ತುಮಕೂರಿನಲ್ಲಿ ಫ್ಯಾಷನ್ ಶೋ; ರಂಗು ರಂಗಿನ ನಡಿಗೆಗೆ ಮಾರುಹೋದ ಜನತೆ

ತುಮಕೂರಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಜಿಲ್ಲೆಯ ಯುವಕರು, ಯುವತಿಯರು, ಪುಟ್ಟ ಮಕ್ಕಳು ಭಾಗಿಯಾಗಿದ್ದು, ತಮ್ಮ ಪ್ರತಿಭೆಯನ್ನ ಪ್ರದರ್ಶನ ಮಾಡಿದರು. ಅದರಲ್ಲೂ ಭಾರತ ಸಂಸ್ಕೃತಿ ಸಾರುವ ಉಡುಪನ್ನ ಧರಿಸಿ ನೋಡುಗರ ಗಮನಸೆಳೆದರು.

  • ಮಹೇಶ್.ಇ
  • Published On - 20:56 PM, 4 Apr 2021
ತುಮಕೂರಿನಲ್ಲಿ ಫ್ಯಾಷನ್ ಶೋ; ರಂಗು ರಂಗಿನ ನಡಿಗೆಗೆ ಮಾರುಹೋದ ಜನತೆ
ತುಮಕೂರಿನಲ್ಲಿ ಫ್ಯಾಷನ್ ಶೋ

ತುಮಕೂರು: ಇತ್ತೀಚೆಗೆ ಬೆಂಗಳೂರಿಗೆ ಪರ್ಯಾಯವಾಗಿ ಕಲ್ಪತರು ತುಮಕೂರು ಜಿಲ್ಲೆ ಬೆಳೆಯುತ್ತಿದೆ ಇದಕ್ಕೆ ಪುಷ್ಟಿ ನೀಡುವಂತೆ ವಿವಿಧ ರೀತಿಯ ಸ್ಪರ್ಧೆಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ. ಅದರಂತೆ ಸದ್ಯ ಚಿಕ್ಕ ಮಕ್ಕಳಿಂದ ಹಿಡಿದು ಮದುವೆಯಾಗಿರುವವರೆಗೂ ಎಲ್ಲರೂ ಭಾಗವಹಿಸುವ ಫ್ಯಾಷನ್ ಶೋ ನಡೆದಿದೆ. ತುಮಕೂರಿನಲ್ಲಿ ಕ್ರಿಯೇಟಿವ್ ಪೈ ಇವೆಂಟ್ಸ್ ನವರು ಆಯೋಜನೆ ಮಾಡಿದ್ದ ಯುನಿಕ್ಯೂ ಸೌತ್ ಐಕಾನ್ -2021 ಬ್ಯೂಟಿ ಪೇಜೆಂಟ್ರಿ ಎಂಬ ಫ್ಯಾಷನ್ ಶೋ ಕಾರ್ಯಕ್ರಮವನ್ನು ನಗರದ ಖಾಸಗಿ ಹೋಟೆಲ್​ನಲ್ಲಿ  ನಡೆಸಲಾಯಿತು. ಈ ಪ್ಯಾಷನ್ ಶೋ ಕಾರ್ಯಕ್ರಮಕ್ಕೆ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಭಾಗಿಯಾಗಿದ್ದರು.

ತುಮಕೂರಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಜಿಲ್ಲೆಯ ಯುವಕರು, ಯುವತಿಯರು, ಪುಟ್ಟ ಮಕ್ಕಳು ಭಾಗಿಯಾಗಿದ್ದು, ತಮ್ಮ ಪ್ರತಿಭೆಯನ್ನ ಪ್ರದರ್ಶನ ಮಾಡಿದರು. ಅದರಲ್ಲೂ ಭಾರತ ಸಂಸ್ಕೃತಿ ಸಾರುವ ಉಡುಪನ್ನ ಧರಿಸಿ ನೋಡುಗರ ಗಮನಸೆಳೆದರು. ಜೊತೆಗೆ ದೇಶ ವಿದೇಶಗಳ ಹಾಗೂ ವಿವಿಧ ರಾಜ್ಯಗಳ ಆಕರ್ಷಣೆಯ ಉಡುಪಗಳನ್ನ ಧರಿಸಿ ಕದನ ವಾಕ್ ಮಾಡಿದರು.

ಇನ್ನು ಕಾರ್ಯಕ್ರಮದಲ್ಲಿ ವಿವಿಧ ಕೆಟಗರಿಯ ಒಟ್ಟು 56 ಮಾಡೆಲ್​ಗಳು ಸ್ಪರ್ಧಾಳುಗಳಾಗಿ ಭಾಗಿಯಾಗಿದ್ದರು. ಎಲ್ಲರೂ ಒಬ್ಬರಿಗಿಂತ ಒಬ್ಬರು ತಮ್ಮದೇ ಆದ ಪ್ರತಿಮೆಯನ್ನ ಉಡುಗೆ ನಡಿಗೆ ಮೂಲಕ ಪ್ರದರ್ಶನ ಮಾಡಿದರು.  ಕಾರ್ಯಕ್ರಮ ದಲ್ಲಿ ಸಿಂದೂ ಎಸ್ ಮತ್ತು ಮಿಸ್ ಮೌನಿಕಾ ಹಾಗೂ ಅರುಣಿಯವರು ತೀರ್ಪುಗಾರರಾಗಿ ಭಾಗವಹಿಸಿದ್ದರು.‌

fashion show

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಫ್ಯಾಶನ್​ ಶೋ ಅಲ್ಲಿ ಭಾಗಿ

ತುಮಕೂರಿನಲ್ಲಿ ಲೇಟೆಸ್ಟ್ ಫ್ಯಾಷನ್ ಶೋ ಆಯೋಜಿಸಿದ್ದಕ್ಕೆ ಸ್ಪರ್ದಾಳುಗಳು ಪುಲ್ ಖುಷಿಯಾಗಿದ್ದಾರೆ. ಪುಟ್ಟ ಮಕ್ಕಳಿನಿಂದ ಹಿಡಿದು ಮದುವೆಯಾಗಿರುವ ಮಹಿಳೆಯರು ಭಾಗವಹಿಸಿ ನೋಡುಗರ ಗಮನಸೆಳೆದರು. ಒಟ್ಟಾರೆ ತುಮಕೂರು ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿದ್ದು,ಈಗ ಫ್ಯಾಷನ್ ಲೋಕದಲ್ಲಿ ಪ್ರಸಿದ್ಧವಾಗುತ್ತಿದೆ.

(ವರದಿ: ಮಹೇಶ್.ಇ -9980914117)

ಇದನ್ನೂ ಓದಿ: ಗಡಿನಾಡಲ್ಲಿ ಸುಂದರಿಯರ ಕ್ಯಾಟ್ ವಾಕ್: ರಂಗುರಂಗಿನ ಸೀರೆಯಲ್ಲಿ ಮಿಂಚಿದ ನೀರೆಯರು

ಮತ್ತೆ ತೆರೆದುಕೊಂಡ ಫ್ಯಾಷನ್ ಲೋಕ: ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಫ್ಯಾಷನ್ ಶೋ ಹೇಗಿತ್ತು ಗೊತ್ತಾ?

(Fashion show organized in Tumkur )