Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮವಾರ ಬೆಳಗಿನವರೆಗೂ 33 ಗಂಟೆ ಕರುನಾಡು ಫುಲ್ ಸ್ತಬ್ಧ, ಇವತ್ತಾದ್ರೂ ಫಾಲೋ ಆಗುತ್ತ ರೂಲ್ಸ್

ಬೆಂಗಳೂರು: ಸೋಂಕಿನ ಅಟ್ಟಹಾಸಕ್ಕೆ ಬೆದರಿ ಬೆಂಗಳೂರಿಗೆ ಬೀಗ ಹಾಕಲಾಗಿದೆ. ರಾಜ್ಯದ ಹಲವು ಜಿಲ್ಲೆಗಳು ಕೂಡಾ ಬಂದ್‌ ಆಗಿವೆ. ಆದ್ರೆ ಇಂದು ಇಡೀ ರಾಜ್ಯವೇ ಲಾಕ್‌ಡೌನ್‌ ಆಗಲಿದೆ. ಸೋಮವಾರ ಬೆಳಗಿನ ವರೆಗೂ ಕರುನಾಡು ಸ್ತಬ್ಧವಾಗಲಿದೆ. ಲಾಕ್​ಡೌನ್.. ಕಂಪ್ಲೀಟ್ ಲಾಕ್​ಡೌನ್.. ಕರುನಾಡಿಗೆ ಸಂಡೇ ಲಾಕ್​​​ಡೌನ್ ಬೀಗ ಬೀಲುತ್ತಿದೆ. ಕಂಟ್ರೋಲ್‌ ತಪ್ಪಿರೋ ಕೊರೊನಾವನ್ನ ಕಟ್ಟಿಹಾಕೋಕೆ ಬೆಂಗಳೂರಿಗೆ ಬೀಗ ಬಿದ್ದಿದೆ. ಸೋಂಕಿನ ಸುನಾಮಿ ತಡೆಯಲು ಮಂಗಳೂರು ಸ್ತಬ್ಧವಾಗಿದೆ. ಮಾರಿಯನ್ನ ಮರ್ದನ ಮಾಡ್ಬೇಕು ಅಂತಾ ಧಾರವಾಡ, ಯಾದಗಿರಿ, ಕಲಬುರಿ ಜಿಲ್ಲೆಗಳನ್ನೂ ಲಾಕ್​ ಮಾಡಲಾಗಿದೆ. ರಾಜ್ಯದಲ್ಲಿ […]

ಸೋಮವಾರ ಬೆಳಗಿನವರೆಗೂ 33 ಗಂಟೆ ಕರುನಾಡು ಫುಲ್ ಸ್ತಬ್ಧ, ಇವತ್ತಾದ್ರೂ ಫಾಲೋ ಆಗುತ್ತ ರೂಲ್ಸ್
Karnataka Lockdown
Follow us
ಆಯೇಷಾ ಬಾನು
|

Updated on: Jul 19, 2020 | 7:36 AM

ಬೆಂಗಳೂರು: ಸೋಂಕಿನ ಅಟ್ಟಹಾಸಕ್ಕೆ ಬೆದರಿ ಬೆಂಗಳೂರಿಗೆ ಬೀಗ ಹಾಕಲಾಗಿದೆ. ರಾಜ್ಯದ ಹಲವು ಜಿಲ್ಲೆಗಳು ಕೂಡಾ ಬಂದ್‌ ಆಗಿವೆ. ಆದ್ರೆ ಇಂದು ಇಡೀ ರಾಜ್ಯವೇ ಲಾಕ್‌ಡೌನ್‌ ಆಗಲಿದೆ. ಸೋಮವಾರ ಬೆಳಗಿನ ವರೆಗೂ ಕರುನಾಡು ಸ್ತಬ್ಧವಾಗಲಿದೆ.

ಲಾಕ್​ಡೌನ್.. ಕಂಪ್ಲೀಟ್ ಲಾಕ್​ಡೌನ್.. ಕರುನಾಡಿಗೆ ಸಂಡೇ ಲಾಕ್​​​ಡೌನ್ ಬೀಗ ಬೀಲುತ್ತಿದೆ. ಕಂಟ್ರೋಲ್‌ ತಪ್ಪಿರೋ ಕೊರೊನಾವನ್ನ ಕಟ್ಟಿಹಾಕೋಕೆ ಬೆಂಗಳೂರಿಗೆ ಬೀಗ ಬಿದ್ದಿದೆ. ಸೋಂಕಿನ ಸುನಾಮಿ ತಡೆಯಲು ಮಂಗಳೂರು ಸ್ತಬ್ಧವಾಗಿದೆ. ಮಾರಿಯನ್ನ ಮರ್ದನ ಮಾಡ್ಬೇಕು ಅಂತಾ ಧಾರವಾಡ, ಯಾದಗಿರಿ, ಕಲಬುರಿ ಜಿಲ್ಲೆಗಳನ್ನೂ ಲಾಕ್​ ಮಾಡಲಾಗಿದೆ. ರಾಜ್ಯದಲ್ಲಿ ನಿನ್ನೆ ರಾತ್ರಿ 8 ಗಂಟೆಯಿಂದಲೇ ಸಂಡೇ ಕರ್ಫ್ಯೂ ಜಾರಿಯಾಗಿರೋದ್ರಿಂದ 33 ಗಂಟೆ ಎಲ್ಲವೂ ಬಂದ್ ಆಗಲಿದೆ.. ಕರುನಾಡಿಗೆ ಕರುನಾಡೇ ಸ್ತಬ್ಧವಾಗಲಿದೆ.

