ಸ್ಟಿಂಗ್ ಆಪರೇಷನ್ ಎಫ್​​ಐಆರ್ ಕಾಪಿ ಲಭ್ಯ: ಸಿದ್ದರಾಮಯ್ಯ ನೀಡಿದ ದೂರಿನಲ್ಲೇನಿದೆ ನೋಡಿ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್‌ ಸಂಚಲನ ಜೋರಾಗಿದೆ. ಕಳೆದ ವಾರದ ಸಂಪುಟ ಸಭೆಯಲ್ಲಿ ಸುದ್ದು ಮಾಡಿದ್ದ ಸ್ಟಿಂಗ್ ಆಪರೇಷನ್‌ ಇಂದಿನ ಸಂಪುಟದವರೆಗೂ ನಿಂತಿಲ್ಲ. ಸಚಿವರ ಸ್ಟಿಂಗ್ ಆಪರೇಷನ್ ಮಾತು ಮಾಜಿ ಸಿಎಂ ಸಿದ್ದರಾಮಯ್ಯನವರೆಗೂ ಬಂದ ಕೂಡಲೇ ರಾಜಕೀಯ ಇನ್ನಷ್ಟು ರಂಗೇರಿದ್ದು, ಇದನ್ನೇ ಅಸ್ತ್ರ ಮಾಡಿಕೊಂಡ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಇನ್ನು ಸಿದ್ದರಾಮಯ್ಯ ನೀಡಿದ ದೂರಿನ ಕಾಪಿ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಹಾಗಾದ್ರೆ, ಎಫ್​​ಐಆರ್ ಕಾಪಿನಲ್ಲೇನಿದೆ ಎನ್ನುವ ಡಿಟೇಲ್ಸ್​ ಇಲ್ಲಿದೆ.

ಸ್ಟಿಂಗ್ ಆಪರೇಷನ್ ಎಫ್​​ಐಆರ್ ಕಾಪಿ ಲಭ್ಯ: ಸಿದ್ದರಾಮಯ್ಯ ನೀಡಿದ ದೂರಿನಲ್ಲೇನಿದೆ ನೋಡಿ
Siddaramaiah
Edited By:

Updated on: Oct 15, 2026 | 9:42 PM

ಬೆಂಗಳೂರು, (ಅಕ್ಟೋಬರ್ 15): ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ರಾಜ್ಯರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಈ ಸಂಬಂಧ ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ ಕೆಲ ಸುಳಿವು ಜೊತೆ ಸ್ಟಿಂಗ್ ಆಪರೇಷನ್ ಸೂತ್ರಧಾರಿಯ ಫೋಟೋ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಸ್ಟಿಂಗ್ ಮಾಡಿದವರ ಹೆಸರು ಸಹ ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನು ಈ ಸ್ಟಿಂಗ್ ಆಪರೇಷನ್ ಬಗ್ಗೆ ಸಿದ್ದರಾಮಯ್ಯ ಅಕ್ಟೋಬರ್ 6ರಂದೇ ದೂರು ನೀಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ, ತನಿಖೆಗೆ ಚುರುಕುಗೊಳಿಸಿದೆ. ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿದ್ದರಾಮಯ್ಯ ದಾಖಲಿಸಿದ ದೂರಿನಲ್ಲೇನಿದೆ ಎನ್ನುವ ಎಫ್​​ಐಆರ್ ಕಾಪಿ ಟಿವಿ9ಗೆ ಲಭ್ಯವಾಗಿದೆ.

ದೂರಿನಲ್ಲಿ ಏನಿದೆ?

