ಶಿವಮೊಗ್ಗ: ಸರ್ಕಾರಿ (KSRTC) ಮತ್ತು ಖಾಸಗಿ ಬಸ್ (Privet Bus) ನಡುವೆ ಅಪಘಾತ (Accident) ಸಂಭವಿಸಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ (Injured) ಘಟನೆ ಶಿವಮೊಗ್ಗ (Shivamogga) ತಾಲೂಕಿನ ತೋಟದಕೆರೆ ಬಳಿ ನಡೆದಿದೆ. ಗಾಯಾಳುಗಳನ್ನು ಮೆಗ್ಗಾನ್ (Meggan Hospital) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಖಾಸಗಿ ಬಸ್ ಚಾಲಕ ಶ್ರೀಧರ್ ಸ್ಥಿತಿ ಗಂಭೀರವಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ. ಖಾಸಗಿ ಬಸ್ ಕೆಕೆಬಿ ಶಿವಮೊಗ್ಗದಿಂದ ಶೃಂಗೇರಿ ಹೊರಟಿತ್ತು. ಸರಕಾರಿ ಬಸ್ ಶೃಂಗೇರಿಯಿಂದ ಶಿವಮೊಗ್ಗಕ್ಕೆ ಬರುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ನಲ್ಲಿ 35ಕ್ಕೂ ಹೆ್ಚ್ಚು ಮತ್ತು ಕೆಎಸ್ ಆರ್ ಟಿಸಿ ಬಸ್ ನಲ್ಲಿ 45ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಇದನ್ನು ಓದಿ: ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿ ಅಂತಾ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ!
ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವು
ವಿಜಯಪುರ: ವಿಷ ಸೇವಿಸಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಸಾವನ್ನಪ್ಪಿದ್ದಾನೆ. ಬಸವಬಾಗೇವಾಡಿ ತಾಲೂಕಿನ ಹುಲಿಬೆಂಚಿ ಗ್ರಾಮದ ನಿವಾಸಿ ಉಮೇಶ ನಿಂಗಪ್ಪ ಹುಲಸೂರ (24) ಮೃತ ದುರ್ದೈವಿ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ್ದಾನೆಂದು ಮೃತ ಉಮೇಶ್ ನಿಂಗಪ್ಪ ಪೋಷಕರು ಆರೋಪಿಸುತ್ತಿದ್ದಾರೆ. ಈ ಸಂಬಂಧ ವೈದ್ಯರು ಮತ್ತು ಮೃತನ ಸಂಬಂಧಿಗಳ ನಡುವೆ ವಾಗ್ವಾದ ನಡೆದಿದೆ.
ಇದನ್ನು ಓದಿ: ಪಾಟ್ನಾ ಸಿವಿಲ್ ಕೋರ್ಟ್‌ನಲ್ಲಿ ಬಾಂಬ್ ಸ್ಫೋಟ, ಒಬ್ಬ ಸಬ್ ಇನ್ಸ್ಪೆಕ್ಟರ್ಗೆ ಗಾಯ
ಮೃತನ ಪೋಷಕರು ನನ್ನ ಮಗ ವಿಷ ಸೇವಿಸಿಲ್ಲ, ಜಾನುವಾರುಗಳ ಉಣ್ಣೆಗೆ ಔಷಧ ಹಚ್ಚುವಾಗ ಬಾಯಲ್ಲಿ ವಿಷ ಸೇರಿತ್ತು. ಜೂ.27ರಂದು ಅಸ್ವಸ್ಥ ಮಗನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಇಂಜೆಕ್ಷನ್ ನೀಡಿದ ಕೂಡಲೇ ಮಗ ಮೃತಪಟ್ಟಿದ್ದಾನೆಮಗನ ಸಾವಿಗೆ ವೈದ್ಯರೇ ಕಾರಣ ಎಂದು ಪೋಷಕರ ಆರೋಪಿಸುತ್ತಿದ್ದಾರೆ. ಪೋಷಕರ ಆರೋಪ ನಿರಾಕರಿಸಿದ ಜಿಲ್ಲಾಸ್ಪತ್ರೆ ವೈದ್ಯರು, ಮರಣೋತ್ತರ ಪರೀಕ್ಷೆಯಲ್ಲಿ ನಿಖರ ಮಾಹಿತಿ ಲಭ್ಯವಾಗಲಿದೆ. ಘಟನೆ ಬಗ್ಗೆ ತನಿಖೆ ನಡೆಸಲು ತಂಡ ರಚಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎಲ್. ಲಕ್ಕಣ್ಣವರ ಮಾಹಿತಿ ನೀಡಿದ್ದಾರೆ.
Published On - 7:04 pm, Fri, 1 July 22