AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲು ಸಾಲು ರಜೆ, ವಿಮಾನಯಾನಕ್ಕಿಂತ ಖಾಸಗಿ ಎಸಿ ಬಸ್​ ಪ್ರಯಾಣ ಬಲು ದುಬಾರಿ

ನಾಳೆಯಿಂದ ಮೂರು ದಿನಗಳ ಕಾಲ ರಜೆ ಇರುವ ಹಿನ್ನೆಲೆ ಉದ್ಯೋಗ ಸೇರಿದಂತೆ ಇನ್ನಿತರ ಜೀವನಕ್ಕಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಜನರು ತಮ್ಮ ಊರಿನತ್ತ ಹೊರಟ್ಟಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಬಸ್ ಮಾಲೀಕರು, ದುಪ್ಪಟ್ಟು ಟಿಕೆಟ್ ದರ ಏರಿಸಿದ್ದಾರೆ. ಖಾಸಗಿ ಎಸಿ ಬಸ್​ಗಳಲ್ಲಿನ ಪ್ರಯಾಣ ವಿಮಾಯಯಾನಕ್ಕಿಂತಲೂ ದುಬಾರಿಯಾಗಿದೆ. ಅದಾಗ್ಯೂ, ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹೋಗುವ ಖಾಸಗಿ ಬಸ್​ಗಳು ಬಹುತೇಕ ಭರ್ತಿಯಾಗಿವೆ.

ಸಾಲು ಸಾಲು ರಜೆ, ವಿಮಾನಯಾನಕ್ಕಿಂತ ಖಾಸಗಿ ಎಸಿ ಬಸ್​ ಪ್ರಯಾಣ ಬಲು ದುಬಾರಿ
ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಹೋಗುವ ಖಾಸಗಿ ಬಸ್​ಗಳ ಟಿಕೆಟ್ ದರದಲ್ಲಿ ಭಾರೀ ಹೆಚ್ಚಳ (ಸಾಂದರ್ಭಿಕ ಚಿತ್ರ)
ಕಿರಣ್​ ಸೂರ್ಯ
| Edited By: Rakesh Nayak Manchi|

Updated on: Jan 25, 2024 | 11:15 AM

Share

ಬೆಂಗಳೂರು, ಜ.25: ನಾಳೆಯಿಂದ ಮೂರು ದಿನಗಳ ಕಾಲ ರಜೆ ಇರುವ ಹಿನ್ನೆಲೆ ಉದ್ಯೋಗ ಸೇರಿದಂತೆ ಇನ್ನಿತರ ಜೀವನಕ್ಕಾಗಿ ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡುತ್ತಿರುವ ಜನರು ತಮ್ಮ ಊರಿನತ್ತ ಹೊರಟ್ಟಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಬಸ್ ಮಾಲೀಕರು, ದುಪ್ಪಟ್ಟು ಟಿಕೆಟ್ ದರ ಏರಿಸಿದ್ದಾರೆ. ಅದಾಗ್ಯೂ, ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹೋಗುವ ಖಾಸಗಿ ಬಸ್​ಗಳು ಬಹುತೇಕ ಭರ್ತಿಯಾಗಿವೆ.

ಜನವರಿ ತಿಂಗಳಿನಲ್ಲಿ ಎರಡನೇ ಬಾರಿಗೆ ಬ್ಯಾಕ್ ಟು ಬ್ಯಾಕ್ ರಜೆ ಸಿಗುತ್ತಿದೆ. ಇಂದು ರಾತ್ರಿಯೇ ಸಿಲಿಕಾನ್ ಸಿಟಿಯಿಂದ ತೆರಳಲು ಜನರು ತಯಾರಾಗಿದ್ದಾರೆ. ಸಾಲು ಸಾಲು ರಜೆ ಹಿನ್ನೆಲೆ ಮೂರು ದಿನ ಪ್ರವಾಸ ಮಾಡಲು ಹಲವರ ಪ್ಲಾನ್‌ ಮಾಡಿಕೊಂಡಿದ್ದಾರೆ. ರಜೆ ಅಂತ ಊರಿನ ಕಡೆ ಹೊರಟವರಿಗೆ ಖಾಸಗಿ ಬಸ್​ ಮಾಲೀಕರು ಮತ್ತೆ ಶಾಕ್ ಕೊಟ್ಟಿದ್ದಾರೆ.

ನಾಳೆ ಗಣರಾಜೋತ್ಸ, ನಾಡಿದ್ದು ನಾಲ್ಕನೇ ಶನಿವಾರ, 28ನೇ ತಾರೀಕು ಭಾನುವಾರ. ಹೀಗಾಗಿ ಎರಡರಿಂದ ಮೂರು ಪಟ್ಟು ಟಿಕೆಟ್ ದರವನ್ನು ಏರಿಸುವ ಮೂಲಕ ಖಾಸಗಿ ಬಸ್ ಮಾಲೀಕರು ಹೆಚ್ಚಿನ ಹಣ ಗಳಿಸಲು ಮುಂದಾಗಿದ್ದಾರೆ. ಟಿಕೆಟ್ ಬುಕ್ಕಿಂಗ್ ವೆಬ್​ಸೈಟ್​ನಲ್ಲಿಯೂ ಮನಸ್ಸಿಗೆ ಬಂದಂತೆ ದರ ಏರಿಕೆ ಮಾಡಿದ್ದಾರೆ. ಖಾಸಗಿ ಬಸ್​ಗಳು ಇಂತಹ ಸುಲಿಗೆ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.

