ಜನ ಮದ್ವೆ ಆಗ್ತಿದ್ದಾರೆ ರೈಲುಗಳು ತುಂಬಿ ತುಳುಕ್ತಿವೆ: ಸಚಿವ ಸುರೇಶ್ ‘ಅರ್ಥ’ರಹಿತ ವ್ಯಾಖ್ಯಾನ

|

Updated on: Nov 15, 2019 | 6:48 PM

ಬೆಂಗಳೂರು: ದೇಶದಲ್ಲಿ ಜನರು ಮದುವೆ ಆಗುತ್ತಿದ್ದಾರೆ, ರೈಲುಗಳು ಸಹ ಜನರಿಂದ ತುಂಬಿ ತುಳುಕುತ್ತಿವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅರ್ಥ ರಹಿತ ವ್ಯಾಖ್ಯಾನ ನೀಡಿದ್ದಾರೆ. ಸಚಿವರಿಗೆ ಆರ್ಥಿಕ ಕುಸಿತದ ಬಗ್ಗೆ ಪ್ರಶ್ನಿಸಿದಾಗ ಈ ರೀತಿಯ ಉತ್ತರ ನೀಡಿದ್ದಾರೆ. ನಮ್ಮ ದೇಶದಲ್ಲಿ ಜನರು ಮದುವೆ ಆಗುತ್ತಿದ್ದಾರೆ, ರೈಲುಗಳು ತುಂಬಿ ತುಳುಕುತ್ತಿವೆ ಹೀಗಾಗಿ ದೇಶದ ಆರ್ಥಿಕತೆ ಸರಿಯಾದ ದಿಕ್ಕಿನಲ್ಲಿ ಸಾಗ್ತಿದೆ ಎಂದು ಸುರೇಶ್ ಅಂಗಡಿ ವಿಚಿತ್ರ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಹಿಂದೆ ರವಿಶಂಕರ್ ಪ್ರಸಾದ್ […]

ಜನ ಮದ್ವೆ ಆಗ್ತಿದ್ದಾರೆ ರೈಲುಗಳು ತುಂಬಿ ತುಳುಕ್ತಿವೆ: ಸಚಿವ ಸುರೇಶ್ ಅರ್ಥರಹಿತ ವ್ಯಾಖ್ಯಾನ
Follow us on

ಬೆಂಗಳೂರು: ದೇಶದಲ್ಲಿ ಜನರು ಮದುವೆ ಆಗುತ್ತಿದ್ದಾರೆ, ರೈಲುಗಳು ಸಹ ಜನರಿಂದ ತುಂಬಿ ತುಳುಕುತ್ತಿವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅರ್ಥ ರಹಿತ ವ್ಯಾಖ್ಯಾನ ನೀಡಿದ್ದಾರೆ.

ಸಚಿವರಿಗೆ ಆರ್ಥಿಕ ಕುಸಿತದ ಬಗ್ಗೆ ಪ್ರಶ್ನಿಸಿದಾಗ ಈ ರೀತಿಯ ಉತ್ತರ ನೀಡಿದ್ದಾರೆ. ನಮ್ಮ ದೇಶದಲ್ಲಿ ಜನರು ಮದುವೆ ಆಗುತ್ತಿದ್ದಾರೆ, ರೈಲುಗಳು ತುಂಬಿ ತುಳುಕುತ್ತಿವೆ ಹೀಗಾಗಿ ದೇಶದ ಆರ್ಥಿಕತೆ ಸರಿಯಾದ ದಿಕ್ಕಿನಲ್ಲಿ ಸಾಗ್ತಿದೆ ಎಂದು ಸುರೇಶ್ ಅಂಗಡಿ ವಿಚಿತ್ರ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಹಿಂದೆ ರವಿಶಂಕರ್ ಪ್ರಸಾದ್ ಸಹ ಬಾಲಿವುಡ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಹಣ ಗಳಿಸುತ್ತಿವೆ ಹೀಗಾಗಿ ಆರ್ಥಿಕತೆ ಸ್ಥಿತಿ ಉತ್ತಮವಾಗಿದೆ ಎಂದು ಹೇಳಿದ್ದರು.