ಹೆಂಡತಿಯನ್ನು ಜೊತೆಗೆ ಕಳಿಸ್ತಿಲ್ಲ ಎಂದು ಮಾವನ ಮೇಲೆ ಹಲ್ಲೆ ಮಾಡಿ ಕೊಂದೇಬಿಟ್ಟ ಅಳಿಯ

ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸ್ತಿಲ್ಲ ಎಂದು ಕೋಪಗೊಂಡ ಕುಡಕ ಅಳಿಯ ಮಾವನ ಮೇಲೆಯೇ ಹಲ್ಲೆ ಮಾಡಿ ಹತ್ಯೆಗೈದ ಘಟನೆ ಹಾಸನದಲ್ಲಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಪ್ರಾಣಬಿಟ್ಟಿದ್ದಾರೆ.

ಹೆಂಡತಿಯನ್ನು ಜೊತೆಗೆ ಕಳಿಸ್ತಿಲ್ಲ ಎಂದು ಮಾವನ ಮೇಲೆ ಹಲ್ಲೆ ಮಾಡಿ ಕೊಂದೇಬಿಟ್ಟ ಅಳಿಯ
ಸಾವುImage Credit source: The Statesman
Follow us
ಮಂಜುನಾಥ ಸಿ.
| Updated By: ಆಯೇಷಾ ಬಾನು

Updated on:Jan 26, 2024 | 2:35 PM

ಹಾಸನ, ಜ.26: ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸ್ತಿಲ್ಲ ಎಂದು ಕೋಪಗೊಂಡ ಅಳಿಯ, ಮಗಳನ್ನು ಕೊಟ್ಟ ಮಾವನನ್ನೇ ಹತ್ಯೆಗೈದ ಘಟನೆ ಹಾಸನದಲ್ಲಿ (Hassan) ನಡೆದಿದೆ. ಕುಡಿದ‌ ಮತ್ತಿನಲ್ಲಿ ಮಾವನ ಮೇಲೆ ಹಲ್ಲೆ (Assault) ಮಾಡಿ ಕೊಲೆ ಮಾಡಿದ್ದಾನೆ. ಬೇಲೂರು (Belur) ತಾಲೂಕಿನ ರಾಮೇನಹಳ್ಳಿಯ ತಮ್ಮಯ್ಯ (64) ಮೃತ ವ್ಯಕ್ತಿ. ಬಲ್ಲೇನಹಳ್ಳಿ ಗ್ರಾಮದ ಅಳಿಯ ಜಗದೀಶ್ (45) ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.

20 ವರ್ಷಗಳ ಹಿಂದೆ ತಮ್ಮಯ್ಯ ಪುತ್ರಿಯನ್ನು ಜಗದೀಶ್ ಮದುವೆಯಾಗಿದ್ದ. ತಮ್ಮಯ್ಯಗೆ ಗಂಡು ಮಕ್ಕಳಿಲ್ಲದ ಕಾರಣ ತನ್ನನ್ನು ನೋಡಿಕೊಳ್ಳಲೆಂದು ಮಗಳನ್ನು ಮನೆಯಲ್ಲೇ ಇರಿಸಿಕೊಂಡಿದ್ದ. ಮತ್ತೊಂದೆಡೆ ಪತಿ ಜಗದೀಶ್, ತನಗೆ ಮನೆಯ ಜವಾಬ್ದಾರಿ ನೀಡುತ್ತಿಲ್ಲ ಎಂದು ಪತ್ನಿಯನ್ನ ತನ್ನ ಮನೆಗೆ ವಾಪಸ್ ಕಳಿಸುವಂತೆ ಪದೇ ಪದೆ ಜಗಳ ಮಾಡುತ್ತಿದ್ದ. ನಿನ್ನೆ ಮನೆ ಬಳಿಯೇ ಬಂದು ಮಾವನ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಹಲ್ಲೆಯಿಂದ ಅಸ್ವಸ್ಥಗೊಂಡಿದ್ದ ತಮ್ಮಯ್ಯನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಸಂಭವಿಸಿದೆ. ಸಾರ್ವಜನಿಕರು ಜಗದೀಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಡಿತದ ದಾಸನಾಗಿದ್ದ ಆರೋಪಿ ಪೊಲೀಸರ ವಶದಲ್ಲಿದ್ದಾನೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಜ್ಯುವೆಲರಿ ಮಾಲೀಕನ ಮೇಲೆ ಗುಂಡಿನ ದಾಳಿ, ಚಿನ್ನಾಭರಣ, ಹಣ ತುಂಬಿದ ಬ್ಯಾಗ್ ದೋಚಿ ಪರಾರಿ

ಹೊತ್ತಿ ಉರಿದ ಕಾರು; ಪ್ರಾಣಾಪಾಯದಿಂದ ಪಾರು

ಹೆದ್ದಾರಿಯಲ್ಲೇ ಕಾರೊಂದು ಹೊತ್ತಿ ಉರಿದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್​​.ವಡ್ಡಹಳ್ಳಿಯಲ್ಲಿ ಘಟನೆ ನಡೆದಿದ್ದು, ಕಾರ್​​ನಲ್ಲಿದ್ದ ಒಂದು ಮಗು ಸೇರಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಮಹೇಶ್ ಎಂಬುವರಿಗೆ ಸೇರಿದ ಕಾರು, ತಾಂತ್ರಿಕ ದೋಷದಿಂದ ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ನಂಗಲಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಮೂವರು ಬಲಿ

ವಿದ್ಯುತ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಚೌಕನಗಾಳಾಯದಲ್ಲಿ ಘಟನೆ ನಡೆದಿದ್ದು, ದಾಂಡೇಲಿ ಪಟ್ಟಣದ ನಿವಾಸಿಗಳಾದ ರಾಕೇಶ್ ಮಹದೇವಪ್ಪ ಬಡಿಗೇರ, ರಿತೇಶ್ ಸುಬ್ರಹ್ಮಣ್ಯ ನಾಯರ್, ಕೃಷ್ಣ ವಣ್ಣುರಾಯ ಮೃತಪಟ್ಟ ದುರ್ದೈವಿಗಳು. ಅತಿವೇಗದ ಚಾಲನೆಯಿಂದ ನಡೆದ ಅಪಘಾತ ಸಂಭವಿಸಿದೆ ಎಂದು ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:07 pm, Fri, 26 January 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್