ತೇಜಸ್ ಪೀಠಾಧಿಪತಿ ಅಲ್ಲ; ಕುಪ್ಪೂರು ಗದ್ದುಗೆಗೆ ಪೀಠಾಧಿಪತಿ ನೇಮಕ ಮಾಡಿಲ್ಲ – ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟನೆ

ತೇಜಸ್ ಪೀಠಾಧಿಪತಿ ಅಲ್ಲ; ಕುಪ್ಪೂರು ಗದ್ದುಗೆಗೆ ಪೀಠಾಧಿಪತಿ ನೇಮಕ ಮಾಡಿಲ್ಲ - ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟನೆ
ತೇಜಸ್ ಪೀಠಾಧಿಪತಿ ಅಲ್ಲ; ಕುಪ್ಪೂರು ಗದ್ದುಗೆಗೆ ಪೀಠಾಧಿಪತಿ ನೇಮಕ ಮಾಡಿಲ್ಲ: ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟನೆ

ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಗದ್ದುಗೆ ಮಠದ ಸ್ವಾಮಿಜಿಗಳು ಶ್ರೀ ಯತೀಶ್ವರ ಶಿವಚಾರ್ಯ ಶ್ರೀ ಗಳು ಕಳೆದ ಸೆಪ್ಟೆಂಬರ್ 25 ರಂದು ಕೊರೊನಾದಿಂದ ಮೃತಪಟ್ಟಿದ್ದರು. 48 ವರ್ಷದ ಯತೀಶ್ವರ ಶಿವಚಾರ್ಯ ಶ್ರೀ ಗಳು ಮಠದ ಪೀಠಾಧಿಪತಿಯಾಗಿ ಉತ್ತಮ ಕೆಲಸಗಳನ್ನ ಮಾಡಿದ್ದರು. ಸದ್ಯ ಅವರ ಲಿಂಗಕ್ಯ ರಾದ ಕಾರಣ ಸಹೋದರರ ಮಹೇಶ್ ಪುತ್ರನಾದ 13 ವರ್ಷದ ಬಾಲಕ ತೇಜಸ್ ನನ್ನ ಕುಪ್ಪೂರು ಗದ್ದುಗೆ ಮಠದ ಉತ್ತಾರಿಧಿಕಾರಿಯಾಗಿ ಅಂದೇ ವಿವಿಧ ಮಠಾಧಿಶರು ಹಾಗೂ ಸಚಿವ ಮಾಧುಸ್ವಾಮಿ ಸಮ್ಮುಖದಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಅದು ಅಧಿಕೃತ ಅಲ್ಲ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಈಗ ಸ್ಪಷ್ಟನೆ ನೀಡಿದ್ದಾರೆ.

3 ವರ್ಷದ ಬಾಲಕ ಪೀಠಾಧಿಪತಿ ಅಲ್ಲ, ಕುಪ್ಪೂರು ಗದ್ದುಗೆ ಮಠಕ್ಕೆ ಪೀಠಾಧಿಪತಿಯಾಗಿ ನೇಮಕ ಮಾಡಿಲ್ಲ. ಮಠದ ಇತಿಹಾಸದಲ್ಲಿ ಉತ್ತರಾಧಿಕಾರಿ ಯಾಗುವವರೇ ಯತೀಶ್ವರ ಶಿವಚಾರ್ಯ ಶ್ರೀ ಗಳ ಅಂತ್ಯಸಂಸ್ಕಾರ ಮಾಡಬೇಕಿತ್ತು. ಅಲ್ಲದೇ ಈ ಹಿಂದೆ ಇದ್ದ ಚಂದ್ರಶೇಖರ್ ಸ್ವಾಮೀಜಿ ಕೂಡ ತೇಜಸ್ ಉತ್ತಾರಿಧಿಕಾರಿ ಆಗಬೇಕೆಂದು ವಿಲ್ ನಲ್ಲಿ ಬರೆದಿಟ್ಟಿದ್ದಾರೆ.

ಹೀಗಾಗಿ ತೇಜಸ್ ರವರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ ಅಧಿಕೃತವಾಗಿ ಮಠದ ಪೀಠಾಧಿಕಾರಿಯಾಗಿ ನೇಮಿಸಿಲ್ಲ, ಬಾಲಕ ತೇಜಸ್ ಇನ್ನೂ ಅಧ್ಯಯನ ಮಾಡಬೇಕಿದೆ. ಅಲ್ಲದೇ ಅದು 18 ವರ್ಷ ಆಗೋವರೆಗೂ ಸಾಧ್ಯವಿಲ್ಲ, ಅವರಿಗೆ 18 ವರ್ಷ ಆದ ನಂತರ ಅವರಿಚ್ಚೆಯಂತೆ ಅವರು ಪೀಠಾಧಿಪತಿಯಾಗಬಹುದು|

ಸ್ವಾಮಿಜಿಗಳ ಅಂತ್ಯಸಂಸ್ಕಾರ ನೇತೃತ್ವ ವಹಿಸಲು ಉತ್ತರಾಧಿಕಾರಿ ವ್ಯಕ್ತಿ ಬೇಕಿತ್ತು. ಹೀಗಾಗಿ ಅನಿವಾರ್ಯವಾಗಿ ಹೀಗೆ ನೇಮಿಸಲಾಗಿದೆ. ಆದರೆ ತೇಜಸ್ ಕುಪ್ಪೂರು ಗದ್ದುಗೆ ಮಠದ ಪೀಠಾಧಿಪತಿಯಲ್ಲ ಅಂತಾ ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

Also Read:

ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಕ ಊರ್ಜಿತ, ಈ ಪರಂಪರೆಯಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ: ಹೈಕೋರ್ಟ್

Also Read:
ಕುಪ್ಪೂರು ಗದ್ದುಗೆ ಮಠದ ಮುಂದಿನ ಉತ್ತರಾಧಿಕಾರಿಯಾಗಿ 8ನೇ ತರಗತಿ ಓದುತ್ತಿರುವ ತೇಜಸ್ ಹೆಸರು ಘೋಷಣೆ

Read Full Article

Click on your DTH Provider to Add TV9 Kannada