ ಮಾಡೋದಕ್ಕೆ ಗುಂಪು ಗಾರಿಕೆ ಅಂತ ಆಗತ್ತೆ. ನಮ್ಮ ಮುಂದಿನ ದಿನದಲ್ಲಿ ಒಂದು ವರ್ಷದಲ್ಲಿ ಇಲೆಕ್ಷನ್ ಬರತ್ತೋ, ಎರಡು ವರ್ಷದಲ್ಲಿ ಬರತ್ತೋ ಗೊತ್ತಿಲ್ಲ. ಯಾವಾಗ ಬರತ್ತೆ ಆವಾಗ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಈ ವರೆಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲ. 130-140 ಸ್ಥಾನ ಬರೋದಕ್ಕೆ ಟೀಂ ಮಾಡಿ ಕೆಲಸ ಮಾಡ್ತಿದ್ದೇವೆ. ನಮಗೆ ಸಿಎಂ ಸ್ಥಾನ ಬೇಡ್ತಿಲ್ಲ ಏನಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು ಅಂತ ಟೀಂ ಮಾಡಿದ್ದೇವೆ. ಕಾಂಗ್ರೆಸ್ ನಲ್ಲಿ ಐದು ಬಾರಿ ಶಾಸಕ ಆಗಿದ್ದೇನೆ. ಬಿಜೆಪಿಯಲ್ಲಿ ಎರಡು ಬಾರಿ ಆಗಿದ್ದೇನೆ. ಬಿಜೆಪಿಯಲ್ಲಿ ಬಂಗಾರದಂತಹ ಕಾರ್ಯಕರ್ತರು ಇದ್ದಾರೆ. ಯಾರು ಬಿ ಫಾರ್ಮ್ ತರ್ತಾರೋ ಗೊತ್ತಿರಲ್ಲ. ಈ ವರೆಗೆ 110 ದಾಟಿಲ್ಲ. ಮುಂದೆ 130-140 ಸೀಟು ತರಲು ಟೀಂ ಮಾಡಿದ್ದೇವೆ ಎಂದು ಹೇಳಿದರು.

ಯತ್ನಾಳ್, ಜಾರಕಿಹೊಳಿ ಇಬ್ಬರಲ್ಲ.. ಸಾಮೂಹಿಕ ನಾಯಕತ್ವ ಬೇಕು. ಒಬ್ಬರೇ ನಾಯಕತ್ವ ಕೊಟ್ಟು ಬಿಜೆಪಿ ಹೀಗಾಗಿದೆ. 20-25 ಲೀಡರ್ಸ್ ತಯಾರು ಮಾಡಿ ಟಾಸ್ಕ್ ಕೊಡಿ. ಒಬ್ಬರು ಬಿಟ್ಟು ಹೋದ್ರೆ 24 ಜನ ಉಳಿತಾರೆ ಅಂತ ಹೇಳಿದ್ದೇವೆ. ಒಬ್ಬರ ಮೇಲೆ ಡಿಪೆಂಡ್ ಆಗಬಾರದು. ಆ ಪ್ರಕಾರ ನಾಯಕರು ತೀರ್ಮಾನ ತೆಗೆದುಕೊಳ್ತಾರೆ. ನನಗೆ ಆರು ಜಿಲ್ಲೆ, ಯತ್ನಾಳ್ ಆರು ಜಿಲ್ಲೆ, ಪ್ರತಾಪ್ ಸಿಂಹ ನಾಲ್ಕು ಜಿಲ್ಲೆ, ಲಿಂಬಾವಳಿ ಕೆಲವು ಜಿಲ್ಲೆ. ಹೀಗೆ ತೀರ್ಮಾನ ಮಾಡಿದ್ದೇವೆ. ಪಕ್ಷ ಸಂಘಟನೆಗೆ ಯಾರೂ ಬೇಡ ಅನ್ನಲ್ಲ. ನಾವೇನು ಅಧ್ಯಕ್ಷ ಮಾಡು ಅಂತ ಬೇಡಿಲ್ಲ. ವಿಪಕ್ಷ ನಾಯಕ ಮಾಡಿ ಅಂದಿಲ್ಲ. ನಮ್ಮ ಕಾರ್ಯಕರ್ತರು ಭಾರಿ ನರ್ವಸ್ ಆಗಿದ್ದಾರೆ. ಅವರನ್ನ ಹೊರ ತಂದು ಪಕ್ಷ ಸಂಘಟನೆ ಮಾಡಲು ಇದನ್ನ ಮಾಡಿದ್ದೇವೆ. ವಮುಂದಿನ ವಾರ ಬಳ್ಳಾರಿಗೆ ಹೋಗ್ತಿನಿ ಎಂದರು.

ಬಿವೈ ವಿಜಯೇಂದ್ರ ವಿರುದ್ಧ ಕೆಲ ಸ್ವಪಕ್ಷದ ನಾಯಕರೇ ಸಿಡಿದೆದ್ದಿದ್ದು, ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈಗಾಗಲೇ ವಿಜಯೇಂದ್ರ ವಿರೋಧಿ ಬಣದ ನಾಯಕರು ಕೆಲ ಸಭೆಗಳನ್ನು ಮಾಡಿದ್ದು, ವಿಜಯೇಂದ್ರ ಬದಲಾವಣೆಗೆ ಹೈಕಮಾಂಡ್​ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸದ್ಯ ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರಿಂದ ಈ ಬಗ್ಗೆ ಯಾವುದೇ ಗಮನಕೊಟ್ಟಿಲ್ಲ. ಆದ್ರೆ, ಡಿಸೆಂಬರ್ ಅಥವಾ ಜನವರಿಯಲ್ಲಿ ವಿಜಯೇಂದ್ರ ಭವಿಷ್ಯ ನಿರ್ಧಾರವಾಗಲಿದೆ ಎನ್ನುವ ಚರ್ಚೆಯಂತೂ ಪಕ್ಷದಲ್ಲಿ ನಡೆದಿದೆ. ಹೀಗಾಗಿ ಹೈಕಮಾಂಡ್​ ವಿಜಯೇಂದ್ರ ವಿಚಾರದಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು
ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ
ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ
ಥಾರ್​ ಖರೀದಿಸಿದ ಖುಷಿಗೆ ಮಹೀಂದ್ರಾ ಶೋರೂಂನಲ್ಲಿ ಗುಂಡು ಹಾರಿಸಿದ ಯುವಕ!
ಥಾರ್​ ಖರೀದಿಸಿದ ಖುಷಿಗೆ ಮಹೀಂದ್ರಾ ಶೋರೂಂನಲ್ಲಿ ಗುಂಡು ಹಾರಿಸಿದ ಯುವಕ!
ಚೈತ್ರಾ ಕುಂದಾಪುರ ಎಷ್ಟು ಚಾಲಾಕಿ ಅಂತ ತಿಳಿಯೋಕೆ ಈ ವಿಡಿಯೋ ನೋಡಿ..
ಚೈತ್ರಾ ಕುಂದಾಪುರ ಎಷ್ಟು ಚಾಲಾಕಿ ಅಂತ ತಿಳಿಯೋಕೆ ಈ ವಿಡಿಯೋ ನೋಡಿ..
ಚಿನ್ನ ಖರೀದಿಸಿದರೆ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆಯಾಗುತ್ತಾ?
ಚಿನ್ನ ಖರೀದಿಸಿದರೆ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆಯಾಗುತ್ತಾ?
ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