Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಣ್ಯ ಪ್ರದೇಶ ಅಕ್ರಮ ಒತ್ತುವರಿ: ಕ್ರಮಕೈಗೊಳ್ಳದ ಕಂದಾಯ, ಅರಣ್ಯ ಇಲಾಖೆ ವಿರುದ್ಧ ಲೋಕಾಕಯುಕ್ತಕ್ಕೆ ದೂರು

ಶಿವಮೊಗ್ಗ ಜಿಲ್ಲೆಯ ಸೊರಬ ಮತ್ತು ಸಾಗರ ತಾಲೂಕಿನಲ್ಲಿರುವ 3,111 ಎಕರೆ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿಯಾದ ಅರಣ್ಯ ಪ್ರದೇಶವನ್ನು ರಾಜ್ಯ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಇನ್ನೂವರೆಗು ತೆರವು ಮಾಡಿಲ್ಲ. ಈ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಆಚಾರ್ ಎಂಬುವರು ಇಲಾಖೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಅರಣ್ಯ ಪ್ರದೇಶ ಅಕ್ರಮ ಒತ್ತುವರಿ: ಕ್ರಮಕೈಗೊಳ್ಳದ ಕಂದಾಯ, ಅರಣ್ಯ ಇಲಾಖೆ ವಿರುದ್ಧ ಲೋಕಾಕಯುಕ್ತಕ್ಕೆ ದೂರು
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Mar 25, 2023 | 1:07 PM

ಶಿವಮೊಗ್ಗ: ಜಿಲ್ಲೆಯ ಸೊರಬ (Sorab) ಮತ್ತು ಸಾಗರ (Sagar) ತಾಲೂಕಿನಲ್ಲಿರುವ 3,111 ಎಕರೆ ಅರಣ್ಯ ಪ್ರದೇಶವನ್ನು (Forest Land) ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿಯಾದ ಅರಣ್ಯ ಪ್ರದೇಶವನ್ನು ರಾಜ್ಯ ಕಂದಾಯ (Revenue Department) ಮತ್ತು ಅರಣ್ಯ ಇಲಾಖೆಯ (Forest Department) ಅಧಿಕಾರಿಗಳು ಇನ್ನೂವರೆಗು ತೆರವು ಮಾಡಿಲ್ಲ. ಈ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಆಚಾರ್ ಎಂಬುವರು ಇಲಾಖೆಯ ಅಧಿಕಾರಿಗಳ ವಿರುದ್ಧ ಮಾರ್ಚ್ 14 ರಂದು ಲೋಕಾಯುಕ್ತಕ್ಕೆ (Lokayukta) ದೂರು ನೀಡಿದ್ದಾರೆ. 2013 ರಿಂದ 2017ರವರೆಗೆ ಸಾಗರ ತಾಲೂಕಿನ ತಹಸೀಲ್ದಾರ್​ ಆಗಿದ್ದ ಎಲ್ ಬಿ ಚಂದ್ರಶೇಖರ್ ಅವರು, ಪಶ್ಚಿಮ ಘಟ್ಟದಲ್ಲಿರುವ ಕಾನ್, ಸೋಪಿನಬೆಟ್ಟ ಮತ್ತು ಜಂಗ್ಲಿಯ 3,111 ಎಕರೆ ಅರಣ್ಯ ಪ್ರದೇಶವನ್ನು 1,000 ಕ್ಕೂ ಹೆಚ್ಚು ಜನರಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಅರಣ್ಯ ಪ್ರದೇಶವನ್ನು ಮಂಜೂರು ಮಾಡುವ ಮೊದಲು ಕೇಂದ್ರ ಸರ್ಕಾರದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದ್ದರೂ ಸಹ, ಎಲ್ ಬಿ ಚಂದ್ರಶೇಖರ್ ಯಾವುದೇ ಅನುಮತಿಯನ್ನು ಪಡೆಯದೇ ಮಂಜೂರು ಮಾಡಿದ್ದಾರೆ. 2018 ರಿಂದ 2021 ರ ವರೆಗೆ ಸಹಾಯಕ ಆಯುಕ್ತರ ಕಚೇರಿ ಮಂಚೂರಾಗಿದ್ದ ಎಲ್ಲಾ ಅರಣ್ಯ ಪ್ರದೇಶವನ್ನು ರದ್ದುಗೊಳಿಸಿದೆ. ರದ್ದತಿ ಆದೇಶದ ವಿರುದ್ಧ ಜನರು ಸಾಗರದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ ಯುವಕ, ವಿಡಿಯೋ ವೈರಲ್

