ಪಾವಗಡ ಕೆಎಸ್ಆರ್​ಟಿಸಿ ಡಿಪೋದಲ್ಲಿ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ

ಮೃತ ಶಶಿಧರ್ ಪಾವಗಡ ಡಿಪೋದಲ್ಲಿ ಬಸ್ ಚಾಲಕ ಕಂ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ದ. ಶಶಿಧರ್ ಕಳೆದ ಎರಡು ದಿನಗಳ ಹಿಂದೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಇಂದು ಸಂಜೆ ಡಿಪೋ ಸಿಬ್ಬಂದಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಪಾವಗಡ ಕೆಎಸ್ಆರ್​ಟಿಸಿ ಡಿಪೋದಲ್ಲಿ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Apr 14, 2022 | 10:27 PM

ತುಮಕೂರು: ಪಾವಗಡ ಕೆಎಸ್ಆರ್ಟಿಸಿ ಡಿಪೋದಲ್ಲಿ ನೇಣು ಬಿಗಿದುಕೊಂಡು ಹೊಸದುರ್ಗ ಮೂಲದ ಚಾಲಕ ಶಶಿಧರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಶಶಿಧರ್ ಪಾವಗಡ ಡಿಪೋದಲ್ಲಿ ಬಸ್ ಚಾಲಕ ಕಂ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ದ. ಶಶಿಧರ್ ಕಳೆದ ಎರಡು ದಿನಗಳ ಹಿಂದೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಇಂದು ಸಂಜೆ ಡಿಪೋ ಸಿಬ್ಬಂದಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಆರೋಪ ಕೇಳಿ ಬಂದಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಮಾಂಗಲ್ಯ ಸರ ಕಳವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಬೈಲಾಂಜನೇಯ ರಥೋತ್ಸವ ವೇಳೆ ಮಹಿಳೆಯ ಮಾಂಗಲ್ಯ ಸರ ಕಳವಾಗಿದೆ. ಹನುಮಂತೇಗೌಡನಪಾಳ್ಯದ ವೆಂಕಟಲಕ್ಷ್ಮಮ್ಮ ಅವರ 2ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ 64ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿ ಖದೀಮರು ಪರಾರಿಯಾಗಿದ್ದಾರೆ. ರಥೋತ್ಸವ ವೇಳೆ ನೂಕುನುಗ್ಗಲು ಮಾಡಿ ಕೃತ್ಯ ಎಸಗಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನಲ್ಲಿದ್ದ ಎರಡೂವರೆ ಲಕ್ಷ ಬೆಲೆ ಬಾಳುವ ವಸ್ತುಗಳು ಕಳ್ಳತನ ನೆಲಮಂಗಲ: ಹೆಸರಘಟ್ಟ ರಸ್ತೆಯ ಎಜಿಬಿ ಲೇಔಟ್‌ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳ ಗ್ಲಾಸ್ ಒಡೆದು ಎರಡೂವರೆ ಲಕ್ಷ ಬೆಲೆ ಬಾಳುವ ವಸ್ತುಗಳು ಕಳ್ಳತನ ಮಾಡಲಾಗಿದೆ. ಬಸವರಾಜು ಎಂಬುವರಿಗೆ ಸೇರಿದ ಕಾರಿನಲ್ಲಿ 2 ಲ್ಯಾಪ್‌ಟಾಪ್, ಚೆಕ್ಬುಕ್ ಇತ್ತು. ಇನ್ನು ಹರ್ಷ ಎಂಬುವರಿಗೆ ಸೇರಿದ ಬುಲೆರೋ ಕಾರಿನ ಗ್ಲಾಸ್ ಒಡೆದು 25 ಸಾವಿರ ಮೌಲ್ಯದ ಮ್ಯೂಸಿಕ್ ಸಿಸ್ಟಂ ಕಳ್ಳತನ ಮಾಡಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತಮಿಳಿಗೆ ಕಾಲಿಟ್ಟ ‘ಆಹಾ’ ಒಟಿಟಿ; ವಿಶ್ ಮಾಡಿದ ನಟ ಅಲ್ಲು ಅರ್ಜುನ್, ಸಿಎಂ ಸ್ಟಾಲಿನ್

ಅಂತ್ಯಸಂಸ್ಕಾರಕ್ಕೆ ಮುನ್ನ ನಡುವೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಸಂತೋಷ ಪಾಟೀಲ ಕುಟುಂಬಸ್ಥರ ಕಾದಾಟ

Published On - 10:24 pm, Thu, 14 April 22