ಪಾಕ್​ ಪರ ಘೋಷಣೆ: ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದ ಕಾಂಗ್ರೆಸ್​ಗೆ ಬಿಜೆಪಿ ಫುಲ್ ಕ್ಲಾಸ್

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ. ಅಂದರೆ, ಪಾಕ್ ಪರ ಘೋಷಣೆ ಕೂಗಿರುವುದು ಎಫ್​ಎಸ್​ಎಲ್ ವರದಿಯಲ್ಲಿ ದೃಢಪಟ್ಟಂತಾಗಿದೆ. ಆದರೆ, ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ಮಾಧ್ಯಮದ ಮೇಲೆ ಕಾಂಗ್ರೆಸ್ ನಾಯಕರು ಗೂಬೆ ಕೂರಿಸುವ ಪ್ರಯತ್ನ ಮಾಡಿತ್ತು. ಇದೀಗ ಮೂವರ ಬಂಧನವಾಗುತ್ತಿದ್ದಂತೆ ವಿಪಕ್ಷ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬೀಳುತ್ತಿದ್ದಾರೆ.

ಪಾಕ್​ ಪರ ಘೋಷಣೆ: ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದ ಕಾಂಗ್ರೆಸ್​ಗೆ ಬಿಜೆಪಿ ಫುಲ್ ಕ್ಲಾಸ್
ಪಾಕ್​ ಪರ ಘೋಷಣೆ: ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದ ಕಾಂಗ್ರೆಸ್​ಗೆ ಬಿಜೆಪಿ ಫುಲ್ ಕ್ಲಾಸ್
Follow us
| Updated By: Rakesh Nayak Manchi

Updated on: Mar 04, 2024 | 8:11 PM

ಬೆಂಗಳೂರು, ಮಾ.4: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ (Pro Pak Slogan) ಕೂಗಿದ ಪ್ರಕರಣ ಇಡೀ ದೇಶದಲ್ಲೇ ಸಂಚಲನ ಉಂಟುಮಾಡಿತ್ತು. ಆದರೆ ಕಾಂಗ್ರೆಸ್ (Congress) ಸರ್ಕಾರ ಮಾತ್ರ “ಯಾರು ಕೂಡ ಪಾಕ್ ಪರ ಘೋಷಣೆ ಕೂಗಿಲ್ಲ, ಬಿಜೆಪಿಯ ಆರೋಪ ಸುಳ್ಳು, ಖಾಸಗಿ ಎಫ್​ಎಸ್​ಎಲ್ ವರದಿ ಒಪ್ಪಲ್ಲ” ಎಂದಿದ್ದರು. ಅಷ್ಟೇ ಅಲ್ಲದೆ, ದೇಶದ್ರೋಹದ ಘೋಷಣೆ ಕೂಗಿಲ್ಲ ಎಂದು ಸರ್ಕಾರವು ಫ್ಯಾಕ್ಟ್ ಚೆಕ್​ ಮೂಲಕ ಸ್ಪಷ್ಟನೆ ಕೊಟ್ಟಿತ್ತು. ಖಾಸಗಿ ಎಫ್​ಎಸ್​ಎಲ್ ವರದಿ ವಿರುದ್ಧ ದೂರು ಕೂಡ ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ, ವರದಿ ಮಾಡಿದ ಮಾಧ್ಯಮದವರ ವಿರುದ್ಧವೇ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸೇರಿದಂತೆ ಕಾಂಗ್ರೆಸ್ ನಾಯಕರು ಗೂಬೆ ಕೂರಿಸಲು ಯತ್ನಿಸಿದ್ದರು. ಆದರೆ, ಎಫ್​ಎಸ್​ಎಲ್ (FSL) ವರದಿ ಪ್ರಕಾರ ಪಾಕ್ ಪರ ಘೋಷಣೆ ಕೂಗಿದ ಮೂವರನ್ನು ಇಂದು ಬಂಧಿಸಲಾಗಿದೆ. ಈಗ ಏನು ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ (BJP) ನಾಯಕರು ಮುಗಿಬಿದ್ದಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ, ಯಾರೂ ಕೂಗೇ ಇಲ್ಲ ಎನ್ನುತ್ತಿದ್ದವರು ಇವಾಗ ಏನ್ ಹೇಳುತ್ತಾರೆ ಎಂದು ಪ್ರಶ್ನಿಸಿದರು. ಕೇವಲ ಮೂವರಲ್ಲ, ಇನ್ನೂ 10 ರಿಂದ 12 ಜನರು ಇದ್ದಾರೆ. ಪಾಕ್​​ ಪರ ಘೋಷಣೆ ಕೂಗಿದ ಇವರೆಲ್ಲಾ ಭಯೋತ್ಪಾದಕರು ಎಂದು ಆರೋಪಿಸಿದರು.

ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಾಸಿರ್ ರಾಜೀನಾಮೆ ಕೊಡಬೇಕು‌. ಶಕ್ತಿಸೌಧದಲ್ಲಿ ಇಂತಹ ಘಟನೆ ಈ ಹಿಂದೆ ಎಂದೂ ನಡೆದಿರಲಿಲ್ಲ. ಕಾಂಗ್ರೆಸ್​​ನವರು ವಿಧಾನಸೌಧದಲ್ಲಿ ಕುಳಿತುಕೊಳ್ಳಲು ಯೋಗ್ಯರಲ್ಲ. ಕೂಡಲೇ ಕಾಂಗ್ರೆಸ್​ ಸರ್ಕಾರವನ್ನು ವಜಾಗೊಳಿಸಬೇಕು. ಈ ಸಂಬಂಧ ನಾವು ಈಗಾಗಲೇ ರಾಜ್ಯಪಾಲ ಗೆಹ್ಲೋಟ್​ ಅವರನ್ನು ಭೇಟಿಯಾಗಿದ್ದೇವೆ ಎಂದರು.

ಇದನ್ನೂ ಓದಿ: ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲವೆಂದರೆ FSL ವರದಿ ಬಹಿರಂಗ ಮಾಡಲು ಹಿಂಜರಿಕೆ ಯಾಕೆ: ಆರ್ ಅಶೋಕ

ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ. ನಾಸೀರ್ ಅವರು 25 ಬೆಂಬಲಿಗರನ್ನ ಕರೆದುಕೊಂಡು ಹೋಗಿದ್ದರು. ಅಲ್ಪಾಸಂಖ್ಯಾತರ ಓಲೈಕೆ ಎಷ್ಟಿದೆ ಎಂದು ಇದರಲ್ಲೆ ಗೊತ್ತಾಗುತ್ತದೆ. ಖಾಸಗಿ ಎಫ್​ಎಸ್​ಎಲ್ ಸುಳ್ಳು ಅಂತಾದರೆ ಮೂವರನ್ನು ಯಾಕೆ ಬಂಧಿಸಿದರು? ಪ್ರಿಯಾಂಕ್ ಖರ್ಗೆವರಿಗೆ ತಾಕತ್ತು, ಧಮ್ ಇದ್ದರೆ ಖಾಸಗಿ ರಿಪೋರ್ಟ್‌ ಕೊಟ್ಟವರ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದರು.

ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕವೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕದಿ ಅಶೋಕ, FSL ವರದಿ ಬರುವ ಮುನ್ನವೇ ಮಾಧ್ಯಮಗಳ ಮೇಲೆ ಪಕ್ಷಪಾತ, ವಿಡಿಯೋ ತಿರುಚಿರುವ ಆರೋಪ ಹೊರಿಸಿದರಲ್ಲ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ದೇಶ ವಿಭಜಕರ ಭಜನೆ ಮಾಡುವ ನಿಮಗೆ ಸಚಿವರಾಗಿ, ಶಾಸಕರಾಗಿ ಮುಂದುವರೆಯುವ ಯಾವ ಅರ್ಹತೆ, ನೈತಿಕತೆ, ಯೋಗ್ಯತೆ ಉಳಿದಿದೆ? ದೇಶದ ಸಾರ್ವಭೌಮತೆಯ ಬಗ್ಗೆ ನಿಷ್ಠೆ ಹೊಂದಿರುತ್ತೇನೆ, ರಕ್ಷಣೆ ಮಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ದೇಶದ್ರೋಹಿಗಳ ಪರ ವಹಿಸಿಕೊಳ್ಳುವ ತಾವು ಸಂವಿಧಾನ ದ್ರೋಹಿ, ದೇಶದ್ರೋಹಿ ಅಲ್ಲದೆ ಮತ್ತೇನು? ಎಂದು ಪ್ರಶ್ನಿಸಿದರು.

