Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿ ವಾಸ ಪ್ರದೇಶದ ವ್ಯಾಪ್ತಿ ಭಾರಿ ಹೆಚ್ಚಳ, ಕರ್ನಾಟಕದಲ್ಲೇ ಹೆಚ್ಚು!

ಒಂದು ಹೊಸ ಅಧ್ಯಯನವು ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ಹುಲಿಗಳ ವಾಸಸ್ಥಳದ ವ್ಯಾಪ್ತಿ ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಮಹಾರಾಷ್ಟ್ರಗಳಲ್ಲಿ ಈ ಹೆಚ್ಚಳ ಗಮನಾರ್ಹವಾಗಿದೆ. ವಿಶೇಷವೆಂದರೆ, ಅರಣ್ಯ ಪ್ರದೇಶ ಹೆಚ್ಚಾಗದಿದ್ದರೂ ಹುಲಿ ವಾಸ ಪ್ರದೇಶ ವ್ಯಾಪ್ತಿ ವಿಸ್ತರಣೆಯಾಗಿದ್ದು, ಹೆಚ್ಚಿನ ಹುಲಿಗಳು ಮಾನವ ವಾಸಕ್ಕೆ ಸನಿಹದಲ್ಲೇ ಜೀವಿಸುತ್ತಿವೆ.

ಹುಲಿ ವಾಸ ಪ್ರದೇಶದ ವ್ಯಾಪ್ತಿ ಭಾರಿ ಹೆಚ್ಚಳ, ಕರ್ನಾಟಕದಲ್ಲೇ ಹೆಚ್ಚು!
ಹುಲಿ ವಾಸ ಪ್ರದೇಶದ ವ್ಯಾಪ್ತಿ ಭಾರಿ ಹೆಚ್ಚಳImage Credit source: PTI
Follow us
Ganapathi Sharma
|

Updated on: Feb 01, 2025 | 9:54 AM

ಬೆಂಗಳೂರು, ಫೆಬ್ರವರಿ 1: ದೇಶದಲ್ಲಿ ಹುಲಿಗಳ ಸಂಖ್ಯೆ ಮಾತ್ರವಲ್ಲ, ಅವುಗಳ ವಾಸ ಪ್ರದೇಶದ ವ್ಯಾಪ್ತಿಯೂ ಹೆಚ್ಚಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ವಿಜ್ಞಾನ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ‘ಟೈಗರ್ ರಿಕವರಿ ಅಮಿಡ್ ಪೀಪಲ್ ಆ್ಯಂಡ್ ಪವರ್ಟಿ’ ಎಂಬ ವರದಿಯಲ್ಲಿ ಕಳೆದ 20 ವರ್ಷಗಳಲ್ಲಿ ಹುಲಿ ವಾಸ ಪ್ರದೇಶದ ವ್ಯಾಪ್ತಿ ಶೇ 30 ರಷ್ಟು ವಿಸ್ತರಣೆಯಾಗಿದೆ ಎಂದು ತಿಳಿಸಲಾಗಿದೆ.

ಹುಲಿಗಳು ದಟ್ಟಾರಣ್ಯ ಪ್ರದೇಶಗಳನ್ನು ಸಂತಾನೋತ್ಪತ್ತಿ ಸ್ಥಳಗಳಾಗಿ ಮಾಡಿಕೊಳ್ಳುತ್ತಿದ್ದು ತಮ್ಮ ವಾಸ ಪ್ರದೇಶವನ್ನು ವಿಸ್ತರಿಸುತ್ತಿವೆ ಎಂದು ಅಧ್ಯಯನ ತಿಳಿಸಿದೆ.

ವರ್ಷ ವರ್ಷ ಹೆಚ್ಚಾಗುತ್ತಿದೆ ಹುಲಿ ವಾಸ ಪ್ರದೇಶ

ಹುಲಿಗಳ ವಾಸ ಪ್ರದೇಶ ವ್ಯಾಪ್ತಿ ವಾರ್ಷಿಕವಾಗಿ 2,929 ಚದರ ಕಿಮೀಗಳಷ್ಟು ವಿಸ್ತರಣೆಯಾಗುತ್ತಿದೆ. ಹುಲಿಗಳು ನಿರಂತರವಾಗಿ ಮಾನವ ಮುಕ್ತ ಮತ್ತು ಬೇಟೆಗೆ ಅವಕಾಶ ಇರುವ ಸಮೃದ್ಧ ಸಂರಕ್ಷಿತ ಪ್ರದೇಶಗಳನ್ನು ಅತಿಕ್ರಮಿಸುವುದನ್ನು ಮುಂದುವರೆಸಿವೆ ಎಂದು ಅಧ್ಯಯನ ವರದಿ ತಿಳಿಸಿದೆ.