ಜಿಲ್ಲಾಧಿಕಾರಿಗಳು ಕೂಡ ಸಹಾಯಕ ಆಯುಕ್ತರ ರದ್ದತಿ ಆದೇಶವನ್ನು ಎತ್ತಿ ಹಿಡಿದಿದ್ದರು. ಆದರೆ, ಇಲ್ಲಿಯವರೆಗೂ ಅತಿಕ್ರಮಣವಾಗಿದ್ದ ಅರಣ್ಯ ಭೂಮಿಯನ್ನು, ಇಲಾಖೆ ತೆರವು ಮಾಡಿ ತಮ್ಮ ಸುಪರ್ದಿಗೆ ತೆಗೆದುಕೊಂಡಿಲ್ಲ ಎಂದು ದೂರಿದ್ದಾರೆ.

ಕೇಂದ್ರ ಸರಕಾರದಿಂದ ಮಂಜಾರಾತಿಗೆ ಅನುಮತಿ ಪಡೆದಿಲ್ಲ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಪ್ರದೇಶವನ್ನು ತೆರವು ಮಾಡಲು ಆದೇಶ ಹೊರಡಿಸಿದ್ದರೂ, ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ತೆರವು ಮಾಡುವುದಾಗಿ ಅಧಿಕಾರಿಗಳು ದಿನಾಂಕವನ್ನು ಮುಂದೂಡುತ್ತಿದ್ದಾರೆ ಎಂದು ಗಿರೀಶ್ ಆಚಾರ್​ ಪರ ವಾದ ಮಂಡಿಸಿದ ವಕೀಲ ವೀರೇಂದ್ರ ಪಾಟೀಲ್ ನ್ಯಾಯಾಲಯಕ್ಕೆ ಹೇಳಿದ್ದಾರೆ.

ಮಂಜೂರು ಮಾಡಲಾಗಿದ್ದ ಪ್ರದೇಶವನ್ನು ರದ್ದುಗೊಳಿಸಿದ್ದರೂ, ಅರಣ್ಯ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯಿದೆ 1963ರ ಕಲಂ 64(ಎ) ಅಡಿ ಒತ್ತುವರಿ ತೆರವು ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಗಿರೀಶ್ ಆಚಾರ್​ ಮನವಿ ಮಾಡಿದ್ದಾರೆ.

2022 ಎಪ್ರಿಲ್​ನಲ್ಲಿ ಕೇಂದ್ರ ಪರಿಸರ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಅರಣ್ಯ, ಪರಿಸರ ಮತ್ತು ಪರಿಸರ) ಜಾವೇದ್ ಅಖ್ತರ್ ಅವರು, ಕರ್ನಾಟಕ ಸರ್ಕಾರಕ್ಕೆ ಕಾನ್, ಜಂಗ್ಲಿ, ಸೊಪ್ಪಿನಬೆಟ್ಟ ಅರಣ್ಯ ಪ್ರದೇಶ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳಿ ಎಂದು ಸೂಚಿಸಿದ್ದರು. ಆದರೆ ಅತಿಕ್ರಮಣದಾರರನ್ನು ರಕ್ಷಿಸಲು ಉದ್ದೇಶಪೂರ್ವಕವಾಗಿ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆಚಾರ್​ ಹೇಳಿದ್ದಾರೆ.

1996 ರಲ್ಲಿ, ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮತಿಯಿಲ್ಲದೆ ಕೈಗೊಂಡ ಅರಣ್ಯ ಪ್ರದೇಶದೊಳಗಿನ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಲು ನಿರ್ದೇಶನ ನೀಡಿತ್ತು. ಮತ್ತು ಮಾಲೀಕತ್ವವನ್ನು ಲೆಕ್ಕಿಸದೆ ಸರ್ಕಾರಿ ದಾಖಲೆಗಳಲ್ಲಿನ ಪ್ರದೇಶವನ್ನು ಅರಣ್ಯ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Sat, 25 March 23