ಆರ್ ಅಶೋಕ ಟ್ವೀಟ್

FSL ವರದಿ ಬರುವ ಮುನ್ನವೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿಯೇ ಇಲ್ಲ ಅಂತ ನಿಮ್ಮ ಬ್ರದರ್ಸ್ ಪರ ತೀರ್ಪು ಕೊಟ್ಟುಬಿಟ್ಟರಲ್ಲ ಡಿಸಿಎಂ ಡಿಕೆ ಶಿವಕುಮಾರ್ ಅವರೇ, ದೇಶದ್ರೋಹಿಗಳನ್ನು ರಕ್ಷಿಸಲು ಹೆತ್ತ ತಾಯಿಯಂತಹ ಭಾರತ ಮಾತೆಗೇ ದ್ರೋಹ ಬಗೆಯುವುದು ಮಹಾ ಪಾಪವಲ್ಲವೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: FSL ವರದಿ ಬಂದಿಲ್ಲ…ಬಂದಿಲ್ಲ ಎನ್ನುವ ಮಧ್ಯೆ ಮೂವರು ಅರೆಸ್ಟ್: ಅನುಮಾನಗಳಿಗೆ ಎಡೆಮಾಡಿಕೊಟ್ಟ ಸರ್ಕಾರದ ನಡೆ!

ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯ ಸರ್ಕಾರಕ್ಕೆ ಈಗಲಾದರು ಬುದ್ಧಿ ಬಂದು ಮೂರು ಜನರನ್ನ ಬಂಧಿಸಿದ್ದಾರೆ. ದೇಶದ್ರೋಹಿಗಳನ್ನು ವಾರದ ನಂತರ ಬಂಧನ ಮಾಡಿದ್ದಾರೆ. ಬಿಜೆಪಿಯ ನಿರಂತರ ಹೋರಾಟದಿಂದ ಬಂಧನ ಮಾಡಲಾಗಿದೆ. ಸದನದ ಹೊರಗೆ, ಒಳಗೆ‌ ಬಿಜೆಪಿ ಹೋರಾಟಕ್ಕೆ ಮಣಿದು ಬಂಧನ ಮಾಡಿದ್ದಾರೆ ಎಂದರು.

ಬಂಧಿತ ಮೂವರ ಹಿನ್ನೆಲೆ ಏನು, ಪಾಕ್ ಪರ ಘೋಷಣೆ ಕೂಗಲು ಪ್ರಚೋದನೆ ಕೊಟ್ಟಿದ್ದು ಯಾರು ಜನರ ಮುಂದೆ ತಿಳಿಸಬೇಕು ಎಂದು ರಾಜ್ಯ ಸರ್ಕಾರವನ್ನ ನಾನು ಒತ್ತಾಯ ಮಾಡುತ್ತೇನೆ. ಎಫ್​ಎಸ್​ಎಲ್ ವರದಿ ಬಂದರೂ ಬಹಿರಂಗ ಪಡಿಸಿಲ್ಲ. ಖಾಸಗಿ ವರದಿ ಕಳೆದ ಮೂರು ದಿನಗಳಿಂದ ಓಡಾಡುತ್ತಿದೆ. ನಾಮಕೆವಾಸ್ತೆ ಬಂಧನ ಮಾಡದೇ ಕ್ರಮ ಕೈಗೊಳ್ಳಬೇಕು ಎಂದರು.

