ಸಾಮಾನ್ಯರಂತೆ ಮಾರ್ಕೆಟ್ನಲ್ಲಿ ಹೂ, ಹಣ್ಣು ಖರೀದಿಸಿದ ಸುಧಾಮೂರ್ತಿ
ಬಾಗಲಕೋಟೆ: ಸರಳತೆಗೆ ಹೆಸರುವಾಸಿಯಾಗಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಸಾಮಾನ್ಯ ಮಹಿಳೆಯರಂತೆ ಮಾರುಕಟ್ಟೆಯಲ್ಲಿ ತರಕಾರಿ, ಹೂ, ಹಣ್ಣು ಖರೀದಿಸಿದ್ದಾರೆ. ತಡರಾತ್ರಿ ಜಮಖಂಡಿ ನಗರಕ್ಕೆ ಆಗಮಿಸಿದ್ದ ಸುಧಾಮೂರ್ತಿ, ಸಹೋದರ ಸಂಬಂಧಿ ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಸಾಮಾನ್ಯರಂತೆ ಸುಧಾಮೂರ್ತಿ ಅವರು ಎಪಿಎಂಸಿ ಮಾರುಕಟ್ಟೆಯಲ್ಲಿ ಹಣ್ಣು, ಹೂ, ತರಕಾರಿ ಖರೀದಿಸಿದ್ದಾರೆ. ಬಳಿಕ ತವರು ಮನೆಯ ಕುಲದೇವರು ಶೂರ್ಪಾಲಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ, ನೈವೇಧ್ಯ ಸೇವೆ ಸಮರ್ಪಣೆ ಮಾಡಿದ್ದಾರೆ.
ಬಾಗಲಕೋಟೆ: ಸರಳತೆಗೆ ಹೆಸರುವಾಸಿಯಾಗಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಸಾಮಾನ್ಯ ಮಹಿಳೆಯರಂತೆ ಮಾರುಕಟ್ಟೆಯಲ್ಲಿ ತರಕಾರಿ, ಹೂ, ಹಣ್ಣು ಖರೀದಿಸಿದ್ದಾರೆ. ತಡರಾತ್ರಿ ಜಮಖಂಡಿ ನಗರಕ್ಕೆ ಆಗಮಿಸಿದ್ದ ಸುಧಾಮೂರ್ತಿ, ಸಹೋದರ ಸಂಬಂಧಿ ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಇಂದು ಬೆಳಗ್ಗೆ ಸಾಮಾನ್ಯರಂತೆ ಸುಧಾಮೂರ್ತಿ ಅವರು ಎಪಿಎಂಸಿ ಮಾರುಕಟ್ಟೆಯಲ್ಲಿ ಹಣ್ಣು, ಹೂ, ತರಕಾರಿ ಖರೀದಿಸಿದ್ದಾರೆ. ಬಳಿಕ ತವರು ಮನೆಯ ಕುಲದೇವರು ಶೂರ್ಪಾಲಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ, ನೈವೇಧ್ಯ ಸೇವೆ ಸಮರ್ಪಣೆ ಮಾಡಿದ್ದಾರೆ.