AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಉದ್ಯಮಿ ಗೃಹ ಸಚಿವ ಪರಮೇಶ್ವರ್ ಪರಮಾಪ್ತನಂತೆ! ಅದಕ್ಕೇ ಗ್ರಾಮಸ್ಥರಿಗೆ ಕಾಟ ಕೊಡ್ತಿದ್ದಾನೆ, ಅಧಿಕಾರಿಗಳೂ ಗಪ್​ಚುಪ್​​!

ಕೋಳಿ ಫಾರಂ ಪ್ರಾರಂಭಿಸಿದಾಗಿಂದಲೂ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿರುವ ಸಚಿವ ಪರಮೇಶ್ವರ್ ಬೆಂಬಲಿಗ ಹುಸೇನ್ ಸಾಬ್ ಎಂಬಾತ ಪರಮೇಶ್ವರ್ ಜೊತೆಗಿನ ಫೋಟೋ ತೋರಿಸಿ ಜನರಿಗೆ ಬೆದರಿಕೆ ಹಾಕಿ ನಮ್ದೆ ಸರ್ಕಾರ, ನಮ್ಮ ಸರ್ಕಾರ ಇರೊವರೆಗೂ ನಮ್ಮನ್ನ ಏನೂ ಮಾಡೋಕೆ ಆಗಲ್ಲ ಅಂತ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾನಂತೆ.

ಆ ಉದ್ಯಮಿ ಗೃಹ ಸಚಿವ ಪರಮೇಶ್ವರ್ ಪರಮಾಪ್ತನಂತೆ! ಅದಕ್ಕೇ ಗ್ರಾಮಸ್ಥರಿಗೆ ಕಾಟ ಕೊಡ್ತಿದ್ದಾನೆ, ಅಧಿಕಾರಿಗಳೂ ಗಪ್​ಚುಪ್​​!
ಗೃಹ ಸಚಿವ ಪರಮೇಶ್ವರ್
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ | Edited By: ಸಾಧು ಶ್ರೀನಾಥ್​|

Updated on:Dec 23, 2023 | 4:09 PM

Share

ಒಂದು ಕೋಳಿ ಫಾರಂ ಹೊಸದಾಗಿ ಪ್ರಾರಂಭ ಮಾಡ್ಬೇಕು ಅಂದ್ರೆ ಅದಕ್ಕೊಂದು ಕಾನೂನು ನಿಯಮವಿದೆ. ಆದ್ರೆ ಇಲ್ಲೊಬ್ಬ ಅಸಾಮಿ ನಾನು ಸಚಿವರ ಆಪ್ತನೆಂದು ಇಡೀ ಗ್ರಾಮಸ್ಥರಿಗೆ ಬೆದರಿಕೆ ಹಾಕಿ ಕಾನೂನನ್ನ ಗಾಳಿಗೆ ತೂರಿ ಕೋಳಿ ಫಾರಂ (Poultry) ತೆರೆಯಲು ಮುಂದಾಗಿದ್ದಾನೆ.. ಅದರ ಡಿಟೈಲ್ಸ್ ಇಲ್ಲಿದೆ ನೋಡಿ. ಹೌದು ಗೃಹ ಸಚಿವ ಜಿ. ಪರಮೇಶ್ವರ್ (Home Minister G Parameshwara) ತವರು ಕ್ಷೇತ್ರ ಕೊರಟಗೆರೆಯಲ್ಲಿ ಅವರ ಬೆಂಬಲಿಗನ ಹಾವಳಿಗೆ ಇಡೀ ಗ್ರಾಮದ ಜನರು ಕಂಗಾಲಾಗಿ ಹೋಗಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ (Koratagere) ತಾಲೂಕಿನ ವಡ್ಡಗೆರೆ ಗ್ರಾಮ ಪಂಚಾಯತಿಯ ಕಲ್ಕೆರೆ ಗ್ರಾಮದ ಹುಸೇನ್ ಸಾಬ್ ಆಟಾಟೋಪಕ್ಕೆ ಕಂಗಾಲಾಗಿದ್ದಾರೆ. ನಿಯಮದ‌ ಪ್ರಕಾರ ಜನವಸತಿಯಿಂದ 500 ಮೀಟರ್ ಒಳಗೆ ಕೋಳಿ ಫಾರಂ ಸ್ಥಾಪಿಸುವಂತಿಲ್ಲ. ಅದರೆ ಗ್ರಾಮದಿಂದ 259 ಅಡಿ ದೂರದಲ್ಲೇ ಸುಮಾರು 8 ಸಾವಿರ ಕೋಳಿ ಸಾಕಾಣಿಕೆ ಮಾಡುವ ಬೃಹತ್ ಕೋಳಿಫಾರಂ ಪ್ರಾರಂಭ‌ ಮಾಡಲು ಹೊರಟಿದ್ದಾನೆ ಈ ಹುಸೇನ್ ಸಾಬ್.