ತಮ್ಮ ವಿರುದ್ದದ ಸ್ಟಿಂಗ್ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಸಿದ್ದರಾಮಯ್ಯನವರು ಅ.06ರಂದು ದೂರು ದಾಖಲಿಸಿದ್ದಾರೆ. ಹೌದು… ಸೆಪ್ಟಂಬರ್ 27ರಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಸಂಬಂಧ ಮಾಜಿ ಸಿದ್ದರಾಮಯ್ಯ ಅವರು ದೂರು ದಾಖಲಿಸಿದ್ದು, ದೂರಿನಲ್ಲಿ ಅಪರಿಚಿತ ವ್ಯಕ್ತಿಗಳು ಸುಳ್ಳು ಹಾಗೂ ದುರುದ್ದೇಶಪೂರಿತ ಮಾಹಿತಿಯೊಂದಿಗೆ ನಕಲಿ ಗುರುತು ಬಳಸಿ, ಗುಪ್ತವಾಗಿ ಚಿತ್ರೀಕರಿಸಿದ ವಿಡಿಯೋವನ್ನು ಹಂಚಿಕೊಂಡಿದ್ದು, ಯೂಟ್ಯೂಬ್ ವಾಹಿನಿಯಲ್ಲಿ ತಮ್ಮ ಬಗ್ಗೆ ಗಂಭೀರ ಅವಹೇಳನಕಾರಿ ಹಾಗೂ ಸುಳ್ಳು ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ರೂವಾರಿ ಫೋಟೋ ರಿಲೀಸ್ ಬೆನ್ನಲ್ಲೇ ಮತ್ತೊಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ

ನಕಲಿ ಗುರುತನ್ನು ಬಳಸಿ ಗುಪ್ತವಾಗಿ ಚಿತ್ರೀಕರಿಸಿದ ವೀಡಿಯೊ ಸೃಷ್ಟಿಸಿ. ಆ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ದೂರುದಾರರ ಸಾರ್ವಜನಿಕ ಗೌರವ, ಜೀವನಕ್ಕೆ ಹಾನಿ ಉಂಟುಮಾಡುವ ದುರುದ್ದೇಶದಿಂದ ವಿಡಿಯೋ ಸೃಷ್ಟಿಸಿದವರ ಮತ್ತು ಪ್ರಸಾರ ಮಾಡಿದ ವ್ಯಕ್ತಿಗಳ ಬಗ್ಗೆ ತನಿಖೆ ಮಾಡಬೇಕು. ಆರೋಪಿಗಳನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಇನ್ನು ಸಿದ್ದರಾಮಯ್ಯನವರ ದೂರಿನ ಮೇರೆಗೆ ಅಕ್ಟೋಬರ್ 6ರಂದು IT ಕಾಯ್ದೆಯ ಸೆಕ್ಷನ್ 66(C) ಮತ್ತು BNS ಕಾಯ್ದೆಯ ಸೆಕ್ಷನ್ 61, 3(5),308(6),336(4),340(2)ರಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತನಿಖೆ ಚುರುಕುಗೊಂಡಿದೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಇನ್ನು ಈ ಪ್ರಕರಣಕ್ಕೆ ಸಂಬಂಧ ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಅವಶ್ಯಕತೆ ಬಿದ್ದರೆ ತನಿಖಾ ಸಂಸ್ಥೆಗೆ ನೀಡುತ್ತೇವೆ. ಏನು ಮಾಡಬೇಕು ಮಾಡುತ್ತೇವೆ. ತನಿಖೆ ಮುಕ್ತ ಮತ್ತು ಪಾರದರ್ಶಕವಾಗಿ ನಡೆಯುತ್ತೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಬರುವುದಿಲ್ಲ. ಸಿದ್ದರಾಮಯ್ಯರ ಘನತೆ ಗೌರವಕ್ಕಿಂತ ಹೆಚ್ಚು ಯಾವುದೂ ಇಲ್ಲ. ಇದು ಸುಳ್ಳು ವಿಡಿಯೋ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಡಿಯೋ ಹಿಂದೆ ಯಾರಿದ್ದಾರೆಂದು ತನಿಖೆ ಆಗಬೇಕು ಅಂತ ಹೇಳಿದ್ದಾರೆ. ಅದರಂತೆ ನಾವು ಮಾಡುತ್ತಿದ್ದೇನೆ ಎಂದು ತಿಳಿಸಿದರು.
Karnataka Sting Operation Row: ಸ್ಟಿಂಗ್​ ಆಪರೇಷನ್​ ಸಂಬಂಧ ಸಿದ್ದರಾಮಯ್ಯ ದೂರು
ಇನ್ನೊಂದೆಡೆ  ಸ್ಟಿಂಗ್ ಸೂತ್ರಧಾರಿಗಳು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೆಲವು ಹೆಸರು ಹಾಗೂ ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:13 pm, Thu, 15 October 26

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us