ಅಮಾಯಕರು ಎಂದು ಸಚಿವರು, ಶಾಸಕರು ಒತ್ತಡ ತರಬಹುದು. ಆದರೆ ಮುಖ್ಯಮಂತ್ರಿ ದಿಟ್ಟ ಕ್ರಮ ವಹಿಸಬೇಕು. ಸರ್ಕಾರದ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಪಸಂಖ್ಯಾತರ ತುಷ್ಟಿಕರಣ ನೀತಿಯಿಂದ ಸರ್ಕಾರ ಹೊರ ಬರಬೇಕು. ದೇಶದ್ರೋಹಿಗಳಿಗೆ ಕರ್ನಾಟಕದಲ್ಲಿ ಉತ್ತಮ ವಾತಾವರಣ ಇದೆ. ಸಿಎಂ ಮೇಲೆ ಯಾವುದೇ ಒತ್ತಡ ತರಬಾರದು ಎಂದು ಕಾಂಗ್ರೆಸ್ ಸಚಿವರು, ಶಾಸಕರಿಗೆ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದರು.

ದೇಶದ್ರೋಹಿಗಳ ಪರ ನಿಂತ ಸಚಿವರು ದೇಶದ್ರೋಹಿಗಳು

ದೇಶದ್ರೋಹಿಗಳ ಪರ ಹೇಳಿಕೆ ಕೊಟ್ಟ ಸಚಿವರಿಗೆ ದೇಶದ್ರೋಹಿಗಳು ಎಂದ ವಿಜಯೇಂದ್ರ, ಸರ್ಕಾರದಲ್ಲಿದ್ದುಕೊಂಡು ಹೇಳಿಕೆ ಕೊಡುವರು ಸಹ ದೇಶ ದ್ರೋಹಿಗಳು. ಕೆಜೆ ಹಳ್ಳಿ, ಡಿಜೆ ಹಳ್ಳಿ ಕೇಸ್ ವಾಪಸ್ ತೆಗೆದುಕೊಳ್ಳಲು ಪ್ಲ್ಯಾನ್ ಮಾಡಲಾಗಿದೆ. ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದರು.

ಶಿವಮೊಗ್ಗ ದಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ನಾಸಿರ್ ಹುಸೇನ್ ಪತ್ರಕರ್ತ ಮೇಲೆ ಹರಿಹಾಯ್ದಿದ್ದರು. ಅವರು ಘೋಷಣೆ ಕೂಗಿದವರ ಮೇಲೆ ಕ್ರಮಕ್ಕೆ ಮುಂದಾಗಲಿಲ್ಲ. ಎಫ್​ಎಸ್​ಎಲ್ ವರದಿ ಬಳಿಕ ಕ್ರಮಕೈಗೊಳ್ಳುವ ಮುಖ್ಯಮಂತ್ರಿ ಹೇಳಿಕೆ ಸ್ವಾಗತ. ಆದರೆ, ಡಿಕೆ ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರದೋಹಿಗಳಿಗೆ ಕುಮ್ಮಕ್ಕು ನೀಡಿದ್ದಾರೆ. ಹೇಸಿಗೆ ಪಡುವ ರಾಜಕೀಯ ಕಾಂಗ್ರೆಸ್ ಮಾಡಿದೆ ಎಂದರು.

ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೇಸ್: ಕೊನೆಗೂ ಮೂವರು ಅರೆಸ್ಟ್

ರಾಷ್ಟ್ರ ದ್ರೋಹಿಗಳು ಘೋಷಣೆ ಕೂಗಿರುವುದು ಸಾಭೀತಾಗಿದೆ. ಘೋಷಣೆ ಕೂಗಿದವರ ಪರ ನಿಂತ ಮೂವರು ಸಚಿವರದ್ದು ಕೂಡಾ ರಾಷ್ಟ್ರದ್ರೋಹಿ ನಡೆಯಾಗಿದೆ. ನಾಸೀರ್ ಹುಸೇನ್ ರಾಜ್ಯಸಭಾ ಸದಸ್ಯರಾಗಲು ಅಯೋಗ್ಯರು. ಮೂವರ ಸಚಿವರು ಪತ್ರಿಕಾ ಮತ್ತು ಟಿವಿ ಮಾಧ್ಯಮಗಳ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಗುಲಾಮರಿಗೆ ನಾಚಿಕೆಯಾಗಬೇಕು ಎಂದ ಯತ್ನಾಳ್