ಕರುನಾಡಲ್ಲಿ ನಿನ್ನೆ ರಾತ್ರಿಯಿಂದಲೇ ಸಂಡೇ ಲಾಕ್​ಡೌನ್ ಸ್ಟಾರ್ಟ್..! ಯೆಸ್.. ಕರುನಾಡಲ್ಲಿ ಕೊರೊನಾ ಕೈ ಮೀರಿ ಹೋಗಿದೆ. ಮಾರಿಯ ಮಾಯಾಜಾಲ ಅರಿಯದಾಗದೆ ಎಲ್ರೂ ಕಂಗೆಟ್ಟು ಕೂತಿದ್ದಾರೆ. ಇದರ ನಡುವೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಧಾರವಾಡ, ಕಲಬುರಗಿ, ಯಾದಗಿರಿ, ಬೀದರ್‌ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಒಂದು ವಾರದ ಲಾಕ್‌ಡೌನ್‌ ಘೋಷಣೆ ಮಾಡಿದೆ.

ಶಿವಮೊಗ್ಗದಲ್ಲಿ ಹಾಫ್‌ ಡೇ ಬಂದ್‌ ಇದ್ರೆ, ಬೆಳಗಾವಿ, ರಾಯಚೂರು ಸೇರಿದಂತೆ ಕೆಲ ಜಿಲ್ಲೆಗಳ ಕೆಲವು ಪಟ್ಟಣಗಳು ಮಾತ್ರ ಲಾಕ್‌ ಆಗಿವೆ. ಇದರ ಜೊತೆ ಜೊತೆಗೆ ಇಂದು ಇಡೀ ರಾಜ್ಯವೇ ಬಂದ್‌ ಆಗಲಿದೆ. ಅಂಗಡಿ ಮುಂಟ್ಟು ಕ್ಲೋಸ್ ಆಗಲಿದೆ.. ಗಲ್ಲಿ ಗಲ್ಲಿಯೂ ಸ್ತಬ್ಧವಾಗಲಿದೆ. ವಾಹನಗಳ ಓಡಾಟಕ್ಕೆ ಬ್ರೇಕ್ ಬೀಳಲಿದೆ. ಜನ ಸಂಚಾರಕ್ಕೆ ಫುಲ್ ಸ್ಟಾಪ್ ಇಡಲಾಗಿದೆ. ಈ ಮೂಲಕ ಕರುನಾಡಲ್ಲಿ ಸಂಡೇ ಲಾಕ್​​ಡೌನ್​​​​ನಿಂದ ಕಂಪ್ಲೀಟ್ ಬಂದ್‌ ಆಗಲಿದೆ.

ಕೊರೊನಾ ವಿರುದ್ಧ ಸಮರ ಸಾರಿರೋ ಕರುನಾಡು ಇವತ್ತು ಕಂಪ್ಲೀಟ್ ಬಂದ್​ ಆದ್ರೆ ಹಲವು ಸೇವೆಗಳಿಗೂ ಬ್ರೇಕ್ ಬೀಳಲಿದೆ. ಹಾಗಿದ್ರೆ, ಇವತ್ತು ರಾಜ್ಯದಲ್ಲೇ ಏನೇನ್​ ಇರುತ್ತೆ.. ಏನೇನ್ ಸೇವೆ ಇರಲ್ಲ ಅನ್ನೋದನ್ನೇ ನೋಡೋದಾದ್ರೆ. ರಾಜ್ಯದಲ್ಲಿ ಏನೇನ್​ ಇರಲ್ಲ..? ಇನ್ನು ಸಂಡೇ ಲಾಕ್​ಡೌನ್​ನಿಂದ ಸಂಚಾರ ಕಂಪ್ಲೀಟ್ ಬಂದ್ ಆಗ್ತಿದ್ದು, ಕೆಎಸ್​ಆರ್​ಟಿಸಿ, ಬಿಎಂಟಿಸಿ, ಆಟೋ, ಟ್ಯಾಕ್ಸಿ, ಕ್ಯಾಬ್, ಖಾಸಗಿ ಬಸ್​ಗಳು ರಸ್ತೆಗಿಳಿಯಲ್ಲ. ಹಾಗೇ ಅಂಗಡಿಗಳು, ಬೀದಿ ಬದಿ ವ್ಯಾಪಾರ ಸ್ಥಗಿತವಾಗಲಿದೆ. ಲಾಡ್ಜ್, ಬಾರ್, ರೆಸ್ಟೋರೆಂಟ್​​​ಗಳು ಸೇರಿದಂತೆ ಮದ್ಯದ ಅಂಗಡಿಗಳು ಸಂಪೂರ್ಣವಾಗಿ ಕ್ಲೋಸ್ ಆಗಿರಲಿವೆ. ಹಾಗೇ ಸಲೂನ್, ಬ್ಯೂಟಿ ಪಾರ್ಲರ್ ಕೂಡ ತೆರೆಯಲ್ಲ. ಇತ್ತ ದೇವಸ್ಥಾನ, ಮಸೀದಿ, ಚರ್ಚ್​​ಗಳು ಬಾಗಿಲು ಓಪನ್ ಇರಲ್ಲ. ಇದ್ರ ಜೊತೆಗೆ ಜಾತ್ರೆ, ಸಭೆ, ಸಮಾರಂಭಗಳನ್ನ ನಡೆಸದಂತೆ ನಿರ್ಬಂಧ ಹೇರಲಾಗಿದೆ.

