ಶಿವಮೊಗ್ಗ ಟು ಬೆಂಗಳೂರು ಎಕ್ಸ್ಪ್ರೆಸ್ ರೈಲು ಹತ್ತುವ ಮುನ್ನ ಈ ಸುದ್ದಿ ಓದಿ, ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರು ಗರಂ
ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಎಕ್ಸ್ಪ್ರೆಸ್ ರೈಲು ತುಮಕೂರಿನ ಮಾರ್ಗ ಮಧ್ಯೆ ನಿಂತಿದೆ. ಏಕೆಂದರೆ ಸಿದ್ದಗಂಗಾ ಮಠದ ಬಳಿ ರೈಲ್ವೆ ಹಳಿ ದುರಸ್ಥಿ ಕಾರ್ಯ ನಡೆಯುತ್ತಿದ್ದು ರೈಲನ್ನು ತುಮಕೂರಿನಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ತುಮಕೂರು: ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲು(Shivamogga to Bengaluru Express Train)ತುಮಕೂರಿನ ಸಿದ್ಧಗಂಗಾ ಮಠದ(Tumkur Siddaganga Mutt) ಬಳಿ ಏಕಾಏಕಿ ನಿಂತಿದ್ದು ಪ್ರಯಾಣಿಕರು ಗರಂ ಆಗಿದ್ದಾರೆ. ಮಾರ್ಗಮಧ್ಯೆ ಸಾವಿರಾರು ಪ್ರಯಾಣಿಕರನ್ನು ನಿಲ್ಲಿಸಿದ ರೈಲ್ವೆ ಇಲಾಖೆ(Indian Railways) ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮುಂದೆ ಹೋಗಲು ಆಗದೆ, ನಿಂತಲ್ಲೇ ನಿಲ್ಲಲೂ ಆಗದೆ ಗಂಟೆಗಟ್ಟಲೆ ಕಾದು ಕಾದು ಸಾವಿರಾರು ಪ್ರಯಾಣಿಕರು ರೋಸಿ ಹೋಗಿದ್ದಾರೆ. ಇನ್ನು ಪ್ರಯಾಣಿಕರ ಪ್ರಶ್ನೆಗೆ ಉತ್ತರಿಸಲಾಗದೆ ಕೌಂಟರ್ನಿಂದ ಸಿಬ್ಬಂದಿ ಕಾಲ್ಕಿತ್ತಿದ್ದು ಬೆಂಗಳೂರು-ತುಮಕೂರು ನಡುವೆ ಬೆಳಗ್ಗೆಯಿಂದ 19 ರೈಲು ಸಂಚಾರ ಸ್ಥಗಿತವಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಎಕ್ಸ್ಪ್ರೆಸ್ ರೈಲು ತುಮಕೂರಿನ ಮಾರ್ಗ ಮಧ್ಯೆ ನಿಂತಿದೆ. ಏಕೆಂದರೆ ಸಿದ್ದಗಂಗಾ ಮಠದ ಬಳಿ ರೈಲ್ವೆ ಹಳಿ ದುರಸ್ಥಿ ಕಾರ್ಯ ನಡೆಯುತ್ತಿದ್ದು ರೈಲನ್ನು ತುಮಕೂರಿನಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ರೈಲು ನಿಂತಿದ್ದು ಸಾವಿರಾರು ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಹಣ ಕೊಟ್ಟು ಟಿಕೆಟ್ ಖರೀದಿಸಿದರೂ ಸರಿಯಾದ ಸಮಯಕ್ಕೆ ಬೆಂಗಳೂರು ತಲುಪಲಾಗುತ್ತಿಲ್ಲ ಎಂದು ಆಕ್ರೋಶಗೊಂಡಿದ್ದಾರೆ.
ಇದನ್ನೂ ಓದಿ: Mangalore News: ಮಂಗಳೂರಿನ ತೋಕೂರು ಬಳಿ ಹಳಿ ತಪ್ಪಿದ ಅದಾನಿ ಗ್ರೂಪ್ಗೆ ಸೇರಿದ ರೈಲು
ಗಂಟೆಗಟ್ಟಲೇ ಕಾದುಕುಳಿತ ಪ್ರಯಾಣಿಕರು ಸುಸ್ತಾಗಿ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ. ಆದ್ರೆ ಪ್ರಯಾಣಿಕರಿಗೆ ಉತ್ತರ ಕೊಡಲಾಗದೆ ಸಿಬ್ಬಂದಿ ಕೌಂಟರ್ನಿಂದ ಕಾಲ್ಕಿತ್ತ ಪ್ರಸಂಗ ನಡೆದಿದೆ. ಅತ್ತ ಟಿಕೆಟ್ ಹಣವೂ ಇಲ್ಲದೇ, ಇತ್ತ ಬೆಂಗಳೂರಿಗೆ ಹೋಗಲೂ ಆಗದೇ ಪ್ರಯಾಣಿಕರು ಮಾರ್ಗ ಮಧ್ಯೆ ಸಿಲುಕಿದ್ದಾರೆ. ರೈಲ್ವೆ ಇಲಾಖೆಯ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ. ಬೆಂಗಳೂರು-ತುಮಕೂರು ನಡುವೆ ಮುಂಜಾನೆಯಿಂದ ಸುಮಾರು 19 ರೈಲುಗಳ ಸಂಚಾರ ಸ್ಥಗಿತಗೊಂಡಿದೆ.
ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