ಮೈಸೂರು: ಕೊರೊನಾ ಬಗ್ಗೆ ಆತಂಕ ಹೆಚ್ಚಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಆ್ಯಂಟಿ ಕೊರೊನಾ ಟ್ಯಾಗ್ ಹಾಕಿಕೊಂಡಿದ್ದಾರೆ. ಕೊರೊನಾ ಬಂದಾಗಿನಿಂದ ಸಿದ್ದರಾಮಯ್ಯ ಟ್ಯಾಗ್ನ ಬಳಸುತ್ತಿದ್ದಾರೆ. ಸಿದ್ದರಾಮಯ್ಯಗೆ ಎರಡು ಬಾರಿ ಕೊರೊನಾ ಸೋಂಕು ದೃಢಪಟ್ಟಿತ್ತು. ಕೊರೊನಾ ಟ್ಯಾಗ್ ಬಳಸಿದರೆ ವೈರಸ್ ಬರಲ್ಲ ಎನ್ನುವ ನಂಬಿಕೆಯಿದೆ. ಹೀಗಾಗಿ ಬಹಳ ದಿನಗಳಿಂದ ಸಿದ್ದರಾಮಯ್ಯ ಆ್ಯಂಟಿ ಕೊರೊನಾ ಟ್ಯಾಗ್ನ ಕೊರಳಲ್ಲಿ ಧರಿಸಿದ್ದಾರೆ.
ಕೊವಿಡ್ ಲಸಿಕೆಯ ಬಗ್ಗೆ ಸಿದ್ದರಾಮಯ್ಯ ಪಾಠ
ತಪ್ಪು ಮಾಹಿತಿಯಿಂದ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕೊವಿಡ್ ಲಸಿಕೆ ಹಾಕಿಸಿಕೊಂಡರೆ ಯಾವುದೇ ಸಮಸ್ಯೆ ಇಲ್ಲ. ವೈದ್ಯರು, ಸ್ವಾಮೀಜಿಗಳು ಸೇರಿದಂತೆ ವಿದ್ಯಾವಂತರಲ್ಲೂ ಅರಿವು ಮೂಡಿಲ್ಲ. ಕೊರೊನಾ ಕಡಿಮೆಯಾಗುತ್ತಿದ್ದಂತೆ ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ. ಎಲ್ಲರೂ ಸರಿಯಾಗಿ ಮಾಸ್ಕ್ ಧರಿಸಬೇಕು. ಕೊರೊನಾ ಮುಗಿಯುವವರೆಗೆ ಮಾಸ್ಕ್ ಹಾಕಿಕೊಳ್ಳಿ ಎಂದು ಸುತ್ತೂರು ಮಠದಲ್ಲಿ ಸಿದ್ದರಾಮಯ್ಯ ಸಲಹೆ ನೀಡಿದರು.
ನಮ್ಮ ಅತ್ತಿಗೆ ಕೊರೊನಾದಿಂದ ಮೃತಪಟ್ಟರು. ಕೊರೊನಾ ಯಾರನ್ನು ಬಿಡುತ್ತಿಲ್ಲ. ವಿದ್ಯಾವಂತರಿಗೂ, ಅವಿದ್ಯಾವಂತರಿಗೂ ಕೊರೊನಾ ಬರುತ್ತದೆ. ಕೆಲವರು ಬಾಯಿಗೆ ಮಾಸ್ಕ್ ಹಾಕಿಕೊಂಡು ಮೂಗಿನ ಮೇಲೆ ಸರಿಯಾಗಿ ಹಾಕುವುದಿಲ್ಲ. ಇದರ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಸರ್ಕಾರ ಎಲ್ಲರಿಗೂ ಲಸಿಕೆ ಕೊಡಬೇಕು ಎಂದು ವಿಪಕ್ಷ ನಾಯಕ ಆಗ್ರಹಿಸಿದರು.
ಇದನ್ನೂ ಓದಿ
ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಭಾರತದ ಮೊದಲ ಸುರಂಗ ಅಕ್ವೇರಿಯಂ ಆರಂಭ
(Siddaramaiah wearing the Aunty Corona tag from very long time)
Published On - 12:26 pm, Thu, 1 July 21