ಹೀಗೆ ಬಹುತೇಕ ಚಟುವಟಿಕೆಗಳು ಇಂದು ಇರೋದಿಲ್ಲ. ಆದ್ರೆ ಕರ್ಫ್ಯೂ ಹಾಗೂ ಲಾಕ್​ಡೌನ್​ನಲ್ಲಿ ಕೆಲವೊಂದು ಅತ್ಯಗತ್ಯ ವಲಯಗಳಿಗೆ ಅನುಮತಿ ನೀಡಲಾಗಿದೆ. ಯಾವೆಲ್ಲ ಸೇವೆ ಇರುತ್ತೆ ಅನ್ನೋದನ್ನ ನೋಡೋದಾದ್ರೆ.

ರಾಜ್ಯದಲ್ಲಿ ಏನೇನ್ ಇರುತ್ತೆ..? ಇನ್ನು ಜನ್ರ ಅಗತ್ಯತೆಗಳಲ್ಲಿ ಒಂದಾದ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಌಂಬುಲೆನ್ಸ್ ಸೇವೆಯಲ್ಲಿ ಯಾವುದೇ ರೀತಿ ವ್ಯತ್ಯಯ ಆಗೋದಿಲ್ಲ.. ಹಾಗೇ ಹಾಲು, ಹಣ್ಣು, ತರಕಾರಿ, ಮಾಂಸ ಮಾರಾಟ ಎಂದಿನಂತೆ ಇರಲಿದೆ. ದಿನಸಿ ಅಂಗಡಿ, ಪ್ರಾವಿಜನ್ ಸ್ಟೋರ್ಸ್​​​​​ ಓಪನ್ ಇರಲಿದೆ. ಇನ್ನು ಹೋಟೆಲ್​ಗಳಲ್ಲಿ ಪಾರ್ಸಲ್​ಗೆ ಮಾತ್ರ ಅವಕಾಶ ಇರುತ್ತೆ.. ಇದರ ಜೊತೆಗೆ ವೈದ್ಯಕೀಯ ಸಿಬ್ಬಂದಿ, ಮಾಧ್ಯಮದವರು ಸಂಡೇ ಕರ್ಫ್ಯೂ ವೇಳೆ ಸಂಚಾರಿಸಲು ಅನುಮತಿ ನೀಡಲಾಗಿದೆ.

ಒಟ್ನಲ್ಲಿ ಕೊರೊನಾ ದಿನ ದಿನಕ್ಕೂ ಸ್ಫೋಟವಾಗ್ತಿದ್ದು, ಸರ್ಕಾರ ಭಾನುವಾರದ ಲಾಕ್​ಡೌನ್​ ಅಸ್ತ್ರ ಹೂಡಿದೆ. ನಿನ್ನೆ ರಾತ್ರಿಯಿಂದಲೇ ಸಂಡೇ ಲಾಕ್‌ಡೌನ್ ಜಾರಿಯಾಗಿದ್ದು, ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಯಾರೂ ಕೂಡ ಹೊರಗೆ ಹೆಜ್ಜೆ ಊರಂಗಿಲ್ಲ. ಬೇಕಾಬಿಟ್ಟಿ ಓಡಾಡುವಂತಿಲ್ಲ. ಸುಖಾಸುಮ್ಮನೆ ಹೊರಗೆ ಕಾಲಿಟ್ರೆ ಕೇಸ್ ಬೀಳೋದ್ರ ಜೊತೆ ಗಾಡಿಯೂ ಸೀಜ್ ಆಗಲಿದೆ. ಸೋಮವಾರ ಬೆಳಗ್ಗೆ 5 ಗಂಟೆಗೆ ಲಾಕ್‌ಡೌನ್‌ ಅಂತ್ಯವಾದ್ರೂ ಹಲವು ಜಿಲ್ಲೆಗಳಲ್ಲಿ ಮಾತ್ರ ಜುಲೈ 23 ರವರೆಗೂ ಲಾಕ್‌ ಓಪನ್‌ ಆಗಲ್ಲ.