ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸ್ನೇಹಮಯಿ ಕೃಷ್ಣ ಆತಂಕ: ಲೋಕಾಯುಕ್ತ ಎಸ್ಪಿಗೆ ಸಿಎಂ ವಿರುದ್ಧ ಮತ್ತೊಂದು ದೂರು
ಲೋಕಾಯುಕ್ತ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯಗೆ ಇಡಿ ಸಂಕಷ್ಟ ಕೂಡ ಶುರುವಾಗಿದೆ. ಈ ಮಧ್ಯೆ ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಎಸ್ಪಿಗೆ ವಾಟ್ಸಾಪ್ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಕಂಪ್ಲೇಂಟ್ ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನ ಬಂಧಿಸುವಂತೆ ಮನವಿ ಮಾಡಿದ್ದಾರೆ.
ಮೈಸೂರು, ಅಕ್ಟೋಬರ್ 05: ಮುಡಾ ಹಗರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳುತ್ತಿದೆ. ನಿನ್ನೆ ದಸರಾ ಉದ್ಘಾಟನೆ ವೇದಿಕೆಯಲ್ಲಿ ಮುಡಾ ರಾಜಕೀಯ ಮಾತನಾಡಿದ್ದನ್ನ ವಿಪಕ್ಷಗಳು ಖಂಡಿಸಿವೆ. ಈ ಮಧ್ಯೆ ದೂರುದಾರ ಸ್ನಹಮಯಿ ಕೃಷ್ಣ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಲೋಕಾಯುಕ್ತ ಎಸ್ಪಿಗೆ ವಾಟ್ಸಾಪ್ ಮೂಲಕ ಮತ್ತೊಂದು ದೂರು ನೀಡಿದ್ದಾರೆ.
ಬಿಜೆಪಿ-ಜೆಡಿಎಸ್ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲು ಸಿದ್ಧರಾಗಿ ಎಂದಿದ್ದ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸ್ನೇಹಮಯಿ ಕೃಷ್ಣ ಆತಂಕ ವ್ಯಕ್ತಪಡಿಸಿದ್ದು, ಹೀಗಾಗಿ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. ಇವರ ಪ್ರಚೋದನೆಯಿಂದ ನನಗೆ, ನನ್ನ ಕುಟುಂಬಕ್ಕೆ ತೊಂದರೆ ಇದೆ. ಸಮಾಜದ ಸ್ವಾಸ್ಥ್ಯ ಹಾಳಾಗುತ್ತೆ, ಆದ್ದರಿಂದ ಕೂಡಲೇ ಸಿದ್ದರಾಮಯ್ಯರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಭಾಷಣದ ಲಿಂಕ್ನ್ನು ಕಳುಹಿಸಿದ್ದಾರೆ.
ಸ್ನಹಮಯಿ ಕೃಷ್ಣ ದೂರಿನಲ್ಲಿ ಏನಿದೆ?
ಮಾನ್ಯ ಪೊಲೀಸ್ ಅಧೀಕ್ಷಕರಿಗೆ ನಮಸ್ಕಾರಗಳು. ನಿಮ್ಮ ಠಾಣೆಯಲ್ಲಿ ದಾಖಲಾಗಿರುವ 11/2024 ಸಂಖ್ಯೆಯ ಪ್ರಕರಣದ 1ನೇ ಆರೋಪಿ ಸಿದ್ದರಾಮಯ್ಯನವರು ಈ ಪ್ರಕರಣದ ವಿರುದ್ದ ರಾಜ್ಯದ ಜನತೆಗೆ ಬಹಿರಂಗವಾಗಿ ಪ್ರಚೋದನೆ ನೀಡುತ್ತಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಇಡಿಗೆ 500ಕ್ಕೂ ಹೆಚ್ಚು ದಾಖಲೆ ಕೊಟ್ಟು ಬಂದ ಸ್ನೇಹಮಯಿ ಕೃಷ್ಣ ಹೇಳಿದ್ದಿಷ್ಟು
ಇವರ ಇಂತಹ ಪ್ರಚೋದನೆಯಿಂದ ದೂರುದಾರನಾದ ನನ್ನ ಮತ್ತು ನನ್ನ ಕುಟುಂಬಕ್ಕೆ ತೊಂದರೆ ಆಗುವ ಮತ್ತು ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಆದ್ದರಿಂದ ಕೂಡಲೇ ಸಿಎಂ ಸಿದ್ದರಾಮಯ್ಯರನ್ನು ಬಂಧಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮುಡಾ ಕೇಸ್: ಸಿಎಂಗೆ ಭಯ ಹುಟ್ಟಿಸಿದ pmlaನ ಆ ಸೆಕ್ಷನ್ ಯಾವುದು ಗೊತ್ತಾ?
ಇನ್ನು ಇತ್ತೀಚೆಗೆ ಸಿಎಂ ಪರ ಬ್ಯಾಟ್ ಬೀಸಿದ ಜಿಟಿಡಿ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಾಂಬ್ ಸಿಡಿಸಿದ್ದಾರೆ. ಮುಡಾದಲ್ಲಿ ಜಿ.ಟಿ.ದೇವೇಗೌಡರದ್ದೂ ಅಕ್ರಮ ಇದೆ. ಕಳ್ಳರೆಲ್ಲ ಒಂದು ಕೂಟ ರಚಿಸಿಕೊಂಡಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ, ಸಿಎಂ ಪತ್ನಿಗೆ ಮಾತ್ರವಲ್ಲ, ಸಚಿವ ಮಹದೇವಪ್ಪ ಸಹೋದರನ ಮಗ ನವೀನ್ ಬೋಸ್, ಸಿಎಂ ಆಪ್ತ ಹಾಗೂ ಮುಡಾ ಅಧ್ಯಕ್ಷ ಮರಿಗೌಡ ಸಹೋದರ ಶಿವಣ್ಣನಿಗೂ ಸೈಟು ಕೊಡಲಾಗಿದೆ ಅಂತಾ ಸ್ನೇಹಮಯಿ ಹೊಸ ಬಾಂಬ್ ಸಿಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.