ಸಾಹುಕಾರ್ ಹೊಸ ಆಟ: ಸಿಎಂ ಕರ್ಚಿ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಜಾರಕಿಹೊಳಿ ಶಾಕ್

ಕರ್ನಾಟಕ ಕಾಂಗ್ರೆಸ್​ ಮನೆಯಲ್ಲಿನ ಪಟ್ಟದ ಆಟ. ಆಗ್ರೆಸ್ಸಿವ್ ಆಗೇ ಸಾಗ್ತಿದೆ. ಎದುರಾಳಿಗಳ ಏಟು ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಗುರಿ ಇಟ್ಟಿರೋ ಸಚಿವ ಸತೀಶ್ ಜಾರಕಿಹೊಳಿ, ಇಷ್ಟು ದಿನ ಸೈಲೆಂಟ್​ ಆಗೇ ಎಚ್ಚರಿಕೆ ಕೊಡುತ್ತಿದ್ದರು. ಆದ್ರೆ ಇದೀಗ ಹೊಸ ಆಟವನ್ನೇ ಶುರು ಮಾಡಿದ್ದಾರೆ. ಎಷ್ಟು ದಿನ ಎಂದು ಕಾಯೋದು ಅನ್ನೋ ಸಂದೇಶವನ್ನೇ ಬಹಿರಂಗವಾಗಿಯೇ ಕೊಟ್ಟಿದ್ದು, ದಾಖಲೆ ಸಮೇತವೇ ಅಖಾಡಕ್ಕೆ ಬಂದಿದ್ದಾರೆ. ಅದಕ್ಕೆ ಕಾರಣವಾಗಿದ್ದೇ ಸ್ವತಃ ಎಐಸಿಸಿ ಪ್ರಧಾನ ಕಾರ್ಯದರ್ಶಿಯೇ ಕೊಟ್ಟಿರುವ ಭರವಸೆ. ಹಾಗಾದ್ರೆ, ಏನದರು ಭರವಸೆ? ಸತೀಶ್ ಜಾರಕಿಹೊಳಿ ಲೆಕ್ಕಾಚಾರವೇನು? ಸಂಪೂರ್ಣ ವಿವರ ಇಲ್ಲಿದೆ.

ಸಾಹುಕಾರ್ ಹೊಸ ಆಟ: ಸಿಎಂ ಕರ್ಚಿ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಜಾರಕಿಹೊಳಿ ಶಾಕ್
Satish Jarkiholi And Dk Shivakumar
Follow us
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ

Updated on:Jan 15, 2025 | 5:39 PM

ಬೆಂಗಳೂರು, (ಜನವರಿ 15): ಬೆಂಗಳೂರು, (ಜನವರಿ 15): ಕರ್ನಾಟಕ ಕಾಂಗ್ರೆಸ್​ನಲ್ಲಿ ಪಟ್ಟದ ಆಟ ಹೊಸ ಮಗ್ಗುಲಿಗೆ ಹೊರಳಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ ಇಷ್ಟು ದಿನ ಸೈಲೆಂಟ್ ಆಗಿ ಗೇಮ್ ಆಡುತ್ತಿದ್ದರು. ಆದ್ರೆ ಯಾವಾಗ CLP ಸಭೆಯಲ್ಲಿ ಬೆಳಗಾವಿ ಡಿಸಿಸಿ ಕಚೇರಿ ಕ್ರೆಡಿಟ್ ಫೈಟ್ ನಡೆಯಿತೋ ಅದಾದ ಬಳಿಕ ಸಾಹುಕಾರ್ ಸಿಡಿದೆದ್ದಂತೆ ಕಾಣುತ್ತಿದೆ. ಯಾಕಂದ್ರೆ ಮೊನ್ನೆ ಕಾಂಗ್ರೆಸ್ ಸಭೆ ಬಳಿಕ ಸುರ್ಜೇವಾಲ ಎಚ್ಚರಿಕೆ ನಮಗೆ ಕನ್ಸಿಡರ್ ಆಗಲ್ಲ ಎಂದಿದ್ದ ಸತೀಶ್ , ಇವತ್ತು ಹೊಸ KPCC ಅಧ್ಯಕ್ಷ ಬೇಕೆಂದು ಬಹಿರಂಗವಾಗಿಯೇ ಹೇಳಿದ್ದಾರೆ. ಆದಷ್ಟು ಬೇಗ ಕೆಪಿಸಿಸಿ ಹೊಸ ಅಧ್ಯಕ್ಷರ ಆಗಬೇಕೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಬಳಿ ಸಲಹೆ ನೀಡಿದ್ದೇವೆಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರು ಬದಲಾಗುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ 2023ರ ಮೇ 18ರಂದೇ ಪತ್ರಿಕಾ ಹೇಳಿಕೆ ನೀಡಿದ್ದರು. ಇದೇ ಟಿಪ್ಪಣಿ ಇಟ್ಟುಕೊಂಡು ಇದೀಗ ಅಹಿಂದ ನಾಯಕರ ವಾದ ಮಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ನಾಯಕರ ಊಟ, ಕುರ್ಚಿ ಆಟ…ಸಚಿವರ ವಾಗ್ಯುದ್ಧ: ಕಾಂಗ್ರೆಸ್ ಶಾಸಕಾಂಗ ಸಭೆಯ ಇನ್‌ಸೈಡ್‌ ಸ್ಟೋರಿ

