ಗೂಗಲ್​​ನಲ್ಲಿ ಹುಡುಕಿ ತುಂಗಾ ನದಿಗೆ ತೆರಳಿದ್ದ ನಾಲ್ವರು ನೀರುಪಾಲು: ಮದ್ವೆಗೆಂದು ಶಿವಮೊಗ್ಗಕ್ಕೆ ಬಂದಿದ್ದ ಸ್ನೇಹಿತರು ದುರಂತ ಸಾವು

ಮದುವೆಗೆಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರು ದುರಂತ ಅಂತ್ಯಕಂಡಿದ್ದಾರೆ. ಗೂಗಲ್‌ನಲ್ಲಿ ಸರ್ಚ್ ಮಾಡಿ ನದಿಗೆ ಬಂದಿದ್ದು, ಸ್ನಾನ ಮಾಡವಾಗ ನಾಲ್ವರು ನದಿ ಪಾಲಾಗಿದ್ದಾರೆ. ನೀರಿಗಿಳಿದಿದ್ದ ಓರ್ವನನ್ನು ಮೇಲೆತ್ತಲು ಹೋಗಿ ಉಳಿದ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಕಾಣೆಯಾದವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಗೂಗಲ್​​ನಲ್ಲಿ ಹುಡುಕಿ ತುಂಗಾ ನದಿಗೆ ತೆರಳಿದ್ದ ನಾಲ್ವರು ನೀರುಪಾಲು: ಮದ್ವೆಗೆಂದು ಶಿವಮೊಗ್ಗಕ್ಕೆ ಬಂದಿದ್ದ ಸ್ನೇಹಿತರು ದುರಂತ ಸಾವು
Tunga River
Edited By:

Updated on: Nov 26, 2026 | 6:43 PM

ಶಿವಮೊಗ್ಗ, ನವೆಂಬರ್ 26: ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರು ಯುವಕರು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಬಳಿ ಗುರುವಾರ ಈ ದುರಂತ ಸಂಭವಿಸಿದೆ.  ಗೂಗಲ್​​ ನಲ್ಲಿ ಸರ್ಚ್ ಮಾಡಿ ಮಹಿಷಿ ಬಳಿ ತುಂಗಾ ನದಿ ಬಳಿ ಆಟವಾಡಲು ಮುಂದಾಗಿದ್ದಾರೆ. ಈ ವೇಳೆ  ನಾಲ್ವರು ನದಿಪಾಲಾಗಿದ್ದಾರೆ. ಬೆಂಗಳೂರು ಮೂಲದ ಕಾರ್ತಿಕ್(31), ನಕುಲ್(19), ಪವನ್(30), ಚೇತನ್ (19) ನೀರುಪಾಲಾದವರು. ನದಿಗೆ ಬಿದ್ದಿದ್ದ ಓರ್ವನನ್ನ ರಕ್ಷಿಸಲು ಹೋಗಿ ಮೂವರು ಸಹ ಮುಳುಗಿದ್ದಾರೆ. ಈ ನಾಲ್ವರ ಪೈಕಿ ಓರ್ವನ ಶವ ಪತ್ತೆಯಾಗಿದ್ದು, ಇನ್ನುಳಿದ ಮೂವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಮದುವೆಗೆಂದು ಬೆಂಗಳೂರಿನಿಂದ ಶಿವಮೊಗ್ಗ ನಗರಕ್ಕೆ ಬಂದಿದ್ದರು. ಮದುವೆ ಮುಗಿಸಿಕೊಂಡು ಸ್ವಲ್ಪ ಎಂಜಾಯ್ ಮಾಡಲೆಂದು ಆಸುಪಾಸಿನ ನದಿಯನ್ನು ಗೂಗಲ್​​​​​ನಲ್ಲಿ ಸರ್ಚ್ ಮಾಡಿದ್ದು,  ಹತ್ತಿರದ ಮಹಿಷಿ ಬಳಿಯ ತುಂಗಾ ನದಿ ತೋರಿಸಿದೆ.  ಬಳಿಕ ಮ್ಯಾಪ್ ನೋಡಿಕೊಂಡು ನದಿ ಬಳಿ ಬಂದಿದ್ದು, ಈ ವೇಳೆ ಆಟವಾಡುತ್ತಿದ್ದಾಗ ಓರ್ವ ಮುಳುಗಿದ್ದಾನೆ.  ಆತನನ್ನು ರಕ್ಷಣೆ ಮಾಡಲು ಹೋಗಿ ಒಬ್ಬರ ಹಿಂದೆ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Loading...

ಬೆಂಗಳೂರಿನ ಇಟ್ಟಮಡುವಿನ ಪವನ್‌, ಕತ್ರಿಗುಪ್ಪೆಯ ಕಾರ್ತಿಕ್‌ ಮತ್ತು ತಲಘಟ್ಟಪುರದ ನಕುಲ್‌ ಅವರು ಕಾನೂನು ವ್ಯಾಸಂಗ ಮಾಡುತ್ತಿದ್ದರು. ಚೇತನ್‌ ಅವರು ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದರು ಎಂದು ತಿಳಿದು ಬಂದಿದೆ.  ಸ್ಥಳಕ್ಕೆ  ಮಾಳೂರು ಠಾಣೆಯ ಪೊಲೀಸರು ಹಾಗೂ  ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Thu, 26 November 26

ಬಸವರಾಜ್​ ಯರಗಣವಿ

ಬಸವರಾಜ್ ಯರಗಣವಿಯವರು ಮೂಲತಃ ಧಾರವಾಡ ಜಿಲ್ಲೆಯವರು. ಇವರು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ 2008ರ ಏಪ್ರಿಲ್ ನಿಂದ ವೃತ್ತಿ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವರ್ಷ, ನಂತರ ಹಾವೇರಿ ಜಿಲ್ಲೆಯಲ್ಲಿ 3 ವರ್ಷ ವರದಿಗಾರಿಕೆಯ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ, ಅಪರಾಧ, ಮಹತ್ವದ ಬೆಳವಣಿಗೆ ಹಾಗೂ ಮಾನವೀಯ ಸುದ್ದಿಗಳನ್ನು ವರದಿ ಮಾಡಿರುವ ಅನುಭವವಿದೆ.

Read More
Loading...
Unable to load recommendations.
Follow Us