ಇದನ್ನೂ ಓದಿ: ಆರೋಗ್ಯ ಸರಿ ಇಲ್ಲವೆಂದು ಆಫೀಸ್​ಗೆ ರಜೆ ಹಾಕಿ, ಒಂದೇ ವಿಮಾನದಲ್ಲಿ ಬಾಸ್​ ಮತ್ತು ಉದ್ಯೋಗಿ ಮುಖಾಮುಖಿಯಾದಾಗ

ಸಂಕ್ರಾತಿ ರಜೆ ಸಂದರ್ಭದಲ್ಲಿಯೂ ಖಾಸಗಿ ಬಸ್ ಮಾಲೀಕರು ಸುಲಿಗೆ ಮಾಡಿದ್ದರು. ಇದೀಗ ರಿಪಬ್ಲಿಕ್ ಡೇ ಬ್ಯಾಕ್ ಟು ಬ್ಯಾಕ್ ರಜೆಗೆ 20 ದಿನದ ಹಿಂದೆ ಟೆಕೆಟ್ ಹೆಚ್ಚಳ ಮಾಡಲಾಗಿತ್ತು. ಮನಸಿಗೆ ಬಂದಂತೆ ದರ ಏರಿಕೆ‌ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಸಾರಿಗೆ ಇಲಾಖೆಯೂ ನಿರ್ಲಕ್ಷ್ಯವಹಿಸುತ್ತಿದೆ.

ದುಬಾರಿಯಾದ ಖಾಸಗಿ ಬಸ್ ಟಿಕೆಟ್ ದರ

ಬೆಂಗಳೂರು-ಶಿವಮೊಗ್ಗ

  • ಸಾಮಾನ್ಯ ದಿನದ ದರ: ₹450-₹600
  • ಇಂದಿನ ಟಿಕೆಟ್ ದರ: ₹1250- ₹1600

ಬೆಂಗಳೂರು- ಹುಬ್ಬಳಿ

  • ಸಾಮಾನ್ಯ ದಿನದ ದರ: ₹600- ₹1000
  • ಇಂದಿನ ಟಿಕೆಟ್: ₹1700-₹2500

ಬೆಂಗಳೂರು-ಮಂಗಳೂರು

  • ಸಾಮಾನ್ಯ ದಿನದ ದರ: ₹500-₹1000
  • ಇಂದಿನ ದರ: ₹1550-₹2000

ಬೆಂಗಳೂರು-ಕಲಬುರುಗಿ

  • ಸಾಮಾನ್ಯ ದಿನದ ದರ:ಳ ₹900-₹1500
  • ಇಂದಿನ ದರ: ₹1900-₹2300

ಬೆಂಗಳೂರು-ಮಡಿಕೇರಿ

  • ಸಾಮಾನ್ಯ ದಿನದ ದರ: ₹500-₹600
  • ಇಂದಿನ ದರ: ₹950-₹1600

ಬೆಂಗಳೂರು – ಉಡುಪಿ

  • ಸಾಮಾನ್ಯ ದಿನದ ದರ: ₹600-₹950
  • ಇಂದಿನ ದರ: ₹1700-₹2200

ಬೆಂಗಳೂರು-ಧಾರವಾಡ

  • ಸಾಮಾನ್ಯ ದಿನದ ದರ: ₹650-₹800
  • ಇಂದಿನ ದರ: ₹1400-₹1850

ಬೆಂಗಳೂರು-ಬೆಳಗಾವಿ

  • ಸಾಮಾನ್ಯ ದಿನದ ದರ: ₹500-₹800
  • ಇಂದಿನ ದರ: ₹1300-₹1800

ಬೆಂಗಳೂರು – ದಾವಣಗೆರೆ

  • ಸಾಮಾನ್ಯ ದಿನದ ದರ: ₹450 -₹600
  • ಇಂದಿನ ದರ: ₹900-₹1300

ಬೆಂಗಳೂರು – ಚಿಕ್ಕಮಗಳೂರು

  • ಸಾಮಾನ್ಯ ದಿನದ ದರ: ₹550 -₹600
  • ಇಂದಿನ ದರ: ₹1100-₹1300

ಬೆಂಗಳೂರು – ಬೀದರ್

  • ಸಾಮಾನ್ಯ ದಿನದ ದರ: ₹850-₹1200
  • ಇಂದಿನ ದರ: ₹1600-₹2000

ಬೆಂಗಳೂರು – ರಾಯಚೂರು

  • ಸಾಮಾನ್ಯ ದಿನದ ದರ: ₹600 -₹900
  • ಇಂದಿನ ದರ: ₹1250-₹1600

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