ಕೊಪ್ಪಳ: ಸಿದ್ದರಾಮಯ್ಯ ಪ್ರಯಾಣಿಸುವ ಸ್ಪೇಶಲ್ ಫ್ಲೈಟ್ಗೆ ಸಿಗ್ನಲ್ ಕ್ಲಿಯರನ್ಸ್ ಸಿಗದ ಹಿನ್ನಲೆ ಸಿದ್ದರಾಮಯ್ಯ ಇನ್ನೂ ಕೂಡ ಕೊಪ್ಪಳಕ್ಕೆ ಆಗಮಿಸಿಲ್ಲ. ಬಸಾಪೂರದ ಖಾಸಗಿ ವಿಮಾನ ನಿಲ್ದಾಣಕ್ಕೆ ಸ್ಪೇಶಲ್ ಫ್ಲೈಟ್ ಆಗಮಿಸಬೇಕಿದೆ. ಅದ್ರೆ ಸಿಗ್ನಲ್ ಕ್ಲಿಯರನ್ಸ್ ಸಿಗದ ಹಿನ್ನೆಲೆ ಫ್ಲೈಟ್ ಜಿಂದಾಲ್ ಏರಪೋರ್ಟ್ನಲ್ಲೇ ಇದೆ. ಸಿಗ್ನಲ್ ಕ್ಲಿಯರನ್ಸ್ ಗಾಗಿ ಶಾಸಕ ರಾಘವೇಂದ್ರ ಹಿಟ್ನಾಳ್, ಈ ತುಕಾರಾಂ ಕಾಯುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅರ್ಜೆಂಟ್ ಆಗಿ ಬೆಂಗಳೂರಿಗೆ ಹೋಗಬೇಕಾಗಿತ್ತು. ಹಾಗಾಗಿ special flight ಕೊಪ್ಪಳಕ್ಕೆ ಬರಬೇಕಿತ್ತು. ಜಿಂದಾಲ್ ಏರಪೋರ್ಟ್ ನಿಂದ ಕೊಪ್ಪಳ ಬಸಾಪೂರ ವಿಮಾನ ನಿಲ್ದಾಣಕ್ಕೆ special flight ಬರಬೇಕಿತ್ತು. ಆದ್ರೆ ಸಿಗ್ನಲ್ ಕ್ಲಿಯರನ್ಸ್ ಸಿಗದ ಕಾರಣ ಫ್ಲೈಟ್ ರದ್ದು ಮಾಡಲಾಗಿದೆ. ಕೊನೆಗೆ ಜಿಂದಾಲ್ ಏರ್ಪೋರ್ಟ್ಗೆ ಸಿದ್ದರಾಮಯ್ಯ ಹೊರಟಿದ್ದು ಬಳ್ಳಾರಿ ಜಿಲ್ಲೆ ಜಿಂದಾಲ್ನಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನತ್ತ ಸಿದ್ದರಾಮಯ್ಯ ಹೊರಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇನ್ನು ಮತ್ತೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದ ಕಾರು ಚಲಾಯಿಸಲು ಹೋಗಿ ಶಾಸಕ ಬಸನಗೌಡ ದದ್ದಲ್ ಪೇಚೆಗೆ ಸಿಲುಕಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿ ಬ್ರಿಜ್ ಬಳಿ ಕಾರು ಚಾಲಕನನ್ನ ಕೆಳಗೆ ಇಳಿಸಿ ಕಾರು ಚಲಾಯಿಸಲು ಶಾಸಕ ಬಸನಗೌಡ ದದ್ದಲ್ ಮುಂದಾಗಿದ್ದರು. ಆದ್ರೆ ಕಾರ್ ಚಲಾಯಿಸುವಾಗ ಕಾರಿನ ಗೇರ್ ಹಾಕುವುದು ತಿಳಿಯದೆ ಕಾರಿನಿಂದ ಕೆಳಗಿಳಿದಿದ್ದಾರೆ. ನಂತರ ಕಾರ್ ಚಾಲಕನೇ ಕಾರ್ ಚಲಾಯಿಸಿದ್ರು.