ನೋಡ್ ನೋಡ್ತಿದ್ದಂತೆ ಕಬ್ಬಿನ ಲಾರಿ.. ಉರುಳೇ ಬಿಡ್ತು!
ಚಾಮರಾಜನಗರ: ಓವರ್ ಲೋಡ್ ಆಗಿದ್ದ ಕಬ್ಬಿನ ಲಾರಿ ಪಲ್ಟಿಯಾಗಿರುವ ಘಟನೆ ತಮಿಳುನಾಡಿನ ದಿಂಬಂ ಬಳಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಾಮರಾಜನಗರದಿಂದ ಕಬ್ಬು ತುಂಬಿಕೊಂಡು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ತಿರುವೊಂದರ ಬಳಿ ಲಾರಿ ಹೋಗಲು ಸಾಧ್ಯವಾಗದೇ ಪಲ್ಟಿಯಾಗಿದೆ. ಕಬ್ಬು ರಸ್ತೆಯಲ್ಲೆಲ್ಲಾ ಚಿಲ್ಲಾಪಿಲ್ಲಿಯಾಗಿದೆ. ಓವರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದರಿಂದ ಅನಾಹುತ ಸಂಭವಿಸಿದೆ. ಘಟನೆಯಿಂದಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚಾಮರಾಜನಗರ: ಓವರ್ ಲೋಡ್ ಆಗಿದ್ದ ಕಬ್ಬಿನ ಲಾರಿ ಪಲ್ಟಿಯಾಗಿರುವ ಘಟನೆ ತಮಿಳುನಾಡಿನ ದಿಂಬಂ ಬಳಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಾಮರಾಜನಗರದಿಂದ ಕಬ್ಬು ತುಂಬಿಕೊಂಡು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ತಿರುವೊಂದರ ಬಳಿ ಲಾರಿ ಹೋಗಲು ಸಾಧ್ಯವಾಗದೇ ಪಲ್ಟಿಯಾಗಿದೆ.
ಕಬ್ಬು ರಸ್ತೆಯಲ್ಲೆಲ್ಲಾ ಚಿಲ್ಲಾಪಿಲ್ಲಿಯಾಗಿದೆ. ಓವರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದರಿಂದ ಅನಾಹುತ ಸಂಭವಿಸಿದೆ. ಘಟನೆಯಿಂದಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
Published On - 2:54 pm, Tue, 30 June 20