ಅಚಾನಕ್ ಸುರಿದ ಗಾಳಿ, ಮಳೆಗೆ ಯಾದಗಿರಿ ನಗರಸಭೆಯ ಮೇಲ್ಚಾವಣಿ ಕುಸಿತ
ಗಿರಿನಾಡು ಯಾದಗಿರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆ ಸುರಿದಿದೆ. ಯಾದಗಿರಿ ನಗರ ಸೇರಿದಂತೆ, ಗ್ರಾಮೀಣ ಭಾಗದಲ್ಲಿ ಮಳೆಯಾದ ಪರಿಣಾಮ, ಬಿಸಿಲಿನ ಬೇಗೆಯಲ್ಲಿ ಬೇಯುತ್ತಿದ್ದ ಜನರು ತಂಪಿನ ಅನುಭವ ಪಡೆದಿದ್ದಾರೆ.
ಯಾದಗಿರಿ: ನಗರದಲ್ಲಿ ಅಚಾನಕ್ ಆಗಿ ಸುರಿದ ಗಾಳಿ, ಮಳೆಗೆ ಯಾದಗಿರಿ ನಗರಸಭೆಯ ಮೇಲ್ಚಾವಣಿ ಕುಸಿದಿದೆ. ಕಚೇರಿಯ ಸಭಾಂಗಣದ ಮೇಲ್ಚಾವಣಿ ಕುಸಿತದಿಂದ ಅಲ್ಲಿದ್ದ ಕುರ್ಚಿ ಹಾಗೂ ಟೇಬಲ್‌ಗಳು ಜಖಂ ಆಗಿವೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿವಿಲ್ಲ.
ಗಿರಿನಾಡು ಯಾದಗಿರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆ ಸುರಿದಿದೆ. ಯಾದಗಿರಿ ನಗರ ಸೇರಿದಂತೆ, ಗ್ರಾಮೀಣ ಭಾಗದಲ್ಲಿ ಮಳೆಯಾದ ಪರಿಣಾಮ, ಬಿಸಿಲಿನ ಬೇಗೆಯಲ್ಲಿ ಬೇಯುತ್ತಿದ್ದ ಜನರು ತಂಪಿನ ಅನುಭವ ಪಡೆದಿದ್ದಾರೆ. ಕಳೆದ ಒಂದು ತಿಂಗಳಿಂದ ಗರಿಷ್ಠ ತಾಪಮಾನಕ್ಕೆ ತಲುಪಿದ್ದ ಯಾದಗಿರಿ, ಮಳೆಯ ಆಗಮನದಿಂದ ಕೊಂಚ ತಣ್ಣಗಾಗಿದೆ.
ಫೆಬ್ರವರಿಯಲ್ಲಿ ದಾವಣಗೆರೆಯಲ್ಲಿ ಮಳೆಯಾಗಿತ್ತು.. ಜಿಲ್ಲೆಯಲ್ಲಿ ನಿನ್ನೆ ವಿಪರೀತವಾಗಿ ಸುರಿದ ಮಳೆಗೆ ಚೆನ್ನಗಿರಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಮನೆ ಕುಸಿದಿತ್ತು. ನಾಗರಾಜ್ ಭೋವಿ ಎಂಬುವವರಿಗೆ ಸೇರಿದ ಮನೆಯಾಗಿತ್ತು. ಅದೃಷ್ಟವಶಾತ್ ಮನೆಯ ಒಳಗೆ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದರು. ಭಾರಿ ಮಳೆಯಿಂದ ಮನೆ ಕುಸಿದ ಹಿನ್ನೆಲೆಯಲ್ಲಿ ಸರ್ಕಾರ ನೆರವು ನೀಡಬೇಕು. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.
ನಾಗರಾಜ್ ಭೋವಿಯವರದ್ದು ಕೆಂಪು ಹೆಂಚಿನ ಮನೆಯಾಗಿತ್ತು. ರಾತ್ರಿ ನಾಗರಾಜ್ ದಂಪತಿ ಹಾಗೂ ಮಕ್ಕಳು ಮಲಗಿದ್ದರು. ಈ ವೇಳೆ ಮಳೆಯ ರಭಸ ಜೋರಾಗಿತ್ತು. ಮಳೆ ಸಹಿತ ಗಾಳಿ ಜೋರಾಗಿ ಬೀಸುತ್ತಿದ್ದುದನ್ನು ಕಂಡ ನಾಗರಾಜ್ ಮನೆಯವರಿಗೆ ಹೊರ ಬರಲು ಹೇಳಿದ್ದಾರೆ. ಮನೆಯವರೆಲ್ಲ ಮನೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಮನೆ ಕುಸಿದು ಬಿದ್ದಿದೆ. ನಾಗರಾಜ್ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿತ್ತು.
ಇದನ್ನೂ ಓದಿ: ಕಪ್ಪು ಬಣ್ಣಕ್ಕೆ ತಿರುಗಿದ ಮೆಕ್ಕೆ ಜೋಳ; ಅಕಾಲಿಕ ಮಳೆಯಿಂದ ಹಾವೇರಿ ರೈತರು ಕಂಗಾಲು
ಇದನ್ನೂ ಓದಿ: ಹೋದ ವರ್ಷ ಸುರಿದ ಮಳೆಗೆ ತುಂಬಿ ತುಳುಕುತ್ತಿರುವ ಕೆರೆಗಳು, ಕಾರಂಜಾ ಜಲಾಶಯ: ಸಂತಸದಲ್ಲಿ ಬೀದರ್ ರೈತರು
Published On - 8:01 pm, Mon, 5 April 21