ಕರ್ನಾಟಕದಲ್ಲೇ ಅತಿಹೆಚ್ಚು!

ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಮಹಾರಾಷ್ಟ್ರದಲ್ಲಿ ಹುಲಿ ವಾಸ ಪ್ರದೇಶದ ವ್ಯಾಪ್ತಿ ವಿಸ್ತರಣೆ ಅತಿ ಹೆಚ್ಚು ದಾಖಲಾಗಿದೆ ಎಂದು ಅಧ್ಯಯನ ಹೇಳಿದೆ. ಈ ರಾಜ್ಯಗಳಲ್ಲಿ 2018 ಕ್ಕೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದು 2023 ರಲ್ಲಿ ಬಿಡುಗಡೆಯಾದ ವರದಿಯಿಂದ ತಿಳಿದುಬಂದಿತ್ತು.

ಹುಲಿಗಳ ಸಂಖ್ಯೆಯಲ್ಲೂ ಹೆಚ್ಚಳ

ಕುತೂಹಲಕಾರಿಯಾಗಿ, 2023 ರಲ್ಲಿ ಬಿಡುಗಡೆಯಾದ 2023 ಹುಲಿ ಅಂದಾಜು ವರದಿಯು 2018 ಕ್ಕೆ ಹೋಲಿಸಿದರೆ ಈ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ತೋರಿಸಿದೆ. ವ್ಯಾಪಕವಾಗಿ ಕಾಡು ಪ್ರಾಣಿಗಳ ಮಾಂಸ ಸೇವನೆ ಮಾಡುವ, ವನ್ಯ ಪ್ರಾಣಿಗಳ ಬೇಟೆಯಾಡುವಿಕೆಯ ಪರಂಪರೆಯನ್ನು ಹೊಂದಿರುವ ರಾಜ್ಯಗಳಲ್ಲಿ ಹುಲಿಗಳು ಅಳಿವಿನಂಚಿನಲ್ಲಿವೆ ಎಂದು ಅಧ್ಯಯನ ತಿಳಿಸಿದೆ. ಉದಾಹರಣೆಗೆ ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್, ಈಶಾನ್ಯ ರಾಜ್ಯಗಳು ಮತ್ತು ಆಗ್ನೇಯ ಏಷ್ಯಾ ಭಾಗದಲ್ಲಿ ಹುಲಿಗಳ ಸಂಖ್ಯೆ ಕಡಿಮೆ ಇದೆ ಎನ್ನಲಾಗಿದೆ.

ಬಡತನ ಮತ್ತು ಹೆಚ್ಚಿನ ಸಶಸ್ತ್ರ ಸಂಘರ್ಷ ಇರುವ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ಸಮೃದ್ಧಿ ಇರುವ ರಾಜ್ಯಗಳಲ್ಲೇ ಹುಲಿ ವಾಸ ಪ್ರದೇಶ ವ್ಯಾಪ್ತಿ ಹೆಚ್ಚಾಗಿದೆ ಎಂದು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಅಧ್ಯಯನದ ಸಹ-ಲೇಖಕರಾದ ಯದುವೇದ್ರದೇವ್ ಝಾಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಳಿಗಿರಿರಂಗನ ಬನದಲ್ಲಿ ಜಾಂಬವಂತನ ಕಾದಾಟ, ವಿಡಿಯೋ ನೋಡಿ