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು. ವೋಟು ತರುವವರನ್ನು ಅಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ. ಪಾಪ್ಯುಲರ್ ಇರುವವರನ್ನು ಅಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟ ಸತೀಶ್

ಒಂದು ಕಡೆ ತೆರೆಮರೆಯಲ್ಲೇ ಸಿಎಂ ಕುರ್ಚಿ ಫೈಟ್​ ನಡೆಯುತ್ತಿದ್ದರೆ, ಇದೀಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಎಬ್ಬಿಸಿರೋ ಸಚಿವ ಸತೀಶ್ ಜಾರಕಿಹೊಳಿ, ನೇರಾ ನೇರವಾಗಿಯೇ ಹೊಸ ಅಧ್ಯಕ್ಷರ ನೇಮಕಕ್ಕೆ ಪಟ್ಟು ಹಿಡಿದಿದ್ದಾರೆ. ಹೌದು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ಮುಸುಕಿನ ಗುದ್ದಾಟ ಶುರುವಾಗಿದೆ. ಕೊನೆ ಎರಡ್ಮೂರು ವರ್ಷವದಾರೂ ಸಿಎಂ ಆಗಬೇಕೆಂದು ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಆದ್ರೆ, ಇತ್ತ ಸತೀಶ್ ಜಾರಕಿಹೊಳಿ ಡಿಕೆಶಿ ಬಳಿ ಇರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ತಿಂಗಳಾಂತ್ಯಕ್ಕೆ ದೆಹಲಿಗೆ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸತೀಶ್ ಜಾರಕಿಹೊಳಿ. ತಿಂಗಳಾಂತ್ಯಕ್ಕೆ ದೆಹಲಿಗೆ ತೆರಳಲಿದ್ದಾರೆ. ಜನವರಿ 27 ಅಥವಾ 28ರಂದು ದೆಹಲಿಗೆ ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದು, ಈ ವೇಳೆ ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಆಪ್ತ ಸಚಿವರ ಜತೆ ಚರ್ಚಿಸಿರುವ ಸತೀಶ್, CLP ಸಭೆ ನಂತರ ಸುರ್ಜೇವಾಲ ಜತೆ ಸಹ ಮಾತುಕತೆ ಸಹ ಮಾಡಿದ್ದಾರೆ. ಇದೀಗ ಇನ್ನುಳಿದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ್ಮ ನಿಲುವು ಸ್ಪಷ್ಟಪಡಿಸಲು ಮುಂದಾಗಿದೆ.

ಸತೀಶ್ ಜಾರಕಿಹೊಳಿ ಲೆಕ್ಕಾಚಾರ ಏನು?

ಇತ್ತ ಸಚಿವ ಸತೀಶ್​ ಜಾರಕಿಹೊಳಿ, 2028ರ ಸಿಎಂ ಆಟವನ್ನೂ ಕಟ್ಟಿದ್ದಾರೆ. ನಾನು ಇದೀಗ ಫೈಟ್ ಮಾಡಲ್ಲ, 2028ಕ್ಕೆ ಫೈಟ್​ ಮಾಡುತ್ತೇನೆ ಅಂತಿದ್ದಾರೆ. ಶಿಗ್ಗಾಂವಿ ಉಪಚುನಾವಣೆಯಲ್ಲೂ ತನ್ನ ಶಕ್ತಿ ಏನು ಎಂದು ತೋರಿಸಿದ್ದರು, ಅಲ್ಪಸಂಖ್ಯಾತರನ್ನ ಸೆಳೆಯುವಲ್ಲಿ ಸಕ್ಸಸ್ ಆಗಿದ್ದರು. ಈಗ ಹಿಂದುಳಿದವರನ್ನ ಸೆಳೆಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ಮೂಲಕ ಭವಿಷ್ಯದ ಅಹಿಂದ ಚಾಂಪಿಯನ್ ಆಗಬಹುದು ಎನ್ನುವ ಲೆಕ್ಕಾಚಾರವೂ ಇದೆ.