ಇನ್ನು ಕಲ್ಕೆರೆ ಗ್ರಾಮಸ್ಥರು ಕೋಳಿ ಫಾರಂ ತೆರೆಯದಂತೆ ವಿರೋಧ ವ್ಯಕ್ತಪಡಿಸಿದ್ದು, ಗ್ರಾಮ ಪಂಚಾಯ್ತಿ ಪಿಡಿಒ, ತಹಶೀಲ್ದಾರ್, ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ದೂರು ನೀಡಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ತಾಲ್ಲೂಕು ಸರ್ವೆಯರ್ ಗ್ರಾಮದಿಂದ ಕೋಳಿ ಫಾರಂ ವರೆಗೆ ಭೂ ಮಾಪನ ಮಾಡಿ ಸರ್ವೆ ರಿಪೊರ್ಟ್ ಕೂಡಾ ‌ನೀಡಿದ್ದಾರೆ. ಅದರಲ್ಲಿ ಗ್ರಾಮದಿಂದ ಕೋಳಿ ಫಾರಂ ವರೆಗೆ ಕೇವಲ 259 ಮೀಟರ್ ಬಂದಿದ್ದು. ಕೋಳಿ ಫಾರಂಗೆ ಅನುಮತಿ ನೀಡಬಾರದೆಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ವರದಿ ಕೊಟ್ಟಿದ್ದಾರೆ.

ಇದನ್ನೂ  ಓದಿ: ಹೊಸ ವರ್ಷಾಚರಣೆ ಸಂಬಂಧ ಗೃಹ ಸಚಿವ ಡಾ.ಪರಮೇಶ್ವರ್ ಸಭೆ; ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚನೆ

ಕೋಳಿ ಫಾರಂ ಪ್ರಾರಂಭಿಸಿದಾಗಿಂದಲೂ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿರುವ ಸಚಿವ ಪರಮೇಶ್ವರ್ ಬೆಂಬಲಿಗ ಪರಮೇಶ್ವರ್ ಜೊತೆಗಿನ ಫೋಟೋ ತೋರಿಸಿ ಜನರಿಗೆ ಬೆದರಿಕೆ ಹಾಕಿ ನಮ್ದೆ ಸರ್ಕಾರ, ನಮ್ಮ ಸರ್ಕಾರ ಇರೊವರೆಗೂ ನಮ್ಮನ್ನ ಏನೂ ಮಾಡೋಕೆ ಆಗಲ್ಲ ಅಂತ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಮಾಡ್ತಿದ್ದಾರೆ.

ಇನ್ನು ಒಂದು ವೇಳೆ ಏನಾದ್ರು ಅಲ್ಲಿ ಕೋಳಿ ಫಾರಂ ಓಪನ್ ಆದ್ರೆ ನೋಣ ಕಾಟ ಹೆಚ್ಚಾಗಲಿದ್ದು, ಕೋಳಿ ವಾಸನೆಗೆ ಹೆದರಿ ನಾವೆಲ್ಲಾ ಗ್ರಾಮವನ್ನೇ ತೊರೆಯಬೇಕಾಗುತ್ತದೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ. ಕೋಳಿ ಫಾರಂ ತೆರೆಯದಂತೆ ಕಳೆದ ಎರಡು ತಿಂಗಳಿಂದ ಸತತವಾಗಿ ಹೋರಾಟ ಮಾಡುತ್ತಾ ಬಂದಿದ್ರು ಅಧಿಕಾರಿಗಳು ಮಾತ್ರ ಆತನ ವಿರುದ್ಧ ಕ್ರಮ ಕೈಗೊಳ್ಳದೇ ಇರೋದು ಗ್ರಾಮಸ್ಥರಿಗೆ ಆಶ್ಚರ್ಯ ಆತಂಕ ನೋವುಂಟು ಮಾಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:28 pm, Sat, 23 December 23

Follow Us
Mahesha E
Mahesha E

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