ಅರಣ್ಯ ಪ್ರದೇಶ ಹೆಚ್ಚಾಗದಿದ್ದರೂ ಹುಲಿಗಳ ವಾಸ ಪ್ರದೇಶದ ವ್ಯಾಪ್ತಿ ಹೆಚ್ಚಿದೆ. ಪ್ರಸ್ತುತ ಶೇ 40 ರಷ್ಟು ಹುಲಿಗಳು ಮಾನವ ವಾಸಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ ವಾಸಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗಿದ್ದು ಡೋಂಗಿಗಳು: ಯತ್ನಾಳ್
ವಿಜಯೇಂದ್ರ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗಿದ್ದು ಡೋಂಗಿಗಳು: ಯತ್ನಾಳ್
ತನ್ನ ಜೈಲಿಗೆ ಕಳಿಸಿದ್ದು ಶಿವಕುಮಾರ್ ಎಂದು ನೇರವಾಗಿ ಅರೋಪಿಸಿದ ಮುನಿರತ್ನ
ತನ್ನ ಜೈಲಿಗೆ ಕಳಿಸಿದ್ದು ಶಿವಕುಮಾರ್ ಎಂದು ನೇರವಾಗಿ ಅರೋಪಿಸಿದ ಮುನಿರತ್ನ
‘ಸಿನಿಮೋತ್ಸವಕ್ಕೆ ಆಹ್ವಾನ ಹಾಗಿರಲಿ, ಪಾಸ್ ಕೇಳಿದ್ದೆ ಅದೂ ಕೊಡಲಿಲ್ಲ’
‘ಸಿನಿಮೋತ್ಸವಕ್ಕೆ ಆಹ್ವಾನ ಹಾಗಿರಲಿ, ಪಾಸ್ ಕೇಳಿದ್ದೆ ಅದೂ ಕೊಡಲಿಲ್ಲ’
ದೇವಿಶ್ರೀ ಪ್ರಸಾದ್ ಎದುರು ತಮ್ಮ ಮ್ಯೂಸಿಕ್ ಹಿಸ್ಟರಿ ಬಿಚ್ಚಿಟ್ಟ ಸಾಧುಕೋಕಿಲ
ದೇವಿಶ್ರೀ ಪ್ರಸಾದ್ ಎದುರು ತಮ್ಮ ಮ್ಯೂಸಿಕ್ ಹಿಸ್ಟರಿ ಬಿಚ್ಚಿಟ್ಟ ಸಾಧುಕೋಕಿಲ
ಮಹದೇವಪ್ಪ ಅಸಹಾಯಕರಾಗಿದ್ದರೆ ಸದನದ ಗಮನಕ್ಕೆ ತರಲಿ: ಸುನೀಲ ಕುಮಾರ್
ಮಹದೇವಪ್ಪ ಅಸಹಾಯಕರಾಗಿದ್ದರೆ ಸದನದ ಗಮನಕ್ಕೆ ತರಲಿ: ಸುನೀಲ ಕುಮಾರ್
ರಾಜಣ್ಣ ನೀಡುವ ಸಮಜಾಯಿಷಿಗಳು ಮಾಧ್ಯಮದವರಿಗೆ ಮನವರಿಕೆಯಾಗಲ್ಲ!
ರಾಜಣ್ಣ ನೀಡುವ ಸಮಜಾಯಿಷಿಗಳು ಮಾಧ್ಯಮದವರಿಗೆ ಮನವರಿಕೆಯಾಗಲ್ಲ!
ಮದುವೆಯಾದ ಮೂರನೇ ದಿನವೇ ಶಶಾಂಕ್ ಹೃದಯಾಘಾತಕ್ಕೆ ಬಲಿ
ಮದುವೆಯಾದ ಮೂರನೇ ದಿನವೇ ಶಶಾಂಕ್ ಹೃದಯಾಘಾತಕ್ಕೆ ಬಲಿ
ಬೆಲ್ಲ ತಯಾರಾಗುವ ವಿಧಾನ ತಿಳಿಯಲು ಈ ವಿಡಿಯೋ ಸಹಕಾರಿಯಾಗಿದೆ
ಬೆಲ್ಲ ತಯಾರಾಗುವ ವಿಧಾನ ತಿಳಿಯಲು ಈ ವಿಡಿಯೋ ಸಹಕಾರಿಯಾಗಿದೆ
Karnataka Assembly Session LIVE: 3ನೇ ದಿನದ ವಿಧಾನಮಂಡಲ ಅಧಿವೇಶನ ಲೈವ್
Karnataka Assembly Session LIVE: 3ನೇ ದಿನದ ವಿಧಾನಮಂಡಲ ಅಧಿವೇಶನ ಲೈವ್
ದಕ್ಷಿಣ ಕರ್ನಾಟಕ ಪ್ರಸಿದ್ಧ ದೇವಾಲಯಗಳಲ್ಲಿ ಚಿಕ್ಕತಿರುಪತಿ ಗುಡಿಯೂ ಒಂದು
ದಕ್ಷಿಣ ಕರ್ನಾಟಕ ಪ್ರಸಿದ್ಧ ದೇವಾಲಯಗಳಲ್ಲಿ ಚಿಕ್ಕತಿರುಪತಿ ಗುಡಿಯೂ ಒಂದು