ಬೆಂಗಳೂರು: ಸಚಿವರು, ಸಿಎಂ ಕಚೇರಿ ಹೆಸರಲ್ಲಿ ಹಲವರಿಗೆ ಮೋಸ ಎಸಗಿದ ಆರೋಪದಡಿ ಸಿಸಿಬಿ ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಅವರ ಪಿಎ ರಾಜಣ್ಣ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬೆಂಗಳೂರನಲ್ಲಿ ಸಚಿವ ಶ್ರೀರಾಮುಲು ಮನೆಯಲ್ಲಿದ್ದ ವೇಳೆಯೇ ಸಿಸಿಬಿ ತಂಡ ಬಂಧಿಸಿದ್ದು, ರಾಜಣ್ಣ ಕೆಲಸದ ಆಮಿಷ, ಅಧಿಕಾರಿಗಳಿಗೆ ವರ್ಗಾವಣೆ ಆಮಿಷ ಒಡ್ಡಿ ಕೋಟ್ಯಾಂತರ ಹಣ ಕಬಳಿಕೆ ಮಾಡಿದ್ದರು ಎಂದು ಹೇಳಲಾಗಿದೆ. 2 ದಿನಗಳ ಹಿಂದೆ ರಾಜಣ್ಣ ವಿರುದ್ಧ ದಾಖಲಾಗಿದ್ದ ಎಫ್ಐಆರ್ ದಾಖಲಾಗಿತ್ತು. ನಿನ್ನೆ ಬೆಳಗ್ಗೆಯಿಂದ ಕಾಯ್ದ ಸಿಸಿಬಿ ಇಂದು ರಾಜಣ್ಣ ಅವರನ್ನು ಬಂಧಿಸಿದ್ದಾರೆ.
ಶ್ರೀರಾಮುಲು ಹೆಸರಿನ ಜತೆಗೆ ವಿಜಯೇಂದ್ರ ಹೆಸರುನ್ನೂ ರಾಜಣ್ಣ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಅರೋಪ ಕೇಳಿಬಂದಿದ್ದು, ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ದೂರಿನ ಮೇಲೆ ರಾಜಣ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಬಂಧಿಸಲು ತೆರಳಿದ್ದಾಗ ಒಮ್ಮೆಗೆ ಬಂಧನಕ್ಕೆ ಅವಕಾಶ ನೀಡದೇ ರಾಜಣ್ಣ ಬೃಹನ್ನಾಟಕವಾಡಿದ್ದಾರೆ. ಪೊಲೀಸರ ಜತೆ ವಾದ ನಡೆಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಸಚಿವರ ಹೆಸರಲ್ಲಿ ಕೋಟ್ಯಾಂತರ ರೂ.ವಸೂಲಿ ಮಾಡಿರುವ ಗಂಭೀರ ಆರೋಪ ರಾಜಣ್ಣ ವಿರುದ್ಧ ಕೇಳಿಬಂದಿತ್ತು. ಹಲವು ವರ್ಷಗಳಿಂದ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜತೆ ರಾಜಣ್ಣ ನಿಕಟ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ದೊರೆತಿದೆ.
2007ರಿಂದಲೂ ಸಚಿವ ಶ್ರೀರಾಮುಲು ಆಪ್ತನಾಗಿದ್ದ ರಾಜಣ್ಣ ಈ ಮೊದಲು ಎನೋಬಲ್ ಇಂಡಿಯಾದಲ್ಲಿ ಕೆಲಸ ಮಾಡಿದ್ದರು. 2008-09ರಲ್ಲಿ ಶ್ರೀರಾಮುಲು ಸಚಿವರಾಗಿದ್ದಾಗಲೂ ಅವರಿಗೆ ಪಿಎ ಆಗಿ ಕೆಲಸ ಮಾಡಿದ್ದರು. ಬಳ್ಳಾರಿಯಲ್ಲಿ ಕುಡಿವ ನೀರಿನ ವಾಟರ್ ಬಾಟಲ್ ಪ್ಲಾಂಟ್ ಮತ್ತು ಬೈಲ್ ಶಾಪ್ ಹೊಂದಿರುವ ರಾಜಣ್ಣ ಹೆಚ್ಚಾಗಿ ಸಚಿವ ರಾಮುಲು ಜೊತೆ ಕಾಣಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ:
ಗ್ರಾಮ ಪಂಚಾಯತಿ ಮಟ್ಟದ ನೌಕರರ ಕಾಯಮಾತಿ ಇಲ್ಲ, ಕೊವಿಡ್ನಿಂದ ಮೃತಪಟ್ಟರೆ 30 ಲಕ್ಷ ಪರಿಹಾರ; ಸಚಿವ ಈಶ್ವರಪ್ಪ
(Social Welfare Minister Sriramulu PA Rajanna arrested on charges of fraud and fraud by CCB Police in Bengaluru)
Published On - 9:29 pm, Thu, 1 July 21