Karnataka Weather Report: ಕಳೆದ 24 ಗಂಟೆಯಲ್ಲಿ ಕರ್ನಾಟಕ ಯಾವ ಭಾಗದಲ್ಲಿ ಅತಿ ಹೆಚ್ಚು ಮಳೆ?

ಕರ್ನಾಟಕ ಮಳೆ, ಹವಾಮಾನ ವರದಿ: ಕರ್ನಾಟಕದಲ್ಲಿ ಜುಲೈ 12ರ ವರೆಗೆ ಭಾರಿ ಮಳೆ ಮುನ್ಸೂಚನೆ ಇದ್ದು, ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 176 ಮಿ.ಮೀ ಮಳೆ ದಾಖಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಜುಲೈ 9ರ ವರೆಗೆ ಭಾರಿ ಮಳೆ, ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಜುಲೈ 10ರ ವರೆಗೆ ಗುಡುಗು-ಸಿಡಿಲು ಸಹಿತಸಾಧಾರಣ ವರ್ಷಧಾರೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Karnataka Weather Report: ಕಳೆದ 24 ಗಂಟೆಯಲ್ಲಿ ಕರ್ನಾಟಕ ಯಾವ ಭಾಗದಲ್ಲಿ ಅತಿ ಹೆಚ್ಚು ಮಳೆ?
ಮಳೆ
Image Credit source: Tv9 Kannada

Updated on: Jul 06, 2026 | 3:04 PM

ಮುಖ್ಯಾಂಶಗಳು

  • ಜುಲೈ 12ರ ವರೆಗೂ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ
  • ಕಳೆದ 24 ಗಂಟೆ ಅವಧಿಯಲ್ಲಿ ಹಲವೆಡೆ ಭಾರಿ ವರ್ಷಧಾರೆ
  • ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ಅತಿ ಹೆಚ್ಚು ಮಳೆ

ಬೆಂಗಳೂರು, ಜುಲೈ 06: ಕರ್ನಾಟಕದಾದ್ಯಂತ ಜುಲೈ 12ರ ವರೆಗೂ ಮಳೆಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜುಲೈ 9ರ ವರೆಗೆ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಜುಲೈ 10ರ ವರೆಗೆ ಗುಡುಗು-ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಈ ನಡುವೆ ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಸುರಿದ ಪ್ರದೇಶಗಳ ಮಾಹಿತಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದೆ. ಆ ಪ್ರಕಾರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ಅತಿ ಹೆಚ್ಚು ಅಂದರೆ 176 ಮಿ.ಮೀ. ಮಳೆಯಾಗಿದೆ.

ಕರ್ನಾಟಕದಲ್ಲಿ ಜುಲೈ 5ರಂದು ಅಧಿಕ ಮಳೆಯಾದ ಸ್ಥಳಗಳು

ಉಳಿದಂತೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಜ್ರಿಯಲ್ಲಿ 142.5 ಮಿ.ಮೀ., ಬೆಳಗಾವಿಯ ಮೋಹಿಶೆಟ್​​ನಲ್ಲಿ 120.5 ಮಿ.ಮೀ., ಉತ್ತರ ಕನ್ನಡದ ಶಿರಸಿಯ ಶಿವಳ್ಳಿಯಲ್ಲಿ 114.5 ಮಿ.ಮೀ., ಕೊಡಗಿನ ವಿರಾಜಪೇಟೆಯ ಅರ್ವತೊಕ್ಲುವಿನಲ್ಲಿ 95.5 ಮಿ.ಮೀ., ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ 77 ಮಿ.ಮೀ., ಧಾರವಾಡದ ಕೊಟಬಾಗಿಯಲ್ಲಿ 54.5 ಮಿ.ಮೀ., ಹಾವೇರಿಯ ಹಾನಗಲ್​​ನ ಹೀರೂರಿನಲ್ಲಿ 34.5 ಮಿ.ಮೀ. ಮಳೆ ಸುರಿದಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ಮಳೆಯ ಅಬ್ಬರ! 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಚಿಕ್ಕಮಗಳೂರಿನ ಮೂಡಿಗೆರೆಯ ಬೆಟ್ಟಗೆರೆಯಲ್ಲಿ 115.5 ಮಿ.ಮೀ., ಹಾಸನ ಜಿಲ್ಲೆಯ ಸಕಲೇಶಪುರದ ಕ್ಯಾಮಾನಹಳ್ಳಿಯಲ್ಲಿ 73 ಮಿ.ಮೀ., ದಾವಣಗೆರೆ ಚೆನ್ನಗಿರಿಯ ಹೆಬ್ಬಾಳಗೆರೆಯಲ್ಲಿ 23.5 ಮಿ.ಮೀ., ಚಿತ್ರದುರ್ಗದ ಹೊಳಲ್ಕೆರೆಯ ಆದನೂರಲ್ಲಿ 10.5 ಮಿ.ಮೀ., ಚಾಮರಾಜನಗರದ ಯಳಂದೂರಿನ ಹೊನ್ನೂರಿನಲ್ಲಿ 21.5 ಮಿ.ಮೀ. ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 3:02 pm, Mon, 6 July 26

Follow Us