ಪಾಕಿಸ್ತಾನದ ಪರ ಘೋಷಣೆಯಲ್ಲವೆಂದ ಗುಲಾಮರಿಗೆ ನಾಚಿಕೆಯಾಗಬೇಕು. ಪೊಲೀಸ್ ಪ್ರಕಟಣೆಯ ಪ್ರಕಾರ “FSL ವರದಿಯ ಮೇರೆಗೆ ಮೂವರನ್ನು ಬಂಧಿಸಲಾಗಿದೆ” ಎಂದು ತಿಳಿಸಲಾಗಿದೆ. ರಾಷ್ಟ್ರದ ಹಿತಕ್ಕಾಗಿ ಸುದ್ದಿಯನ್ನು ಬಿತ್ತರಿಸಿದ ಮಾಧ್ಯಮಗಳಿಗೆ ಧನ್ಯವಾದಗಳು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್

ಪ್ರಿಯಾಂಕ್ ಖರ್ಗೆಗೆ ಕ್ಲೀನ್ ಚಿಟ್ ಕೊಡಲು ಸಾಧ್ಯವಾಗಿಲ್ಲ

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಸಿಟಿ ರವಿ, ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಅವರೇ ತನಿಖಾಧಿಕಾರಿಯಂತೆ ಹೇಳಿಕೆ ಕೊಟ್ಟಿದ್ದರು. ಇಂದು ಖಾಸಗಿ ಎಫ್​ಎಎಸ್​ಎಲ್ ವರದಿ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಕ್ಲೀನ್ ಚಿಟ್ ಕೊಡಲು ಸಾಧ್ಯವಾಗಲಿಲ್ಲ ಅಂತಾ ಅನ್ನಿಸುತ್ತದೆ. ಸಮಗ್ರ ತನಿಖೆಗೆ ಪೊಲೀಸರನ್ನು ಒತ್ತಾಯಿಸುತ್ತೇನೆ. ಕಾಂಗ್ರೆಸ್ ಗೆಲುವನ್ನು ಪಾಕಿಸ್ತಾನ ದ ಜೊತೆ ಯಾಕೆ ಸಮೀಕರಿಸಿದರು? ಇದರ ಹಿಂದೆ ಇರುವ ಸಂಘಟನೆ ಯಾವುದು? ಕೂಗಲು ಪ್ರಚೋದನೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ಭಯೋತ್ಪಾದನೆಗೆ ಬೀಜಾಂಕುರ ಆಗುವದೇ ಮಾನಸಿಕತೆಯಿಂದ. ಮಾನಸಿಕ ಒಲವು ವ್ಯಕ್ತಪಡಿಸುತ್ತಾ ವ್ಯಕ್ತಪಡಿಸುತ್ತಾ ಭಯೋತ್ಪಾದಕರಾಗಿ ಬದಲಾಗುತ್ತಾರೆ. ತಾಲಿಬಾನ್ ಸೃಷ್ಟಿಯಾಗಿದ್ದು ಮದರಸಾಗಳಿಂದ. ಪಾಕಿಸ್ತಾನ ಪರ ಕೂಗಲು ಎಲ್ಲಿಂದ ಪ್ರಚೋದನೆ ಸಿಕ್ಕಿತು ಎಂಬ ತನಿಖೆಯಾಗಬೇಕು. ಬೇರು ಸಹಿತ ಕಿತ್ತು ಹಾಕಿದಿದರೆ ಸರಣಿ ಸ್ಫೋಟಗಳೂ ಪ್ರಾರಂಭವಾಗಬಹುದು. ದೇಶದ್ರೋಹಿಗಳು ರಕ್ತ ಬೀಜಾಸುರನಂತೆ ಬೆಳೆಯುವ ಸಾಧ್ಯತೆಗಳಿವೆ ಎಂದರು.

