ರಾತ್ರಿ ಪಾಸಾದ ವಿದ್ಯಾರ್ಥಿಗಳು ಬೆಳಗಾಗುವಷ್ಟರಲ್ಲಿ ಫೇಲ್! ಬೆಂಗಳೂರು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಎಡವಟ್ಟಿಗೆ ವಿದ್ಯಾರ್ಥಿಗಳ ಆಕ್ರೋಶ

| Updated By: sandhya thejappa

Updated on: Jun 27, 2022 | 12:08 PM

ಆಕ್ರೋಶಗೊಂಡಿದ್ದ ವಿದ್ಯಾರ್ಥಿಗಳು ಅಧಿಕಾರಿಗಳ ಯಡವಟ್ಟನ್ನು ಪ್ರಶ್ನಿಸಿದ್ದಾರೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ಮತ್ತೊಂದು ಯಡವಟ್ಟು ಮಾಡಿದ್ದಾರೆ.

ರಾತ್ರಿ ಪಾಸಾದ ವಿದ್ಯಾರ್ಥಿಗಳು ಬೆಳಗಾಗುವಷ್ಟರಲ್ಲಿ ಫೇಲ್! ಬೆಂಗಳೂರು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಎಡವಟ್ಟಿಗೆ ವಿದ್ಯಾರ್ಥಿಗಳ ಆಕ್ರೋಶ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಫಲಿತಾಂಶ ಪ್ರಕಟಣೆ ವೇಳೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ (Visvesvaraya Technological University) ಎಡವಟ್ಟು ಮಾಡಿದ್ದು, ವಿದ್ಯಾರ್ಥಿಗಳು (Students) ವಿಟಿಯು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಲಿತಾಂಶ ತಿದ್ದುಪಡಿ ವೇಳೆಯಲ್ಲೂ ಸಾಲು ಸಾಲು ಎಡವಟ್ಟಾಗಿದ್ದು, ರಾತ್ರಿ ಪಾಸಾದ ವಿದ್ಯಾರ್ಥಿಗಳು ಬೆಳಗಾಗೋ ಅಷ್ಟರಲ್ಲಿ ಫೇಲ್ ಆಗಿದ್ದಾರೆ. ಪ್ರತಿ ವಿಷಯಕ್ಕೆ 60 ಅಂಕಗಳಿಗೆ ಲಿಖಿತ ಪರೀಕ್ಷೆ ಹಾಗೂ 40 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಪರೀಕ್ಷೆ ಇರುತ್ತದೆ. ಗರಿಷ್ಠ 100 ಅಂಕಗಳಿಗೆ ಮೌಲ್ಯಮಾಪನ ನಡೆಸಲಾಗುತ್ತದೆ. ಆದರೆ 80 ಅಂಕ ಪಡೆದವರು ಫೇಲ್ ಅಂತ ಫಲಿತಾಂಶ ಪ್ರಕಟ ಮಾಡಿದ್ದಾರೆ.

ಆಕ್ರೋಶಗೊಂಡಿದ್ದ ವಿದ್ಯಾರ್ಥಿಗಳು ಅಧಿಕಾರಿಗಳ ಯಡವಟ್ಟನ್ನು ಪ್ರಶ್ನಿಸಿದ್ದಾರೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ಮತ್ತೊಂದು ಯಡವಟ್ಟು ಮಾಡಿದ್ದಾರೆ. ಫಲಿತಾಂಶ ನೀಡಿದ ದಿನ ಪಾಸಾಗಿದ್ದ ವಿದ್ಯಾರ್ಥಿಗಳು ಮಾರನೇ ದಿನ ಫೇಲ್ ಎಂದು ಪ್ರಕಟಿಸಿದ್ದಾರೆ. ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡಬೇಡಿ ಎಂದು ಸಿಡಿದೆದ್ದ ಎನ್ಎಸ್ಯುಐ ವಿದ್ಯಾರ್ಥಿಗಳು, ಸಮಸ್ಯೆ ಸರಿಪಡಿಸದಿದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟ ಹತ್ತಿ ಹನುಮನ ದರ್ಶನ ಪಡೆದರು ಹಿಂದಿನ ಮೈಸೂರು ಒಡೆಯರ್ ಸಂಸ್ಥಾನದ ಯದುವೀರ್ ಮತ್ತು ತ್ರಿಷಿಕಾ

ಇದನ್ನೂ ಓದಿ
ಇಂಡಿಯಲ್ಲಿರುವ ಗುರುದೇವ್ ರಾನಡೆ ಆಶ್ರಮದಲ್ಲಿ ಎರಡು ದಿನ ವಿಶ್ರಾಂತಿ ಪಡೆದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
Alia Bhatt Pregnant: ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​
Ashadha Amavasya 2022: ಆಷಾಢ ಅಮಾವಾಸ್ಯೆ ಯಾವಾಗ? ಪೂಜಾ ವಿಧಾನ ಹಾಗೂ ಶುಭ ಮುಹೂರ್ತ
IKEA Nagasandra Store:  9 ಫುಟ್​ಬಾಲ್​ ಸ್ಟೇಡಿಯಂನಷ್ಟು ದೊಡ್ಡ IKEA ಸ್ಟೋರ್ ನಾಗಸಂದ್ರದಲ್ಲಿ ಆರಂಭ; 2ರಿಂದ 3 ಗಂಟೆ ಕಾಯೋದು ತಪ್ಪಿಲ್ಲ!

ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ, ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿದೆ. ಯಾವುದೋ ಒಂದು ವಿಷಯದಲ್ಲಿ ಮಾತ್ರ ಸಮಸ್ಯೆ ಆಗಿತ್ತು. ಇಂಟರ್ನಲ್ 40, ಥಿಯರಿ 60 ಸೇರಿ 100 ಅಂಕಕ್ಕೆ ಪರೀಕ್ಷೆ ನಡೆಯುತ್ತದೆ. ಸ್ಕೇಲ್ ಡೌನ್ ಮಾಡಿ 60 ಅಂಕಗಳಿಗೆ ತೆಗೆದುಕೊಳ್ಳಬೇಕು. ಪರೀಕ್ಷಾ ಫಲಿತಾಂಶ ಅಪ್ಲೋಡ್ ಮಾಡುವಾಗ ಎಡವಟ್ಟಾಗಿದೆ. ಲೋಪ ಬಂದ ತಕ್ಷಣ ಅಲರ್ಟ್ ಆಗಿ ಫಲಿತಾಂಶ ಕೊಟ್ಟಿದ್ದೇವೆ ಎಂದರು.

ಇದನ್ನೂ ಓದಿ: ಬರ್ಮಿಂಗ್​​ಹ್ಯಾಮ್​ನಲ್ಲಿ ಭಾರೀ ಸ್ಫೋಟ; ಒಬ್ಬರ ಸ್ಥಿತಿ ಗಂಭೀರ, 6ರಿಂದ 7 ಮನೆಗಳು ಧ್ವಂಸ

Published On - 12:06 pm, Mon, 27 June 22