ಕೊನೆ ಎರಡ್ಮೂರು ವರ್ಷವಾದರೂ ಸಿಎಂ ಆಗಬೇಕೆಂದು ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಆದ್ರೆ, ಇದಕ್ಕೆ ಅಹಿಂದ ನಾಯಕರು ವಿರೋಧಿಸುತ್ತಿದ್ದಾರೆ. ಈಗ ಸದ್ಯಕ್ಕೆ ಅಂತರೂ ಸಿಎಂ ಸ್ಥಾನ ಸಿಗುವುದಿಲ್ಲ ಎಂದು ಅರಿತ ಸತೀಶ್ ಜಾರಕಿಹೊಳಿ, 2028ರ ಮೇಲೆ ಕಣ್ಣಿಟ್ಟಿದ್ದಾರೆ. 2028ಕ್ಕೆ ಸಿಎಂ ಆಗುತ್ತೇನೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಸತೀಶ್ ಜಾರಕಿಹೊಳಿ ಮೊದಲು ಕೆಪಿಸಿಸಿ ಅಧ್ಯಕ್ಷರಾಗಿ ಇಮೇಜ್ ಹೆಚ್ಚಿಸಿಕೊಳ್ಳುವ ಮೂಲಕ ಎಲ್ಲಾ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಇದರಿಂದ ಮೊದಲಿಗೆ ಸತೀಶ್ ಜಾರಕಿಹೊಳಿ ಅವರ ಟಾರ್ಗೆಟ್ ಕೆಪಿಸಿಸಿ ಅಧ್ಯಕ್ಷರಾಗುವುದು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿದರೆ, ಡಿಸಿಎಂ ಡಿಕೆಶಿಯ ರಾಜಕೀಯ ಪ್ರಾಶಸ್ತ್ಯ ಕಡಿಮೆ ಆಗುತ್ತೆ ಎನ್ನುವ ಲೆಕ್ಕಾಚಾರವೂ ಇದೆ. ಇದರಿಂದ ದಲಿತ ನಾಯಕರ ಶಕ್ತಿಯೂ ಹೆಚ್ಚುತ್ತೆ. ಸರ್ಕಾರದಲ್ಲಿ ಸಿದ್ದರಾಮಯ್ಯ, ಪಕ್ಷದಲ್ಲಿ ಜಾರಕಿಹೊಳಿ ಫಾರ್ಮುಲಾ ಜಾರಿ ಮಾಡೋದಾಗಿದೆ. ಇನ್ನು ಎದುರಾಳಿ ಬಣಕ್ಕೆ ಮೇಲುಗೈ ಆಗದಂತೆಯೂ ತಡೆತಟ್ಟಬಹುದಾಗಿದೆ.

ಸಾಹುಕಾರ್ ಹೊಸ ಗೇಮ್ ಏನು?

  • ಗೇಮ್ ಪ್ಲ್ಯಾನ್ 1: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೆಚ್ಚಿನ ಒತ್ತು
  • ಗೇಮ್ ಪ್ಲ್ಯಾನ್ 2: ಮೂಲಕ ಕಾಂಗ್ರೆಸ್​ ಪವರ್​ ಸೆಂಟರ್ ಬದಲಾವಣೆ
  • ಗೇಮ್ ಪ್ಲ್ಯಾನ್ 3: ಬದಲಾದ್ರೆ ನಿರ್ಧಾರ ಕೈಗೊಳ್ಳೋರು ಬದಲಾಗ್ತಾರೆ
  • ಗೇಮ್ ಪ್ಲ್ಯಾನ್ 4: ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು
  • ಗೇಮ್ ಪ್ಲ್ಯಾನ್ 5: ಡಿಸಿಎಂ ಡಿಕೆಶಿಯ ಶಕ್ತಿ ಕುಂದಿಸಬಹುದಾಗಿದೆ
  • ಗೇಮ್ ಪ್ಲ್ಯಾನ್ 6: ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಬಹುದು
  • ಗೇಮ್ ಪ್ಲ್ಯಾನ್ 7: ಅಹಿಂದ ಕಾರ್ಡ್​ ಕೂಡ ಮತ್ತಷ್ಟು ಗಟ್ಟಿ ಆಗುತ್ತೆ
  • ಗೇಮ್ ಪ್ಲ್ಯಾನ್ 8: ಮುಂದಿನ ರಾಜಕೀಯಕ್ಕೆ ಮತ್ತಷ್ಟು ಅನುಕೂಲ

ಒಟ್ಟಿನಲ್ಲಿ ಕಾಂಗ್ರೆಸ್ ಮನೆಯಲ್ಲಿ ಪಟ್ಟದ ಫೈಟ್​ ಮತ್ತೊಂದು ಹಂತಕ್ಕೆ ಹೋಗಿರುವುದು ಸುಳ್ಳಲ್ಲ, ಸಿಟ್ಟಾಗಿರುವ ಸಿಎಂ ಸಿದ್ದರಾಮಯ್ಯ, ಸತೀಶ್ ಜಾಹಿಹೊಳಿ, ಇದೀಗ ಓಪನ್ ಆಗಿಯೇ ಡಿಕೆಶಿ ವಿರುದ್ಧ ತಿರುಬಿದ್ದಿದ್ದು, ರಾಜಕೀಯ ಸಮರ ಸಾರಿದ್ದಾರೆ. ಪಕ್ಷದ ಅಧ್ಯಕ್ಷ ಗಾದಿಯನ್ನೇ ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Wed, 15 January 25