ಎಲ್ಲದಕ್ಕೂ ತನಿಖಾಧಿಕಾರಿಯಾಗುವ ಆತುರದ ಕ್ರಮ ಒಳ್ಳೆಯದಲ್ಲ

ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಈಗೇನು ಹೇಳುತ್ತೀರಿ? ಎಂದು ಪ್ರಶ್ನಿಸಿದ ಸಿಟಿ ರವಿ, ನೀವು ಸಾರ್ವಜನಿಕ ಕ್ಷಮೆಯಾಚಿಸಬೇಕು. ಎಲ್ಲದಕ್ಕೂ ತನಿಖಾಧಿಕಾರಿಯಾಗುವ ಆತುರದ ಕ್ರಮ ಒಳ್ಳೆಯದಲ್ಲ. ನಿಮ್ಮದೇ ಸರ್ಕಾರದ ಇಲಾಖೆ ಬಂಧಿಸಿದೆ, ನೀವು ಕ್ಲೀನ್ ಚಿಟ್ ಕೊಟ್ಟಿದ್ದೀರಿ. ನೀವು ಸಾರ್ವಜನಿಕ ಕ್ಷಮೆಯಾಚನೆ ಮೂಲಕ ನಿಮ್ಮ ಗೌರವ ಹೆಚ್ಚಿಸಿಕೊಳ್ಳಿ ಎಂದರು.

ಮಾಧ್ಯಮದಲ್ಲಿ ಪ್ರಸಾರವಾಗಿದ್ದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯಿತು. ಪತ್ರಕರ್ತರನ್ನೇ ಬಳಸಿ ಮುಚ್ಚಿ ಹಾಕುವ ಪ್ರಯತ್ನ ನಡೆಸಿದರು. ಹಾವೇರಿ ಬಿಜೆಪಿ ಘಟಕ ನಾಶಿಪುಡಿ ಮೇಲೆ ದೂರು ನೀಡಿತ್ತು. ಮುಚ್ಚಿ ಹಾಕುವ ಪ್ರಯತ್ನದ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು. ಹಮಾಸ್ ಪರವಾಗಿ ಇಲ್ಲಿ ಪ್ರತಿಭಟನೆ ಆದಾಗ ಅವರ ಮೇಲೆ ಯಾವುದೇ ಕೇಸ್ ಆಗಲಿಲ್ಲ. ಇಂದು ಬಿಜೆಪಿ ತಿರಂಗಾ ಯಾತ್ರೆಗೆ ಅನುಮತಿ ಕೊಡಲಿಲ್ಲ. ಇದೆಲ್ಲವೂ ಸರ್ಕಾರದ ಮೇಲೆ ಅಪನಂಬಿಕೆ ಹುಟ್ಟು ಹಾಕುತ್ತದೆ ಎಂದರು.

ನಾಸೀರ್ ಹುಸೇನ್ ವರ್ತನೆಯಲ್ಲಿ ಇಂತಹ ಘಟನೆ ಆಗಬಾರದಿತ್ತು ಎಂಬ ನೋವು ವ್ಯಕ್ತವಾಗಲಿಲ್ಲ. ಪಾಕಿಸ್ತಾನದ ಜೊತೆ ಕಾಂಗ್ರೆಸ್ ಗೆಲುವನ್ನು ಸಮೀಕರಿಸಿದ್ದು ಯಾಕೆ? ಕಾಂಗ್ರೆಸ್ ಗೆದ್ದಾಗ ಪಾಕಿಸ್ತಾನ ಬೆಂಬಲಿಗರಿಗೆಲ್ಲಾ ಉತ್ಸಾಹ ಬಂದುಬಿಡುತ್ತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು